ನೈಲ್ ಪೋಲಿಷ್ ಅಂತ ಹೇಳಿದ್ರೆ ಯಾರಿಗ್ ತಾನೇ ಇಷ್ಟ ಆಗಲ್ಲ.. ಎಲ್ಲರೂ ಕೂಡ ತುಂಬಾನೇ ಇಷ್ಟಪಟ್ಟು ತಮಗೆ ಇಷ್ಟವಾದ ಕಲರ್ ಅಥವಾ ತಮ್ಮ ಡ್ರಸ್ಸಿಗೆ ಮ್ಯಾಚ್ ಆಗುವಂತ ಕಲರ್ ಅನ್ನ ನೈಲ್ ಗೆ ಹಚ್ಕೊಳ್ತಾರೆ.. ನೇಲ್ ಪೋಲಿಷ್ ಅಂತ ಬಂದಾಗ ಲೈಟ್ ಕಲರ್ಸ್, ಡಾರ್ಕ್ ಕಲರ್ ಮ್ಯಾಟ್ ಫಿನಿಶಿಂಗ್ ಅಬ್ಬಬ್ಬಾ ಸಾಕಷ್ಟಿದೆ..

ನೇಲ್ ಪಾಲಿಷ್ ಹಚ್ಚುವುದಕ್ಕೆ ಸ್ವಲ್ಪ ಕಷ್ಟ ಆಗಬಹುದು ಆದರೆ ರಿಮೂವ್ ಮಾಡೋದಕ್ಕೆ ತುಂಬಾನೇ ಈಸಿ.
ನಿಮ್ಗೆ ಗೊತ್ತಿರುವ ಹಾಗೆ ಹಚ್ಚಿರುವ ನೈಲ್ ಪಾಲಿಶ್ (nail polish) ತೆಗೆಯುವುದಕ್ಕೆ ರಿಮೂವರ್ ಬರುತ್ತೆ..ರಿಮೂವರಲ್ಲಿ (remover)ಲಿಕ್ವಿಡ್ ಟೈಪ್ ಬರುತ್ತೆ ಹಾಗೂ ಟಿಶ್ಯೂ ಟೈಪ್ ಕೂಡ ಬಂದಿದೆ. ಆದರೆ ಕೆಲವೊಂದು ಸಲ ರಿಮೂವರ್ ಖಾಲಿ ಆಗಿದ್ದರೆ ಅಥವಾ ನಿಮ್ಮ ಬಳಿ ಇಲ್ಲದಿದ್ದರೆ ಅರ್ಜೆಂಟಾಗಿ ನೀವು ಹೇಗೆ ಪೋಲಿಷ್ ನ ರಿಮೂವ್ ಮಾಡ್ಬಹುದು ಅನ್ನೋದರ ಹ್ಯಾಕ್ ಇಲ್ಲಿದೆ..
ಪರ್ಫ್ಯೂಮ್(Perfume)
ಇದೊಂದು ಸಿಂಪಲ್ ಹ್ಯಾಕ್(simple hack) .ಮನೆಯಲ್ಲಿ ಪರ್ಫ್ಯೂಮ್ ಗಳಂತೂ ಇದ್ದೇ ಇರುತ್ತೆ ..ಅಕಸ್ಮಾತಾಗಿ ನಿಮ್ಮ ಬಳಿ ನೈಲ್ ಪೋಲಿಷ್ ರಿಮೂವರ್ ಇಲ್ಲ ಅಂತ ಹೇಳಿದ್ರೆ ಒಂದು ಟಿಶ್ಯೂ ಪೇಪರ್ ಗೆ ಪರ್ಫ್ಯೂಮ್ ನ ಸ್ಪ್ರೇ ಮಾಡಿ ನಂತರ ನಿಮ್ಮ ಉಗುರನ್ನ ನೀಟಾಗಿ ರಬ್ ಮಾಡಿ ಹೀಗೆ ಒಂದೆರಡು ಮೂರು ಸಲ ರಬ್ ಮಾಡುವುದರಿಂದ ನೈಲ್ ಪೋಲಿಷ್ ಈಸಿಯಾಗಿ ರಿಮೋವ್ ಆಗುತ್ತೆ..

ಸ್ಯಾನಿಟೈಸರ್(Sanitizer)
ಅಬ್ಬಬ್ಬಾ ಕರೋನಾ ಬಂದ್ಮೇಲೆ ಪ್ರತಿಯೊಬ್ಬರ ಮನೆಯಲ್ಲೂ ಮಾತ್ರವಲ್ಲದೆ ಪ್ರತಿಯೊಬ್ಬರ ಬ್ಯಾಗ್ ನಲ್ಲು ಕೂಡ ಸ್ಯಾನಿಟೈಸರ್ ಇದ್ದೇ ಇರುತ್ತೆ.. ನಿಮ್ಮ ಬಳಿ ಏನಾದರೂ ನೈಲ್ ಪೋಲಿಷ್ ರಿಮೂವರ್ ಖಾಲಿಯಾಗಿದ್ದರೆ , ಸ್ವಲ್ಪ ಕಾಟನ್ಗೆ ಒಂದೆರಡು ಡ್ರಾಪ್ ಸ್ಯಾನಿಟೈಸರ್ ನ ಹಾಕಿ ನೀಲ್ ರಬ್ ಮಾಡುವುದರಿಂದ ನೇಲ್ಪಾಲಿಷ್ ಬೇಗನೆ ರಿಮೋವ್ ಆಗುತ್ತೆ..

ಟಾಪ್ ಕೋಟ್ (Top coat)
ಇದೊಂದು ಕಾಮನ್ ಹ್ಯಾಕ್.. ಆಲ್ರೆಡಿ ನಿಮ್ಮ ಕೈಯಲ್ಲಿ ನೈಲ್ ಪೋಲಿಷ್ ಇದ್ದರೆ, ಅದರ ಮೇಲೆ ಮತ್ತೊಂದು ಕೋಟ್ ಅಂದ್ರೆ ಟಾಪ್ ಕೋಟ್ ನೇಲ್ಪಾಲಿಷನ್ನ ಹಾಕಿ ತಕ್ಷಣ ವೆಟ್ ಇರುವಾಗಲೇ ನೀವು ಒಂದು ಕಾಟನ್ ಬಟ್ಟೆ ಅಥವಾ ಕಾಟನ್ ಪ್ಯಾಡ್ ಇಂದ ಅದನ್ನ ವರೆಸೋದ್ರಿಂದ ಬೇಗನೆ ನೇಲ್ಪಾಲಿಷ್ ಪೀಲ್ ಆಗುತ್ತೆ..

ಟೂತ್ ಪೇಸ್ಟ್ (Tooth paste)
ಟೂತ್ ಪೇಸ್ಟ್ ಅನ್ನ ಹಲ್ಲುಜ್ಜುವುದಕ್ಕೆ ಮಾತ್ರ ಬಳಸುವುದಿಲ್ಲ ಕೆಲವರು ಬೆಳ್ಳಿ ಗೆಜ್ಜೆಯನ್ನ ವಾಶ್ ಮಾಡೋದಕ್ಕೂ ಕೂಡ ಬಳಸ್ತಾರೆ ಒಂದು ಬಟ್ಟೆಗೆ ಟೂತ್ ಪೇಸ್ಟ್ ಅನ್ನ ಹಾಕಿ ನೀಟಾಗಿ ಒರೆಸುವುದರಿಂದ ಉಗುರು ಬಣ್ಣ ಬೇಗನೆ ಹೋಗತ್ತೆ..

ಹೆಚ್ಚು ಜನ ಹೇಳೋದು ನೇಲ್ಪಾಲಿಷನ್ನ ಹಾಕಬಾರದು ಅಂತ ಹೇಳಿ ಬಟ್ ಹೆಣ್ಣು ಮಕ್ಕಳು ಅಂದ್ಮೇಲೆ ನೇಲ್ಪಾಲಿಷ್ ಹಾಕಿ ಆಗ್ತಾರೆ ನಾವು ಪದೇ ಪದೇ ನೇಲ್ಪಾಲಿಷ್ ಹಾಕಿ ರಿಮೂವ್ ಮಾಡೋದ್ರಿಂದ ನಮ್ಮ ಉಗುರುಗಳು ಕೂಡ ಎಲ್ಲೋ ಇಷ್ಟ ಆಗುತ್ತೆ ಇದರ ಬಗ್ಗೆ ಕೂಡ ನಾವು ಜಾಗ್ರತೆ ವಹಿಸಬೇಕು.