ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು , ಸಾರ್ವಭೌಮತ್ವಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಕೇದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ನುಡಿದರು. ಮೋದಿಯವರು ಸಮಸ್ತ ದೇಶದ ಅಭಿವೃದ್ಧಿಯ ಹರಿಕಾರರಾಗಿದ್ದು , ದೇಶದ ಮೂಲೆ ಮೂಲೆಯ ಹಳ್ಳಿಗಳ ಸರ್ವತೋಮುಖ ಶ್ರೇಯೋಭಿವೃದ್ದಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ರಾಷ್ಟ್ರದ ಎಲ್ಲಾ ರಾಜ್ಯಗಳಿಗೂ , ಸಮಾನ ಪ್ರಾತಿನಿಧ್ಯ ನೀಡುತ್ತಿದ್ದು ಅದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ ಎಂದು ನುಡಿದರು. ಅವರು ತಾಲೂಕಿನ ಗುಡೇಕೋಟೆ ಹೋಬಳಿ ವ್ಯಾಪ್ತಿಯ ಕಸಾಪುರ ಗ್ರಾಮದಲ್ಲಿ , ಹುಣುಸೇ ಸಂಸ್ಕರಣಾ ಘಟಕ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ಎಂ ಪಿ ಲಾಕ್ಸ್ ನಬಾರ್ಡ್ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯ ಸಹಕಾರದಿಂದ ,ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಾಗಿರುವ. ಹಿಂದುಳಿದ ತಾಲೂಕಾದ ಕೂಡ್ಲಿಗಿ ಕ್ಷೇತವನ್ನು , ಅಭಿವೃದ್ಧಿಯತ್ತ ಕೊಂಡೊಯ್ಯಲು ಕೇಂದ್ರ ಸರ್ಕಾರ ಆಯ್ಕೆ ಮಾಡಿಕೊಂಡಿದೆ ಎಂದರು.

ಹುಣುಸೆ ಸಂಸ್ಕರಣೆ ಘಟಕವು 4.35 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದು, ಈ ಹುಣಸೆ ಹಣ್ಣಿನ ಹಾಗೂ ಶೇಂಗಾ ಸಂಸ್ಕರಣ ಘಟಕವು ರಾಜ್ಯದಲ್ಲಿ ಮೊದಲನೆಯದ್ದಾಗಿದೆ. ಕೂಡ್ಲಿಗಿ ತಾಲೂಕು ಅತಿ ಹೆಚ್ಚು ಹುಣುಸೆ ಬೆಳೆಯೋ ನಾಡಾಗಿದ್ದು , ತಾಲೂಕಿನ ಎಲ್ಲಾ ರೈತರಿಗೆ ತುಂಬಾ ಅನುಕೂಲವಾಗಲಿದೆ. ಮತ್ತು ನೆರೆ ಹೊರೆಯ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದ , ಹಾಗೂ ನಾಡಿನ ಎಲ್ಲಾ ರೈತರಿಗೂ ತುಂಬಾ ಉಪಯುಕ್ತ ವಾಗಿದೆ ಎಂದರು. ಈ ಸಂದರ್ಭದಲ್ಲಿ ಬಾರ್ಡಿನ ಚೇರ್ಮನ್ ರವರು ರೈತರು ಹಾಗೂ ಹುಣಸೆ , ಮತ್ತು ಶೇಂಗಾ ಸಂಸ್ಕರಣ ಘಟಕ ಕುರಿತು ಉದ್ದೇಶಿಸಿ ಮಾತನಾಡಿದರು.

ಕ್ಷೇತ್ರದ ಶಾಸಕರಾದ ಡಾ ಎನ್ ಟಿ ಶ್ರೀನಿವಾಸ್ ಮಾತನಾಡಿ, ತಾಲೂಕಿನ ಗ್ರಾಮೀಣ ರೈತರ ಹಾಗೂ ಶಿಕ್ಷಣ ಬೆಳವಣಿಗೆಗೆ. ಮತ್ತು ಮಹಿಳೆಯರ ಸಬಲೀಕರಣದ ಕುರಿತು ಮಾತನಾಡಿ , ತಾಲೂಕಿನಲ್ಲಿರುವ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳಿಗೆ ಶಿಕ್ಷಣಾತ್ಮಕವಾಗಿ ಅನುಕೂಲವಾಗುವಂತೆ. ಏಕಲವ್ಯ ಮಾದರಿ ಶಾಲೆಯನ್ನು ತೆರೆಯಲು , ಕೇಂದ್ರ ಸಚಿವೆ ನಿರ್ಮಲ ಸೀತಾರಾಮ್ ರವರಿಗೆ ವೇದಿಕೆಯಲ್ಲಿ ಮನವಿ ಮಾಡಿದರು.

ತಾಲೂಕಿನಲ್ಲಿ ಬಾಲ್ಯ ವಿವಾಹ , ದೇವದಾಸಿ ಪದ್ಧತಿಯಂತ , ಸಾಮಾಜಿಕ ಅನಿಷ್ಠ ಪಿಡುಗುಗಳ ನಿರ್ಮೂಲನೆ ಗೊಳಿಸುವ ಅಗತ್ಯತೆಯನ್ನು ತಿಳಿಸಿದರು. ತಾಲೂಕಿನಲ್ಲಿ ಅತಿ ಹೆಚ್ಚಾಗಿ ಅಪೌಷ್ಟಿಕತೆ , ಮತ್ತು ಗುಣಮಟ್ಟದ ಶಿಕ್ಷಣ ಆರೋಗ್ಯ ಸೌಲಭ್ಯಗಳು ಮಹಿಳೆಯರಲ್ಲಿ ರಕ್ತ ಹೀನತೆಯಂತಹ ಸಮಸ್ಯೆ ಗಳ ನಿವಾರಣೆ ಒತ್ತು ಕೊಡುವುದಾಗಿ ತಿಳಿಸಿದರು. ಸಂಸದರಾದ ಈ ತುಕಾರಾಂ ಮಾತನಾಡಿ , ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಅಭಿವೃದ್ಧಿಯ ವಿಷಯವಾಗಿ ಕುರಿತು ಹಲವು ಬೇಡಿಕೆಗಳನ್ನು ಕೇಂದ್ರ ಸಚಿವರಲ್ಲಿ ಮನವಿ ಮಾಡಿದರು.
ವೇದಿಕೆಯಲ್ಲಿ ಹರಪನಹಳ್ಳಿ ತಾಲೂಕಿನ ಶಾಸಕರಾದ ಶ್ರೀ ಮತಿ ಲತಾ ಮಲ್ಲಿಕಾರ್ಜುನ , ಹಾಗೂ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ. ಸೇರಿದಂತೆ ಎಲ್ಲಾ ಇಲಾಖೆಗಳ ಜಿಲ್ಲಾಧಿಕಾರಿಗಳು.ಕೂಡ್ಲಿಗಿ ತಾಲೂಕಿನ ತಹಶೀಲ್ದಾರಾದ ವಿಕೆ ನೇತ್ರಾವತಿ ರವರು ಸೇರಿದಂತೆ , ತಾಲೂಕು ಅಧಿಕಾರಿಗಳು. ಕ್ಷೇತ್ರದ ಎಲ್ಲಾ ಜನಪ್ರತಿನಿಧಿಗಳು , ಹಾಗೂ ಅನೇಕ ಗಣ್ಯರು ಭಾಗವಹಿಸಿದ್ದರು.

