ಬಿಹಾರ್ :ಪ್ರೀತಿ ಅನ್ನೋದು ಇತ್ತೀಚಿನ ದಿನಗಳಲ್ಲಿ ಯಾವ ರೀತಿಯ ಅರ್ಥ ಪಡೆದುಕೊಳ್ಳುತ್ತಿದೆ ಅಂದರೆ, ಚಿತ್ರ-ವಿಚಿತ್ರ ಲವ್ ಸ್ಟೋರಿಗಳನ್ನು ನಾವು ಕೇಳುತ್ತಿದ್ದೇವೆ. 80ರ ವೃದ್ಧನನ್ನು 16ರ ಯುವತಿ ವಿವಾಹವಾಗುವುದು. 40ರ ಮಹಿಳೆಯ ಮೇಲೆ 20ರ ಯುವಕನಿಗೆ ಪ್ರೇಮವಾಗುವುದು.ಹೀಗೆ ವಯಸ್ಸಿನ ಹಂಗೇ ಇಲ್ಲದೇ, ಪ್ರೇಮಾಂಕುರವಾಗುತ್ತದೆ.
ಆದ್ರೆ ಭಾರತದಲ್ಲಿ ಸಲಿಂಗ ಕಾಮಕ್ಕೆ ಅವಕಾಶ ಸಿಕ್ಕ ಬಳಿಕ, ಈ ರೀತಿಯ ಹಲವು ಲವ್ ಸ್ಟೋರಿಗಳು ನಮ್ಮ ಮುಂದೆ ಬರುತ್ತಿದೆ. ಅಂಥದ್ದೇ ಒಂದು ಸಲಿಂಗ ಕಾಮದ ಲವ್ ಸ್ಟೋರಿ ಬಿಹಾರದಲ್ಲಿ ನಡೆದಿದೆ. ಆದ್ರೆ ಇದೆಷ್ಟು ವಿಚಿತ್ರವಾಗಿದೆ ಅಂದ್ರೆ, ಅತ್ತೆಯೊಬ್ಬಳು ತನ್ನ ಪತಿಯನ್ನೇ ತ್ಯಜಿಸಿ, ಸೊಸೆಯನ್ನು ವಿವಾಹವಾಗಿದ್ದಾಳೆ.
ಬಿಹಾರದ ಗೋಪಾಲ್ ಗಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸುಮನ್ ಎಂಬ ಮಹಿಳೆ ಶೋಭಾ ಎಂಬ ಸೊಸೆಗಾಗಿ ತನ್ನ ಪತಿಯನ್ನೇ ತೊರೆದಿದ್ದಾಳೆ. ಇವರಿಬ್ಬರು ಮೂರು ವರ್ಷಗಳ ಕಾಲ ತಾವಿಬ್ಬರು ಸಂಬಂಧದಲ್ಲಿದ್ದು, ಇದೀಗ ವಿವಾಹವಾಗಿದ್ದೇವೆ ಎಂದಿದ್ದಾರೆ.
बिहार के गोपालगंज से थोड़ा विचित्र मामला सामने आया है….
— Afroz Alam (@AfrozJournalist) August 12, 2024
जहां मामी और भांजी के बीच प्यार हो गया और दोनों ने जन्म-जन्म तक साथ रहने की कसमें खा ली।
मामी- भांजी ने पुरे रिती रेवाज के साथ शादी कर ली….#SameSexMarriage pic.twitter.com/AyDSUzKZBb
ಶೋಭಾ ಸುಮನ್‌ಗೆ ಸಂಬಂಧದಲ್ಲಿ ಸೊಸೆಯಾಗಬೇಕು.ಇವರಿಬ್ಬರು ಮೂರು ವರ್ಷದಿಂದ ರಿಲೆಶನ್‌ಶಿಪ್‌ನಲ್ಲಿದ್ದಾರೆ. ಇದೀಗ ವಿವಾಹವಾಗಿದ್ದು, ಬೇರೆಯವರ ಮಾತನ್ನು ಕೇಳಿ ನಮ್ಮ ನೆಮ್ಮದಿ ಹಾಳು ಮಾಡಿಕೊಳ್ಳಲು ನಮಗೆ ಮನಸ್ಸಿರಲಿಲ್ಲ. ಹಾಗಾಗಿ ನಾವು ಗಟ್ಟಿ ನಿರ್ಧಾರ ಮಾಡಿ, ವಿವಾಹವಾಗಿದ್ದೇವೆ ಎಂದು ಇವರಿಬ್ಬರು ಹೇಳಿದ್ದಾರೆ.