ಕೇರಳದಲ್ಲಿ ಭಾರತದ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಕೇರಳ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ತೀವ್ರ ನಿಘಾವಹಿಸಲು ಸೂಚಿಸಲಾಗಿದೆ. ಇದರ ನಡುವೆಯೇ, ಏಮ್ಸ್ ವೈದ್ಯರು ಮಹತ್ವದ ಸೂಚನೆ ನೀಡಿದ್ದಾರೆ.
ಹೌದು, ಮಂಕಿಪಾಕ್ಸ್ ಪ್ರಕರಣದ ಕುರಿತು ಆತಂಕಗೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ. ಆದರೆ ಮಕ್ಕಳಿಗೆ ಮಂಕಿಪಾಕ್ಸ್ ಮಾರಕವಾಗಬಹುದು. ಮಕ್ಕಳಿಗೆ ಈ ವೈರಸ್ ಕೋವಿಡ್ಗಿಂತ ಅಪಾಯಕಾರಿಯಾಗಿದೆ ಎಂದು ಏಮ್ಸ್ನ ಮೆಡಿಸಿನ್ ಅಡೀಶನಲ್ ಪ್ರೋಫೆಸರ್ ಪಿಯೂಷ್ ರಂಜನ್ ಹೇಳಿದ್ದಾರೆ.
ಭಾರತದಲ್ಲಿ ಮಂಕಿಪಾಕ್ಸ್ ಹಡುವಿಕೆ ಪ್ರಮಾಣ ಕಡಿಮೆ.ವಯಸ್ಕರು ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ. ಆದರೆ, ಮಂಕಿಪಾಕ್ಸಾ ಕಾಣಿಸಿಕೊಂಡ ವ್ಯಕ್ತಿಗಳಲ್ಲಿ ಜ್ವರ ಕಾಣಿಸಿಕೊಳ್ಳಲಿದೆ. 1 ರಿಂದ 5 ದಿನದರೆಗೆ ಜ್ವರ ಕಾಣಿಸಿಕೊಳ್ಳಲಿದ್ದು, ಬಳಿಕ ಚಿಕನ್ಪಾಕ್ಸ್ ರೀತಿಯಲ್ಲಿ ದೇಹದಲ್ಲಿ ಗುಳ್ಳೆ ಅಥವಾ ಕಜ್ಜಿ ರೀತಿಯಲ್ಲಿ ಕಾಣಿಸಿಕೊಳ್ಳಲಿದೆ. ಹೀಗಾಗಿ ಜ್ವರ ಕಾಣಿಸಿಕೊಂಡ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳಲು ಪಿಯೂಷ್ ರಂಜನ್ ಸೂಚಿಸಿದ್ದಾರೆ.