ಬೆಂಗಳೂರಿನಲ್ಲಿ (Bengalore) ಕಾರ್ಯಕ್ರಮ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ವಾಪಸ್ ತೆರಳುವ ಸಂದರ್ಭದಲ್ಲಿ ಮೇಕ್ರಿ ಸರ್ಕಲ್ (mekri circle) ಸಮೀಪ ದೊಡ್ಡ ಹೈಡ್ರಾಮುವೇ (Highdrama) ನಡೆದು ಹೋಗಿದೆ . ಯೂಥ್ ಕಾಂಗ್ರೆಸ್ ಪ್ರೆಸಿಡೆಂಟ್ ನಲಪಾಡ್ (Nalapad) ಕೆಲವೊಂದಿಷ್ಟು ಕಾಂಗ್ರೆಸ್ ಕಾರ್ಯಕರ್ತರ ಜೊತೆಗೂಡಿ ಪ್ರಧಾನಿ ನರೇಂದ್ರ ಮೋದಿ ವಾಹನ ರಸ್ತೆ ಮಾರ್ಗವಾಗಿ ಬರುವ ಸಂದರ್ಭದಲ್ಲಿ ಚೊಂಬು ಪ್ರದರ್ಶಿಸಲು ಮುಂದಾಗಿದ್ದರು.

ಪ್ರಧಾನಿ ನರೇಂದ್ರ ಮೋದಿ (Narendra modi) ಬೆಂಗಳೂರು ಆಗಮನದ ಹಿನ್ನೆಲೆ ,ಬರ ಪರಿಹಾರ ,ತೆರಿಗೆ ಪಾಲು ಪ್ರತಿ ವಿಚಾರದಲ್ಲೂ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಚೊಂಬಿನ ಪೋಸ್ಟರ್ ಬಿಟ್ಟು ಪ್ರತಿಭಟನೆಗೆ ಮುಂದಾಗಿತ್ತು . ಬೆಳಗ್ಗೆ ಕೂಡ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಚಿವಾಲಾ (Randeep surjewala) ನೇತೃತ್ವದಲ್ಲಿ ಮೇಕ್ರಿ ಸರ್ಕಲ್ ಸಮೀಪ ಕಾಲಿಚೊಂಬು ಪ್ರದರ್ಶಿಸಿ ಪ್ರತಿಭಟನೆಗೆ ಮುಂದಾಗಿದ್ದರು . ಆ ಸಂದರ್ಭದಲ್ಲಿ ಪೊಲೀಸರು ಎಲ್ಲಾ ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದಿದ್ದರು.

ಚಿಕ್ಕಬಳ್ಳಾಪುರದ(Chikkaballapur )ಸಮಾವೇಶ ಮುಗಿಸಿ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ ನಿಗದಿತ ಕಾರ್ಯಕ್ರಮಗಳನ್ನ ಮುಗಿಸಿ ವಿಮಾನ ನಿಲ್ದಾಣದ (Airport) ಕಡೆಗೆ ತೆರಳುವ ಸಂದರ್ಭದಲ್ಲಿ ಮೇಕ್ರಿ ಸರ್ಕಲ್ ಸಮೀಪ ನಳಪಾಳ್ ಮತ್ತು ತಂಡ ಕೈಯಲ್ಲಿ ಖಾಲಿ ಚೊಂಬನ್ನು ಹಿಡಿದು ಪ್ರಧಾನಿ ವಾಹನ ಸಾಗುತ್ತಿದ್ದ ರಸ್ತೆಗೆ ಅಡ್ಡಲಾಗಿ ಬಂದು , ಚಂಬು ಪ್ರದರ್ಶಿಸುವ ಪ್ರಯತ್ನ ಮಾಡಿದ್ದಾರೆ . ತಕ್ಷಣವೇ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಅಲರ್ಟ್ ಆಗಿ ಈ ಎಲ್ಲಾ ನಾಯಕರನ್ನು ವಶಕ್ಕೆ ಪಡೆದಿದ್ದಾರೆ.
ಮತ್ತೊಂದು ಕಡೆ ಇದೇ ವಿಚಾರವಾಗಿ ಟ್ವೀಟ್ (Tweet) ಮಾಡಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಚವಾಲ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಚಿಕ್ಕಬಳ್ಳಾಪುರದ ವೇದಿಕೆಯ ಮೇಲೆ ಕಾಂಗ್ರೆಸ್ ನೀಡಿದ ಚೊಂಬಿನ ಜಾಹೀರಾತಿನ ಪ್ರದರ್ಶನ ಮಾಡಿದ ಫೋಟೋ ಹಂಚಿಕೊಂಡು , ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಕೊಟ್ಟ ಚೊಂಬಿನ ವಾಸ್ತವತೆಯನ್ನು ಎದುರಿಸಿದ್ದಾರೆ ಅಂತ ಪೋಸ್ಟ್ ಮಾಡಿ ವ್ಯಂಗ್ಯವಾಡಿದ್ದಾರೆ.
ಒಟ್ನಲ್ಲಿ ಕಾಂಗ್ರೆಸ್ (congress) ಖಾಲಿ ಚೊಂಬಿನ ಪ್ರತಿಭಟನೆ ಬೆಂಗಳೂರಿನಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿತ್ತು . ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಪ್ರತಿನಿಧಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಾಳಯ ಹಮ್ಮಿಕೊಂಡಿದ್ದ ಚೊಂಬಿನ ಪ್ರತಿಭಟನೆ ,ನಲಪಾಡ್ ಮತ್ತು ತಂಡದ ಈ ಯತ್ನದ ಮೂಲಕ ಅತಿರೇಕಕ್ಕೆ ತಿರುಗಿದೆ.