ಸುಪ್ರೀಂ ಕೋರ್ಟ್ನಲ್ಲಿ ಸುಮಾರು 71 ಸಾವಿರಕ್ಕು ಅಧಿಕ ಪ್ರಕರಣಗಳ ವಿಚಾರಣೆ ಬಾಕಿಯಿದ್ದು 10 ಸಾವಿರಕ್ಕು ಹೆಚ್ಚು ಪ್ರಕರಣಗಳು ಇತ್ಯರ್ಥ್ಯ ಬಾಕಿ ಉಳಿದಿವೆ ಎಂದು ಗುರುವಾರ ರಾಜ್ಯಸಭೆಗೆ ತಿಳಿಸಲಾಗಿದೆ.
ಈ ಕುರಿತು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿರುವ ಕಾನೂನು ಸಚಿವ ಕಿರಣ್ ರಿಜಿಜು ಆಗಷ್ಟ್ 2ರವರೆಗೆ ಒಟ್ಟು 71,411 ಪ್ರಕರಣಗಳ ವಿಚಾರನೆ ಬಾಕಿಯಿದ್ದು ಇದರಲ್ಲಿ 50,000 ಸಾವಿರಕ್ಕು ಹೆಚ್ಚು ವಿಷಯಗಳು ಸಿವಿಲ್ಗೆ ಸಂಬಂಧಿಸಿದ್ದು 15,000ಕ್ಕೂ ಹೆಚ್ಚು ವಿಚಾರಗಳು ಕ್ರಿಮಿನಲ್ ವಿಚಾರಕ್ಕೆ ಸಂಬಂಧಿಸಿದ್ದು ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಇದರಲ್ಲಿ 10,491 ಪ್ರಕರಣಗಳು ಕಳೆದ ಒಂದು ದಶಕದಿಂದ ಇತ್ಯರ್ಥವಾಗದೆ ಬಾಕಿ ಉಳಿದಿದೆ. 42,000 ಸಾವಿರ ಪ್ರಕರಣಗಳು ಕಳೆದ ಐದು ವರ್ಷದಿಂದ ಬಾಕಿ ಉಳಿದಿವೆ ಎಂದಿದ್ದಾರೆ.








