
ಅದಿಲ್ಲದೆಯೋ ಇರಬಹುದೆಂಬುದು ಒಪ್ಪತಕ್ಕುದೇಯಾದರೂ, ತಂದೆ ಇಲ್ಲದೆ ಮಗುವನ್ನ ಪಡೆಯುವ ನಿರ್ಧಾರಗಳು ಸಮಾಜಕ್ಕೆ ನೀಡುವ ಸಂದೇಶವೇನು? ಎಂಬ ಪ್ರಶ್ನೆಯನ್ನು ಹುಟ್ಟು ಹಾಕದೇ ಇರದು. ಹೆಣ್ಣು ಗಂಡಿನ ಸಹವಾಸ ಬೇಡವೆಂದೋ,ಗಂಡು ಹೆಣ್ಣಿನ ಸಹವಾಸವೇ ಬೇಡವೆನ್ನುವ ಜಮಾನದಲ್ಲಿ ನಾವಿದ್ದೇವೆಯೇ ಎಂಬ ಆತಂಕ ಇನ್ನೊಂದು ಕಡೆ. ಕೂಡು ಕುಟುಂಬದಿಂದ ಒಡೆದು ಚೂರಾಗಿ, ವಿಭಕ್ತ ಕುಟುಂಬದತ್ತ ಸಾಗಿದ ಕಾಲಮಾನ ಕಳೆದು, ಗಂಡ ಹೆಂಡತಿ ಮಕ್ಕಳು ಕಲ್ಪನೆಯಲ್ಲಾದರೂ ಮನುಷ್ಯ ಸುಖವಾಗಿದ್ದಾನೆ ಬಿಡು ಎನ್ನುವಷ್ಟರಲ್ಲಿ, ಮಕ್ಕಳೇ ಬೇಡ ಗಂಡ ಹೆಂಡತಿ ಎನ್ನುವ ಚಿಂತನೆ ಬಂದು ನಿಂತದ್ದನ್ನು ಕಂಡೆವು.
ಈಗ ಹೊಸ ಟ್ರೆಂಡ್ ಗಂಡಿಲ್ಲದೆ ಮಕ್ಕಳೆತ್ತು ಸಾಕುವತ್ತ ಅಭಿವೃದ್ಧಿ ಹೊಂದಿದ ಚಿಂತನೆಗಳೊಂದಿಗೆ ಸಮಾಜ ಅರಳುತ್ತಿದೆಯೇ?
ನಟಿ ಭಾವನಾ ಈ ವಿಷಯದಲ್ಲಿ ಈಗ ಸುದ್ದಿಯಲ್ಲಿರುವ ನಟಿ. ಮದುವೆಯಾಗದೆ ತಂತ್ರಜ್ಞಾನದ ಮೂಲಕ ಅವಳಿ ಮಕ್ಕಳನ್ನು ಪಡೆಯುತ್ತಿರುವುದಾಗಿ ಘೋಷಿಸಿಕೊಂಡಿದ್ದಾರೆ. ಹೀಗೆ ಕೆಲ ನಟರು ಮದುವೆಯಾಗದೆ ಎರಡು ಮಕ್ಕಳ ತಂದೆಯಾದರು. ಇದು ಕನ್ನಡದಲ್ಲಿ ಹೊಸ ಸುದ್ದಿ ಅಷ್ಟೆ.
ಕಾಪಾಡುವ ಹುಚ್ಚಾಟದಲ್ಲಿ ರಕ್ತ ಮಾಂಸ ಬಸಿಯದೆ ಸುಸ್ತಿಲ್ಲದೆ ಅಮ್ಮ ಅಪ್ಪ ಆದವರೇ ಹೆಚ್ಚು. ಅದರೆ ಇವೆಲ್ಲ ಎಷ್ಟು ಸರಿ? ಇವರೆಲ್ಲ ಈ ಪೀಳಿಗೆಗೆ ಅಥವಾ ಮುಂಬರುವ ಪೀಳಿಗೆಗೆ ನೀಡುತ್ತಿರುವ ಸಂದೇಶದ ಬಗ್ಗೆ ಕಳವಳವಾಗುತ್ತಿದೆ. ನಮ್ಮ ಮನೆಯ ಮಕ್ಕಳೂ ನಾಳೆ ಇಂಹದ್ದೇ ನಿರ್ಧಾರಕ್ಕೆ ಬಂದರೆ ಆಶ್ಚರ್ಯವಿಲ್ಲ. ಸಂಧಿಗ್ಧ ಪರಿಸ್ಥಿತಿಗೆ ಬಳಸಬೇಕಾದ ಇಂತಹ ತಂತ್ರಜ್ಞಾನ ಮುಖ್ಯವಾಹಿನಿಗೆ ಬಂದು ನಿಂತರೆ ಪ್ರಕೃತಿಯ ವಿರುದ್ಧ ತೊಡೆ ತಟ್ಟಿದಂತೆಯೇ!
ಇತ್ತೀಚಿನ ಅಧಿಕ ಶಿಕ್ಷಿತ ಗಂಡಿಗೆ ಹೆಣ್ಣು, ಹೆಣ್ಣಿಗೆ – ಗಂಡು ಮ್ಯಾಚ್ ಮಾಡಿ ಮದುವೆ ಮಾಡುವುದು ದೊಡ್ಡ ತಲೆನೋವಾಗಿರುವ ಸಂದರ್ಭಗಳೊಂದಿಗೆ, ಕೂಡಿ ಬಾಳುವ ಸಂಯಮ ತೂರಿ ಹೋಗುತ್ತಿರುವ ಕಾಲದಲ್ಲಿ ಇಂತಹ ನಿರ್ಧಾರಗಳು ಎಳೆಯ ಮನಸ್ಸುಗಳನ್ನು ಬೇರೆಯದೇ ಆಲೋಚನೆಗೆ ತಳ್ಳುವುದರಲ್ಲಿ ಸಂಶಯವಿಲ್ಲ. ಇವರೇನೇ ಮಾಡಿಕೊಂಡರೂ ಮಾದ್ಯಮದ ಮೂಲಕ ಪ್ರಚಾರಕ್ಕೆ ನಿಲ್ಲದಿರಿ ಸಮಾಜ ಸುರಕ್ಷಿತವಾಗಿದ್ದೀತು. ಇದು ನನ್ನ ಖಾಸಗಿ ವಿಷಯವೆಂದು ಮೂಗು ಮುರಿಯುವುದಾದರೆ ನೀವೆಕೆ ಮಾದ್ಯಮಗಳ ಮುಂದೆ ಢಂಗೂರ ಸಾರುತ್ತೀರೋ ಅರಿಯೆವು.

(ಇನ್ನು ಕೆಲವರು ಕೇಳಬಹುದು ಗಂಡನನ್ನು/ಹೆಂಡತಿಯನ್ನು ಕಟ್ಟಿಕೊಂಡು ಯಾರು ಆರಾಮಾಗಿದ್ದಾರೆ? ಅಲ್ಲೆಲ್ಲೋ ವರದಕ್ಷಿಣೆಗೆ ಹೆಣ್ಣು ಬಲಿಯಾಗಿದ್ದಾಳೆ, ಇಲ್ಲೆಲ್ಲೋ ಮದುವೆಯಾಗಿ ಸುಖವಾಗಿರದೆ ನರಳುತ್ತಿದ್ದಾಳೆ ಇತ್ಯಾದಿ ಇತ್ಯಾದಿ ಹಲವು ಘಟನೆಗಳನ್ನು ನೆನಪಿಸಿ ಸಮರ್ಥಿಸಬಹುದು). ಆದರೆ ಇದು ಪ್ರಕೃತಿಯ ನಿಯಮ. ಗಂಡು ಹೆಣ್ಣೆಂಬ ಎರಡು ಜೀವಗಳ ಬಾಳ್ವೆಗೆ, ಸಮಾಗಮಕ್ಕೆ ನಾಂದಿಯಾಡುವ ಪದ್ಧತಿ. ಇದನ್ನೇ ನಿಮ್ಮ ಯಾವುದೋ ಸಮರ್ಥನೆ, ಕಾರಣಗಳಿಗೆ ರದ್ದತಿ ಮಾಡಿಕೊಂಡು, ಸೆಲೆಬ್ರಿಟಿ ಯಾದ ನೀವೊಬ್ಬರು ಜಯಿಸಿ ಬಿಡಬಹುದು. ಆದರೆ ಮುಂದಿನ ಪೀಳಿಗೆ ಇಂಥ ಹುಚ್ಚಾಟಕ್ಕಿಳಿದರೆ ಎಲ್ಲರೂ ನೆಮ್ಮದಿ ಇಂದಿರಲು ಸಾಧ್ಯವೇ? ಜೈವಿಕ ಚಕ್ರವೇ ಹಾಳಾದೀತಲ್ಲವೇ?
ತಾಯಿ ನಿನಗೆ ಒಂದು ದೊಡ್ಡ ನಮಸ್ಕಾರ ವಿನಾಶ ಕಾಲ ವಿಪರೀತ ಬುದ್ಧಿ ತಾಯಿ ನೀನೇನೋ ತಾಯಿ ಪ್ರೀತಿ ಕೊಡಬಹುದು ಆದ್ರೆ ಮಗು ಗೆ ಕೂಡ ತಂದೆ ಪ್ರೀತಿ ಬೇಕಲಮ್ಮ ಆ ಪ್ರೀತೀ ಕೊಡೋರು ಯಾರು ನಿನ್ ಸತ್ತೋಧ ಮೇಲೆ ಆ ಮಕ್ಕಳು ಈ ಸಮಾಜದಲ್ಲಿ ನರಕ್ ಯಾತನೆ ಅನುಭವಿಸಬೇಕು
ಸರ್ಕಾರ ಈ ಕೆಲಸ ಮಾಡಬಾರದು. ಸ್ವಭಾವಿಕ ಜೀವನ ಹಾಳುಮಾಡುವದು ಬೇಡ.

ಹೆಣ್ಣು ಗಂಡನ್ನು ಬೇರೆ ಬೇರೆಯಾಗಿ ಸೃಷ್ಟಿ ಮಾಡಿದ್ದರು, ಒಂದಾಗಲೂ ಇರುವದು ಒಂದು ಬಲಿಷ್ಠ ಮತ್ತು ಉತ್ತಮ ಮಾರ್ಗ ಲೈಂಗಿಕತೇ ಮತ್ತು ಮಾನವನ ಸೃಷ್ಟಿ.
ಇಲ್ಲವೆಂದರೆ ಒಂದಾಗಲೂ ಕುಟುಂಬ ಜೀವನ ಕಟ್ಟಿ ಕೊಳ್ಳಲು ಸಾಧ್ಯವಿಲ್ಲ.
ನಿಮ್ಮ ಮೂಲಕ ಸರ್ಕಾರಕ್ಕೆ ಹೇಳಿ,ಇದಕ್ಕಾಗೇ ಒಂದು ಕಾನೂನು ತರಲು .!
ಮದುವೆ-ಮುಂಜಿ ಅವಶ್ಯಕತೆನೇ ಇರೋದಿಲ್ಲ
ನಿನ್ನ ಗರ್ಭದಲ್ಲಿ ಹುಟ್ಟುವ ಮಕ್ಕಳು ಬಹುಶಃ ಹೆಣ್ಣಾಗಿ ಹುಟ್ಟಿದರೆ, ಅವರಿಗೂ ಮನೆ ಪಾಠ ಮಾಡಿ.
“ನಾನೂ ಹೀಗೇ… ನೀವು ಕೂಡಾ ಹಾಗೇ ಆಗಿ” ಎಂದು!
ಅವರ ಜೀವನದಲ್ಲೂ ನೈಜ ಸುಖ ಸಿಗುವುದೇ ಬೇಡ..!!!???
ನೀವು ಈ ಭೂಮಿಯ ಮೇಲೆ ಹೇಗೆ ಬಂದ್ರೀ..?
ಬಹುಶಃ ನೀವು ‘ಅಯೋನಿಜೆ’ ಇರಬಹುದು ಎಂದು ಭಾವಿಸಿದ್ದೇನೆ!?

ಮೊದಲೇ ಬಾಲಿವುಡ್ ಸಾಕಷ್ಟು ಸಮಾಜವನ್ನು ಮತ್ತು ಸಂಸ್ಕೃತಿಯನ್ನು ಹಾಳುಗೆಡವಿ ಆಗಿದೆ..ಇನ್ನೂ ನಿಂದೂ ಹೊಸ ವರಸೆ..ಇವತ್ತಿನ ಯುವಸಮಾಜ ಇದನ್ನು ಸಾಮಾನ್ಯವಾಗಿ ಪರಿಗಣಿಸಿ,ಕುಟುಂಬ ವ್ಯವಸ್ಥೆಯನ್ನು ತಿರಸ್ಕರಿಸಿ, ನಿನ್ನ ಹಾಗೆ ಈ ಕ್ರಮಕ್ಕೆ ಮುಂದಾದರೆ ಇದು ಸಮಾಜಿಕ ವ್ಯವಸ್ಥೆಗೆ ದೊಡ್ಡ ಗಂಡಾಂತರ.. ಏನೋ ನಿನಗೆ ಬೇಕಾಗಿ ಮಾಡಿದ್ದೀಯಾ ಅದನ್ನ ಇಷ್ಟೇಕೆ ಪ್ರಚಾರ ಮಾಡಿಕೊಳ್ಳುತ್ತಿರುವದು.. ಮೊದಲೆ ನೀನು ಸಲೇಬ್ರಿಟಿ ನಿನ್ನನ್ನು ನೋಡುವವರು, ಅನುಕರಣೆ ಮಾಡುವವರ ಸಂಖ್ಯೆ ಬಹಳಷ್ಟಿರುತ್ತದೆ..ಅಂತದರಲ್ಲಿ ಹೀಗೆ ಇದನ್ನು ಪ್ರಚಾರ ಮಾಡಬೇಡಾ…
ಹುಟ್ಟಿದ ಮಗು ಮಾನವ ಸಮಾಜದಲ್ಲಿ ಮತ್ತು ಮಾನವ ಸಂಬಂಧದಲ್ಲಿ ಜೀವನ ಮಾಡ ಬೇಕಾಗಿದೆ.ಹಣ, ಆಸ್ತಿ, ಅಧಿಕಾರದಿಂದ ಮಾತ್ರ ಜೀವನ ಮಾಡಲು ಸಾಧ್ಯವಿಲ್ಲ.
ಇದೊಂದು ಹುಚ್ಚು ಜ್ಞಾನ ಅಥವಾ ಅಜ್ಞಾನ.ಅಥವಾ ತಪ್ಪು ಜ್ಞಾನ.
ಹುಟ್ಟು ಮಕ್ಕಳನ್ನು ನೀವೇನೋ ತಂದೆ ತಾಯಿ ಇಬ್ಬರೂ ಆಗಿ ಬೆಳೆಸುವಿರಿ. ಆದರೆ ಆ ಹುಟ್ಟುವ ಮಕ್ಕಳಿಗೆ ಅಪ್ಪನ ಪ್ರೀತಿ ಬೇಡವೇ? ಸಮಾಜ ಕೇಳುವ ಪ್ರಶ್ನೆಗೆ ಉತ್ತರ ನೀಡುತ್ತಲೇ ಇರಬೇಕೆ? ಆದಾಗ್ಯೂ ಆ ಮಕ್ಕಳ ತಂದೆ ಪ್ರೀತಿ ಪಡೆಯುವ ಸ್ವಾತಂತ್ರವನ್ನು ನೀವು ಕಸಿದುಕೊಂಡಂತಲ್ಲವೇ? ದಯಮಾಡಿ ಯುವ ಪೀಳಿಗೆಯೇ ಇವರ ಈ ಹುಚ್ಚಾಟಗಳನ್ನು ಅನುಸರಿಸದಿರಿ.
ನವೀನ ಹೆಚ್ ಎ ಅಂಕಣಕಾರರು ಲೇಖಕರು
ಹನುಮನಹಳ್ಳಿ
ಕೆ ಆರ್ ನಗರ