• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, February 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಒಟ್ಟಿಗೆ SSLC ಪರೀಕ್ಷೆ ಪಾಸು ಮಾಡಿದ ಮಂಗಳೂರಿನ ತಾಯಿ ಮಗಳ ಜೋಡಿ

Any Mind by Any Mind
May 24, 2022
in ಕರ್ನಾಟಕ
0
ಒಟ್ಟಿಗೆ SSLC ಪರೀಕ್ಷೆ ಪಾಸು ಮಾಡಿದ ಮಂಗಳೂರಿನ ತಾಯಿ ಮಗಳ ಜೋಡಿ
Share on WhatsAppShare on FacebookShare on Telegram

ಈ ವರ್ಷದ ಎಸ್ಎಸ್ಎಲ್‌ಸಿ‌ ಪರೀಕ್ಷೆಯಲ್ಲಿ  ಬರೋಬ್ಬರಿ 145 ವಿದ್ಯಾರ್ಥಿಗಳು 625ರಲ್ಲಿ 625 ಅಂಕಗಳನ್ನು ಪಡೆದಿದ್ದಾರೆ. ಶಿಕ್ಷಣದ ಗುಣಮಟ್ಟ, ಕಲಿಕಾ ಪ್ರಕ್ರಿಯೆಯ ಗುಣಮಟ್ಟ, ಮೌಲ್ಯಮಾಪನದ ಗುಣಮಟ್ಟದ ಬಗ್ಗೆ ಅಲ್ಲಲ್ಲಿ ಚರ್ಚೆ, ವಾದಗಳು ಕೇಳಿಬಂದರೂ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಎಲ್ಲೆಡೆಯಿಂದಲೂ ಪ್ರಶಂಸೆ ಹರಿದು ಬಂದಿದೆ. ಹೊಸ ವಿದ್ಯಾರ್ಥಿಗಳಲ್ಲದೇ ಹಲವು ಹಿರಿಯರೂ  ವಿದ್ಯೆ ಪಡೆದುಕೊಳ್ಳಲು, ಅರಿವು ಗಳಿಸಿಕೊಳ್ಳಲು ವಯಸ್ಸಿನ ಹಂಗಿಲ್ಲ ಎನ್ನುವಂತೆ ಪರೀಕ್ಷೆ ಬರೆದು ಪಾಸಾಗಿದ್ದಾರೆ. ಅವರಲ್ಲೊಬ್ಬರು ಮಂಗಳೂರಿನ‌ ಮಮತಾ.

ADVERTISEMENT

ಮಂಗಳೂರು ಸಮೀಪದ ಕುತ್ತಾರಿನ‌ ಉಚ್ಚಿಲದಲ್ಲಿ ಅಂಗನವಾಡಿ ಸಹಾಯಕರಾಗಿರುವ ಮಮತಾ  ಹೀಗೆ ಪಾಸಾಗಿ ಪರೀಕ್ಷೆ ಬರೆಯಬಯಸುವ ಹಿರಿಯರಿಗೆ ಸ್ಪೂರ್ತಿ ತುಂಬಿದ್ದಾರೆ. ಅಂಗನವಾಡಿ ಟೀಚರ್ ಆಗಲು ಇರಬೇಕಾದ ಕನಿಷ್ಠ ಅರ್ಹತೆ ಎಸ್ಎಸ್ಎಲ್‌ಸಿ ಪರೀಕ್ಷೆ ತೇರ್ಗಡೆಯಾಗೋದು. ಈಗ ಈ ಗುರಿಯನ್ನು ಸಾಧಿಸಿದ ಖುಶಿಯಲ್ಲಿದ್ದಾರೆ ಮಮತಾ.

ಜೈ ಹನುಮಾನ್ ಮಹಿಳಾ ಕ್ರೀಡಾ ಸಂಘಟನೆಯ ಸದಸ್ಯರೂ ಆಗಿರುವ ಇವರು ಇಪ್ಪತ್ತೊಂದು ವರ್ಷಗಳ ಹಿಂದೆ ವಿದ್ಯಾಭ್ಯಾಸ ನಿಲ್ಲಿಸಿದ್ದರು. “ಕೆಲವು ವರ್ಷಗಳ ನಂತರ, ನನಗೆ ಶಿಕ್ಷಣದ ಪ್ರಾಮುಖ್ಯತೆ ಅರಿವಾಯಿತು. ಅರಿತುಕೊಂಡೆ, ಮತ್ತು ನಾನು ಕನಿಷ್ಟ SSLC ಪರೀಕ್ಷೆಯಲ್ಲಾದರೂ ತೇರ್ಗಡೆಯಾಗಬೇಕು ಅಂದುಕೊಂಡೆ.  ಇದರಿಂದಾಗಿ ನಾನು ಅಂಗನವಾಡಿ ಶಿಕ್ಷಕರಾಗಿ ಬಡ್ತಿ ಪಡೆಯಬಹುದಿತ್ತು” ಎನ್ನುತ್ತಾರೆ ಮಮತಾ. 2018ರಲ್ಲಿ ಪರೀಕ್ಷೆ ಬರೆದು ನಾಪಾಸಾಗಿದ್ದ ಇವರು ಈಗ 283 ಅಂಕಗಳೊಂದಿಗೆ ಪಾಸಾಗಿದ್ದಾರೆ.

ಬಬ್ಬುಕಟ್ಟೆಯಲ್ಲಿನ ಹಿರಾ ಮಹಿಳಾ ಕಾಲೇಜಿನ ಉಪ ಪ್ರಾಂಶುಪಾರಾದ ಭಾಗೀರತಿ ಅವರ ಸಂಪರ್ಕಕ್ಕೆ ಬಂದ ನಂತರ ಮಮತಾ ತನ್ನ ಶಿಕ್ಷಣವನ್ನು ಮುಂದುವರೆಸಲು ನಿರ್ಧರಿಸಿದರು. “ಭಾಗೀರತಿ ಅವರು ಪರೀಕ್ಷೆಗಾಗಿ ತಯಾರಾಗಲು ನನಗೆ ಸಹಾಯ ಮಾಡಿದರು ಮತ್ತು ಪರೀಕ್ಷೆಗೆ ಕೊನೆಗೊಳ್ಳುವ ತನಕ ನಾನು ಅವರ ಮನೆಯಲ್ಲೇ ಇದ್ದೆ. ನಾನು ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿ ಪರೀಕ್ಷೆಯನ್ನು ಬರೆದು ಪಾಸಾಗಿದ್ದೇನೆ” ಎಂದು ಅವರು ಹೇಳುತ್ತಾರೆ..

ಮತ್ತೊಂದು ವಿಶೇಷವೆಂದರೆ ಮಮತಾ ಅವರ ಮಗಳು ಖುಶಿ ಸಹ ಈ ವರ್ಷದ ಹತ್ತನೇ ತರಗತಿ ವಿದ್ಯಾರ್ಥಿನಿ. ಅವರು 591 ಅಂಕಗಳೊಂದಿಗೆ ಪರೀಕ್ಷೆ ಪಾಸ್ ಮಾಡಿದ್ದಾರೆ. ತಾಯಿ ಮತ್ತು ಮಗಳು ಇಬ್ಬರೂ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಿದ್ದಂತೆ ಸಂಭ್ರಮಾಚರಣೆ ನಡೆಯಿತು.  “ಗಣಿತ ನನ್ನ ನೆಚ್ಚಿನ ವಿಷಯವಾಗಿತ್ತು ಮತ್ತು ನನಗೆ ಇಂಗ್ಲಿಷ್ ಕಠಿಣವಾಗಿತ್ತು. ಮನೆಯಲ್ಲಿ ನಾನು ಮತ್ತು ನನ್ನ ಮಗಳು ಇಬ್ಬರೂ ಒಟ್ಟಿಗೆ ಓದಿದ್ದೇವೆ. ನನ್ನ ಮಗಳು ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆದರೆ ನಾನು ಕನ್ನಡ ಭಾಷೆಯಲ್ಲಿ ಬರೆದಿದ್ದೇನೆ. ನನ್ನ ಕುಟುಂಬ ಸದಸ್ಯರು ನನಗೆ  ನೀಡಿದ ಬೆಂಬಲ ಅಪಾರ” ಎನ್ನುವ ಮಮತಾ .

“ನನ್ನ ಸುತ್ತಲಿನ ಜನರು ವಿದ್ಯಾವಂತರಾಗಬೇಕೆಂದು ನಾನು ಬಯಸುತ್ತೇನೆ.  ಆದ್ದರಿಂದ, ಜೈ ಹನುಮಾನ್ ಕ್ರೀಡಾ ಮಂಡಳಿಯ ಕೆಲವು ಸದಸ್ಯರು ಮಕ್ಕಳಿಗೆ ಉಚಿತ ಟ್ಯೂಷನ್ ನೀಡುವಲ್ಲಿ ತೊಡಗಿಸಿಕೊಂಡಿದ್ದೇವೆ” ಎಂದು  ಹೇಳುತ್ತಾರೆ.

Tags: BJPCongress PartyCovid 19ಕೋವಿಡ್-19ನರೇಂದ್ರ ಮೋದಿಬಿಜೆಪಿ
Previous Post

KGF 2 ನಂತರ 2 ಪ್ಯಾನ್ ಇಂಡಿಯಾ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಸಿದ್ದತೆ

Next Post

ಭಾರತ ಬದಲಾಗುತ್ತಿದೆ..!

Related Posts

ಕೋಗಿಲು ಒತ್ತುವರಿ ತೆರವು ವಿವಾದ: ಸಿಎಂ ಸಿದ್ದರಾಮಯ್ಯಗೆ ಸುದೀರ್ಘ ಪತ್ರ ಬರೆದ ಎನ್.ಆರ್ ರಮೇಶ್
Top Story

GBA Election 2026: ಟಿಕೆಟ್ ಆಕಾಂಕ್ಷಿಗಳ ದಿಕ್ಕು ತಪ್ಪಿಸದಿರಿ: ಸಿಎಂಗೆ ಎನ್‌.ಆರ್ ರಮೇಶ್‌ ಪತ್ರ

by ಪ್ರತಿಧ್ವನಿ
February 11, 2026
0

ಬೆಂಗಳೂರು :  ಬೆಂಗಳೂರು ಮಹಾನಗರ ಪಾಲಿಕೆಗಳ ಆಡಳಿತ ವ್ಯವಸ್ಥೆಗೆ ಅತ್ಯವಶ್ಯಕವಿರುವ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಟ್ಟ ನಂತರವಷ್ಟೇ ಮಹಾನಗರದ ಐದು ಪಾಲಿಕೆಗಳಿಗೆ ಚುನಾವಣೆ ನಡೆಸಲು ಸಾಧ್ಯ...

Read moreDetails
ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಹಿರಿಯ ನಟಿ ಸುಧಾರಾಣಿ ಆಯ್ಕೆ

ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಹಿರಿಯ ನಟಿ ಸುಧಾರಾಣಿ ಆಯ್ಕೆ

February 11, 2026
ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ

February 10, 2026
RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

February 8, 2026
ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

February 8, 2026
Next Post
ಭಾರತ ಬದಲಾಗುತ್ತಿದೆ..!

ಭಾರತ ಬದಲಾಗುತ್ತಿದೆ..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada