ದಿನದಿಂದ ದಿನಕ್ಕೆ ಟೆಕ್ನಾಲಜಿ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರು ಕೂಡ ಈ ಟೆಕ್ನಾಲಜಿಯನ್ನು ತುಂಬಾ ಚೆನ್ನಾಗಿದೆ ಬಳಸಿಕೊಳ್ಳುತ್ತಿದ್ದಾರೆ. ಇನ್ನು ಈ ಟೆಕ್ನಾಲಜಿ ಅಂತ ಬಂದಾಗ ಇದರಲ್ಲಿ ಇಯರ್ ಫೋನ್ ಹಾಗೂ ಹೆಡ್ ಫೋನ್ಗಳು ಸೇತುತ್ತದೆ.. ಇತ್ತೀಚಿನ ದಿನಗಳಲ್ಲಿ ಇಯರ್ ಫೋನ್ ಅನ್ನ ಹೆಚ್ಚಾಗಿ ಬಳಸುತ್ತಾರೆ. ಇಯರ್ ಫೋನ್ ಬಳಕೆ ಮನೋರಂಜನೆಯನ್ನು ನೀಡುತ್ತಿದೆ ಆದ್ರೆ ಅದರಿಂದ ಆಗ್ತಾ ಇರುವ ಆರೋಗ್ಯ ಸಮಸ್ಯೆಗಳು ಒಂದಲ್ಲ ಎರಡಲ್ಲ ಹಲವಾರು..ಈ ಹೆಡ್ ಫೋನ್ ನಮ್ಮ ಆರೋಗ್ಯಕ್ಕೆ ಯಾವ ರೀತಿ ತೊಂದರೆಯುಂಟು ಮಾಡುತ್ತಿದೆ ಎಂಬುವುದರ ಮಾಹಿತಿ ಹೀಗಿದೆ.

ಕಿವಿ ನೋವು ಹೆಚ್ಚಾಗುತ್ತದೆ
ಪ್ರತಿದಿನ ನಾವು ಹೆಡ್ಫೋನ್ಸ್ ಗಳನ್ನು ಬಳಸುವುದರಿಂದ ನಮ್ಮ ಕಿವಿಗಳ ಮೇಲೆ ಕೆತ್ತ ಪರಿಣಾಮವನ್ನು ಬೀರುತ್ತವೆ ಇದರಿಂದಾಗಿ ಕಿವಿ ನೋವು ಜಾಸ್ತಿ ಆಗುತ್ತದೆ. ಮೊದಲಿಗೆ ಕಿವಿ ನೋವಿಂದ ಆರಂಭವಾಗಿ ಮುಂದೆ ಹಲವಾರು ಕಿವಿ ಸೋಂಕಿಗೆ ದಾರಿ ಮಾಡಿಕೊಡುತ್ತದೆ.

ತಲೆನೋವು ಕಾಣಿಸಿಕೊಳ್ಳುತ್ತದೆ
ಪ್ರತಿ ದಿನ ಗಂಟೆಗಟ್ಟಲೆ ಇಯರ್ ಫೋನ್ ಅನ್ನ ಬಳಸುವವರಿಗೆ ಮೊದಲಿಗೆ ಕಿವಿ ನೋವು ಶುರುವಾಗುತ್ತದೆ ನಂತರ ಅರ್ಧ ತಲೆನೋವು ಹೆಚ್ಚಾಗುತ್ತದೆ. ಇದರ ಜೊತೆಗೆ ಕಣ್ಣುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಏಕಾಗ್ರತೆ ಕಡಿಮೆಯಾಗುತ್ತದೆ
ಕೆಲವೊಮ್ಮೆ ಹೆಡ್ ಫೋನ್ಸ್ ಅನ್ನ ಅತಿಯಾಗಿ ಬಳಸುವುದರಿಂದ ಯಾವುದರ ಮೇಲು ಕೂಡ ಕಾನ್ಸನ್ಟ್ರೇಷನ್ ಇರುವುದಿಲ್ಲ ನಾವು ಏಕಾಗ್ರತೆಯನ್ನು ಕಳೆದುಕೊಳ್ಳುವ ಸ್ಥಿತಿ ಎದುರಾಗುತ್ತದೆ. ಹಾಗೂ ಒಬ್ಬರು ಬಳಸಿದ ಹೆಡ್ ಫೋನ್ಸ್ ಅನ್ನ ಮತ್ತೊಬ್ಬರು ಬಳಸುವುದರಿಂದ ಇನ್ಫೆಕ್ಷನ್ ಹರಡುತ್ತದೆ.

ಕಿವುಡುತನ ಎದುರಾಗಬಹುದು
ಇಯರ್ ಫೋನ್ ಬಳಕೆಯಿಂದಾಗುವ ಸೈಡ್ ಎಫೆಕ್ಟ್ಸ್ ಹೆಚ್ಚಾಗಿದ್ದು.. ಕಿವಿ ಉರಿಯುವುದು ಕಿವಿ ಜುಮ್ ಎನ್ನುವುದು ಹಾಗೂ ಕೆಲ ದಿನಗಳ ನಂತರ ಕಿವುಡುತನಕ್ಕೂ ಕೂಡ ಇದು ಪ್ರಮುಖ ಕಾರಣವಾಗುತ್ತದೆ.
ಇದೆಲ್ಲದರ ಜೊತೆಗೆ ಮುಖ್ಯವಾಗಿ ಪ್ರಯಾಣ ಮಾಡುವಾಗ, ಗಾಡಿಯನ್ನು ಡ್ರೈವ್ ಮಾಡುವಾಗ ಇಯರ್ ಫೋನ್ಸ್ ಅಥವಾ ಹೆಡ್ಫೋನ್ಸನ್ನ ಹೆಚ್ಚು ಬಳಸುವುದರಿಂದ ಅಪಘಾತವಾಗುವ ಚಾನ್ಸಸ್ ಕೂಡ ಹೆಚ್ಚಿರುತ್ತದೆ