ಮೈಸೂರು:ಮಾ.27: ಮೈಸೂರಿನಲ್ಲಿ ಪಂಚರತ್ನಯಾತ್ರೆಯ ಸಮಾರೂಪ ಸಮಾರಂಭ ಯಶಸ್ವಿಯಾಗಿದ್ದು, ಇದನ್ನ ರಾಜ್ಯದ ಜನತೆ ಅರ್ಪಿಸುತ್ತೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ..
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಂಚರತ್ನ ಯಾತ್ರೆಯ ಯಶಸ್ಸನ್ನು ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕಾರ್ಯಕ್ರಮಕ್ಕೆ ರಾಜ್ಯದ ಹಲವರು ಜಿಲ್ಲೆಗಳಿಂದ ಕಾರ್ಯಕರ್ತರು ಆಗಮಿಸಿದ್ರು. KSRTC, BMTC ಹಾಗೂ ಕೆಲವು ಖಾಸಗಿ ಬಸ್ ಗಳ ಮಾಲೀಕರು ಚಾಲಕರು ಸಹಕಾರ ನೀಡಿದ್ದಾರೆ. ಪೊಲೀಸ್ ಇಲಾಖೆ, ಹೋಮ್ ಗಾರ್ಡ್ಸ್ ಸಿಬ್ಬಂದಿ ವರ್ಗ ಯಶಸ್ಸಿಗೆ ಸಹಕಾರ ನೀಡಿದ್ದಾರೆ. ಸಹಕಾರ ಕೊಡದಿದ್ರೆ ಯಶಸ್ಸು ಕಾಣಲು ಸಾಧ್ಯವಾಗುತ್ತಿರಲಿಲ್ಲ. ಏಪ್ರಿಲ್ ವರೆಗೂ ಪಂಚರತ್ನ ಯಾತ್ರೆ ಮುಂದುವರಿಯಲಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ನಾಳೆಯಿಂದ ಯಾತ್ರೆ ಆರಂಭ..! ಪಂಚರತ್ನ ರಥಯಾತ್ರೆಯ ಮುಂದುವರಿದ ಭಾಗವಾಗಿ ನಾಳೆಯಿಂದ ಆರಂಭವಾಗಲಿದೆ. ಪಿರಿಯಾಪಟ್ಟಣ, ಕೆ.ಆರ್. ನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ಹೆಚ್. ಡಿ.ಕೋಟೆ ತಾಲೂಕುಗಳಿಗೆ ಏಪ್ರಿಲ್ 10ರ ಒಳಗೆ ಭೇಟಿ ನೀಡುತ್ತೇನೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸಂವಿದಾನ ಸಮಾಧಿ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ; ಸಂವಿದಾನವನ್ನೇ ಸಮಾಧಿ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ನಮ್ಮನ್ನು ಸಮಾಧಿಮಾಡಲು ಹೊರಟಿದ್ದಾರೆ ಎಂದು ಮೋದಿ ಹೇಳುತ್ತಾರೆ. ಒಬ್ಬ ಪ್ರಧಾನ ಮಂತ್ರಿಯಾಗಿ ಸಾರ್ವಜನಿಕವಾಗಿ ಹೀಗೆ ಹೇಳುತ್ತಾರೆ. ಕನ್ನಡಿಗರು ಕಷ್ಟದಲ್ಲಿದ್ದಾಗ ಇತ್ತ ನೋಡಲಿಲ್ಲ. ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಯಿತು. ರಾಜ್ಯದಲ್ಲಿ ಪ್ರವಾಹ ಬಂದು ಸಾಕಷ್ಟು ಸಾವು-ನೋವು ಸಂಭವಿಸಿತ್ತು. ಈ ಸಮಯದಲ್ಲಿ ಸೌಜನ್ಯಕ್ಕಾದ್ರು ಪ್ರಧಾನಿ ಮೋದಿ ಇಲ್ಲಿಗೆ ಬಂದು ನೋಡಲಿಲ್ಲ. ಇಂತವರು ಇಂದು ಕನ್ನಡಿಗರ ಮುಂದೆ ನಮ್ಮನ್ನು ಉಳಿಸಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಚುನಾವಣೆ ಸಮೀಪದಲ್ಲಿರುವಾಗ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಜನರಿಗೆ ಟೋಪಿ ಹಾಕುವ ಕೆಲಸ ಬಿಜೆಪಿಗರಿಂದ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಶಾಶ್ವತ ಕಾರ್ಯಕ್ರಮ ತರಬೇಕು ಎಂದು ಪಂಚರತ್ನ ತಂದಿದ್ದೇನೆ ಎಂದು ಹೆಚ್ ಡಿಕೆ ಹೇಳಿದ್ದಾರೆ..
ಬಿಜೆಪಿಗರು ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ: ಮೀಸಲಾತಿ ಘೋಷಣೆ ಮಕ್ಕಳಾಟಿಕೆ ಆಗಿದೆ. ಯಾವ ಆಧಾರದ ಮೇಲೆ ಮೀಸಲಾತಿ ಘೋಷಣೆ ಮಾಡಿದ್ದಾರೆ? ಎಂದು ಪ್ರಶ್ನಿಸಿದ ಹೆಚ್ ಡಿಕೆ, ಮೀಸಲಾತಿ ಹೆಸರಿನಲ್ಲಿ ಹೂ ಮುಡಿಸಲು ಹೊರಟ್ಟಿದ್ದಾರೆ. ಇದು ಕಾರ್ಯರೂಪಕ್ಕೆ ಬರಲ್ಲ. ಬಿಜೆಪಿಗರು ದೇಶ ಒಡೆದು ಹಾಳುವ ನೀತಿ ಮತ್ತು ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಹಿಂದೂ, ಮುಸ್ಲಿಂ ನಡುವೆ ಸಂಘರ್ಷವಾದರೆ ಮತ ಕ್ರೂಢೀಕರಣ ಆಗುತ್ತೆ ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ನಾನು ಒಂದು ಹಳ್ಳಿಯಲ್ಲಿ ಮಾಡಿದ ರೋಡ್ ಶೋ ಗೆ, ಮೋದಿ ಅವರ ರೋಡ್ ಶೋ ಸಮವಲ್ಲ: ಮೈಸೂರಿನಲ್ಲಿ ನಡೆದ ಜೆಡಿಎಸ್ ಸಮಾವೇಶಕ್ಕೆ ಸುಮಾರು 8 ಲಕ್ಷಕ್ಕೂ ಅಧಿಕ ಜನ ಬಂದಿದ್ದರು. ನಾನು ಒಂದು ಹಳ್ಳಿಯಲ್ಲಿ ಮಾಡಿದ ರೋಡ್ ಶೋ ಗೆ, ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಸಮವಲ್ಲ ಎಂದು ಟೀಕಿಸಿದರು. ಕಾಂಗ್ರೆಸ್ 70-75 ಸ್ಥಾನ ದಾಟಲ್ಲ, ಹಲವರು ಭಾಗ್ಯ ಕೊಟ್ಟು 130ರಿಂದ 79ಕ್ಕೆ ಬಂದವರು. ಕೆಟ್ಟ ಸರ್ಕಾರ ತರಲು ಕಾಂಗ್ರೆಸ್ ಕಾರಣ. 19 ಸಾವಿರ ಕೋಟಿ ರೂ ಕಾಂಗ್ರೆಸ್ ಶಾಸಕರಿಗೆ ಅನುದಾನ ಕೊಟ್ಟಿದ್ಷಾರೆ. ಕೇಂದ್ರ ಸಚಿವ ಅಮಿತ್ ಶಾ ನಿನ್ನೆ ಮೀಟಿಂಗ್ ಮಾಡಿದ್ದ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ತಾನೇ? ನಾನು ವೆಸ್ಟ್ ಎಂಡ್ ಹೋಟೆಲ್ ನಲ್ಲಿದ್ದೆ ಅಂತಾ ದೊಡ್ಡದಾಗಿ ಚರ್ಚೆ ಮಾಡಿದರು. ಸಿದ್ದರಾಮಯ್ಯ ಎರಡಲ್ಲೂ ನಿಲ್ಲಬಹುದು ಮೂರರಲ್ಲೂ.. ಕಾಂಗ್ರೆಸ್ ನ ಒಳಜಗಳದ ಜೊತೆಗೆ ಸಿದ್ದರಾಮಯ್ಯ ಅವರಿಗೆ ಅವರ ಮೇಲೆ ನಂಬಿಕೆಯಿಲ್ಲ. ಹೀಗಾಗಿ ಬೇರೆ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ಧಾರೆ. ಸಿದ್ದರಾಮಯ್ಯನವರ ಹೈಕಮಾಂಡ್ ಮನೆಯಲ್ಲಿದೆ ಎಂದು ಹೆಚ್ ಡಿಕೆ ಟೀಕಿಸಿದರು.
ನಾವು 123 ಕ್ಷೇತ್ರ ಗೆದ್ದೇ ಗೆಲ್ಲುತ್ತೇವೆ. ನಾವು ಯಾವುದೇ ಶ್ರಮ ಹಾಕದಿದ್ಧರೂ ಕನಿಷ್ಠ 50 ಕ್ಷೇತ್ರಗಳನ್ನು ಗೆಲ್ಲುತ್ತೇವೆ. 123 ಕ್ಷೇತ್ರ ಗೆಲ್ಲಲೇ ಬೇಕೆಂದು ಹೆಚ್ಚಿನ ಶ್ರಮ ಹಾಕುತ್ತಿದ್ದೇವೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮೈಸೂರಿನಲ್ಲಿ ಹೇಳಿದ್ದಾರೆ.