21 ದಿನಗಳ ಕಾಲ ಧರಿಸುವ ಹನುಮಲೆಯನ್ನ ಧರಿಸಲು (Hanuma mala) ಶಾಲೆಯವರು ಅವಕಾಶ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ಇಡೀ ಗ್ರಾಮದವರು ಒಟ್ಟಾಗಿ ಶಾಲೆಯ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ . ಹೈದರಾಬಾದ್ ನ (Hydrabad) ಮದರ್ ತೆರೇಸಾ (Mother teresa) ಎಂಬ ಶಾಲೆಯಲ್ಲಿ ವಿದ್ಯಾರ್ಥಿಗಳು (students) ಹನುಮ ಮಾಲಾ ಧರಿಸಿ ,ಕೇಸರಿ ಶಾಲು ಧರಿಸಿ ಶಾಲೆಗೆ ಬಂದಿದ್ದರು. ಆದರೆ ಇದಕ್ಕೆ ಅವಕಾಶವಿಲ್ಲ ಎಂದು ಹೇಳಿ ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ವಾಪಸ್ ಕಳುಹಿಸಿತ್ತು.
ಶಾಲೆಯ ಪ್ರಾಂಶುಪಾಲರು ಏಪ್ರಿಲ್ 15 (April 15th) ರಂದು , ಕೆಲ ವಿದ್ಯಾರ್ಥಿಗಳು ಸಮವಸ್ತ್ರದ ಬದಲಿಗೆ ಧಾರ್ಮಿಕ ಉಡುಗೆಯನ್ನ ಧರಿಸಿರುವುದನ್ನು ಗಮನಿಸುತ್ತಾರೆ. ಹನುಮಾನ್ ದೀಕ್ಷಾ, 21 ದಿನಗಳ ವಿಶೇಷ ಧಾರ್ಮಿಕ ಆಚರಣೆಯ ಭಾಗವಾಗಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗೆ ಹಾಜರಾಗುತ್ತಿರುವುದನ್ನು ಕಂಡು, ಇದಕ್ಕೆ ಅವಕಾಶವಿಲ್ಲ ಎಂದು ಎಚ್ಚರಿಸಿ ಕಳುಹಿಸಿದ್ದರು. ಶಾಲೆಯ ಆವರಣದಲ್ಲಿ ಹನುಮಾನ್ ದೀಕ್ಷಾ ಧರಿಸಲು ಅವಕಾಶ ಇಲ್ಲ ಎಂದು ತಾಕೀತು ಮಾಡಿದ್ದರು.
ಈ ಮಾಹಿತಿ ತಿಳಿಯುತ್ತಿದ್ದಂತೆ ಅದೇ ಗ್ರಾಮದ ಸುಮಾರು 1000ಕ್ಕೂ ಹೆಚ್ಚು ಜನ ಗ್ರಾಮಸ್ಥರು ಶಾಲೆಯ ಆವರಣವನ್ನು ತಲುಪಿದರು. ಯಾವ ಕಾರಣಕ್ಕೆ ಹನುಮ ಮಾಲಾ ಧರಿಸಿದವರಿಗೆ ಶಾಲೆ ಪ್ರವೇಶ ನಿರಾಕರಿಸಿದ್ದೀರಿ ಎಂದು ಪ್ರಶ್ನೆ ಮಾಡಲು ಮುಂದಾದರು. ಕೆಲ ಉದ್ವಿಗ್ನಗೊಂಡ ಗ್ರಾಮಸ್ಥರು ಶಾಲೆಯ ಆಸ್ತಿಯನ್ನು ಧ್ವಂಸಗೊಳಿಸಲು ಮುಂದಾಗಿದ್ದರು. ಪರಿಸ್ಥಿತಿ ಕೈ ಮೀರಿದ ನಂತರ ಶಾಲೆಯ ಸಿಬ್ಬಂದಿ ಗ್ರಾಮಸ್ಥರನ್ನು ಕ್ಷಮೆ ಯಾಚಿಸಿದರು.
ಕೊನೆಗೂ ಗ್ರಾಮಸ್ಥರ ಆಕ್ರೋಶಕ್ಕೆ ಮಣಿದ ಶಾಲೆಯ ಆಡಳಿತ ಮಂಡಳಿ , ನೀವು ಹನುಮಾನ್ ಮಾಲಾ ಮತ್ತು ಸ್ಕಾರ್ಫ್ ಅನ್ನು (21 ದಿನಗಳವರೆಗೆ) ಧರಿಸಿಕೊಂಡು ಬರಬಹುದು. ಆದರೆ ಶಾಲಾ ಸಮವಸ್ತ್ರದೊಂದಿಗೆ ಧರಿಸಬಹುದು ಎಂದು ಒಪ್ಪಿಗೆ ನೀಡಿದಮೇಲೆ ಗ್ರಾಮಸ್ಥರ ಕೋಪ ತಣ್ಣಗಾಗಿದೆ. ಈ ಮೂಲಕ ಮತ್ತೊಮ್ಮೆ ಶಾಲೆಯಲ್ಲಿ ಧರ್ಮ ದಂಗಲ್ ಶುರುವಾಗುವ ವಾತಾರವಣ ಹೈದರಾಬಾದ್ ನ ಮದರ್ ತೆರೇಸಾ ಶಾಲೆಯಲ್ಲಿ ನಿರ್ಮಾಣವಾಗಿದೆ.