ಸೋಮವಾರದಿಂದ ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದು ನಗರದಲ್ಲಿ ಸಂಚಾರ ಮಾರ್ಪಾಡು ಮಾಡಲಾಗಿದೆ.
ಮಧ್ಯಾಹ್ನ 12:30 ರಿಂದ 03:00 ಘಂಟೆಯಿಂದ ಮೈಸೂರು ರಸ್ತೆ, ನೈಸ್ ಬ್ರಿಡ್ಜ್ ಕಡೆಯಿಂದ ಉತ್ತರಹಳ್ಳಿ ಮೈಸೂರು ಕಡೆಯಿಂದ ಸಂಚಾರ ನಿಷೇಧಿಸಲಾಗಿದೆ. ಬದಲಿ ಮಾರ್ಗವಾಗಿ ಸೊಂಪೂರ ಟೋಲ್ ಮುಖಾಂತರವಾಗಿ ಸಂಚರಿಸಲು ಅವಕಾಶ ಮಾಡಿ ಕೊಡಲಾಗಿದೆ.
ನಾಗರಬಾವಿ ಸರ್ಕಲ್ ಕಡೆಯಿಂದ ಬೆಂಗಳೂರು ವಿಶ್ವವಿದ್ಯಾಲಯ ಅಡ್ಮಿಷನ್ ಬ್ಲಾಕ್ ಕಡೆ ಸಂಚಾರ ನಿಷೇಧಿಸಲಾಗಿದ್ದು ಬದಲಿ ಮಾರ್ಗವಾಗಿ ನಮ್ಮೂರ ತಿಂಡಿ ಅಂಬೇಡ್ಕರ್ ಕಾಲೇಜು, ಕೆಂಗುಂಟೆ ಸರ್ಕಲ್ ಕಡೆಯಿಂದ ಜ್ಞಾನ ಭಾರತಿ ಕಡೆ ಸಂಚರಿಸಬಹುದು.

ತುಮಕೂರು ಭಾಗದಿಂದ ನಗರದ ಒಳಭಾಗಕ್ಕೆ ಬರುವ ಭಾರೀ ವಾಹನಗಳನ್ನು ನಿಷೇಧಿಸಲಾಗಿದೆ. ತುಮಕೂರು ಕಡೆಯಿಂದ ಯಲಹಂಕ,ಕೋಲಾರ ಹಾಗೂ ಚಿಕ್ಕಬಳ್ಳಾಪುರ ಕಡೆ ಹೋಗುವ ವಾಹನಗಳು ಡಾಬಸ್ಪೇಟೆ ಬಳಿ ಎಡ ತಿರುವು ತೆಗೆದುಕೊಂಡು ದೊಡ್ಡಬಳ್ಳಾಪುರ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ.
ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಸಂಚಾರ ನಿಷೇಧಿಸಿರುವ ಸ್ಥಳಗಳಲ್ಲಿ ವಾಹನ ನಿಲುಗಡೆ ನಿಷಿದ್ಧ.