ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜನರ ಮನಸ್ಸಲ್ಲಿರೋದು ಒಂದೇ. ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆಗೋದು ಖಚಿತ ಎಂದರು. ʻನನ್ನೊಂದಿಗೆ ನೌಕರರ ಸಮುದಾಯ ಕೂಡ ಈ ಬಾರಿ ಕೈಜೋಡಿಸುತ್ತದೆ. ಎಲ್ಲಾ ಮತಗಳ ಜೊತೆಗೆ ಈ ಮತಗಳೂ ಕೂಡ ಗೆಲುವಿಗೆ ಕಾರಣವಾಗುತ್ತದೆ ಎಂದು ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು. ಕಾರ್ಮಿಕರು ಯಾರೂ ಕೂಡ ಮೇಲ್ನೋಟಕ್ಕೆ ಪಕ್ಷದ ಬಾವುಟ ಹಿಡಿದು ಬರುವವರಲ್ಲ. ಅವರೆಲ್ಲರ ಬೆಂಬಲ ನನಗೆ ಇದೆ. ನನಗೆ ನನ್ನದೇ ಆದ ಹೊಸ ನೆಟ್ವರ್ಕ್ ಕ್ರಿಯೇಟ್ ಆಗಿದೆ. ನಿಯೋಜಿತ ತಂಡಗಳು ಎಲ್ಲಾ ಕಡೆ ಕೆಲಸ ಮಾಡುತ್ತವೆ. ಎಲ್ಲಾ ಸಂಘ ಸಂಸ್ಥೆಗಳು ಸಮುದಾಯಗಳು ನನ್ನ ಜೊತೆ ನಿಲ್ಲುತ್ತವೆ ಎಂಬ ಭರವಸೆ ಇದೆ ಎಂದು ಹೇಳಿದ್ರು.
ಬಿಜೆಪಿಯ ಸಾಕಷ್ಟು ಕಾರ್ಪೊರೇಟರ್ ಗಳು ಇನ್ನೇನು ಮಾಜಿ ಅಗಲಿದ್ದಾರೆ. ಇಷ್ಟು ದಿನ ಅವರು ಕಪಿಮುಷ್ಠಿಯಲ್ಲಿ ಕೆಲಸ ಮಾಡುತ್ತಿದ್ರು. ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅವರಿಗೆ ಆಡಳಿತ ಅನುಭವಗಳು ಸಿಗಲಿಲ್ಲ. ಅವರ ಸ್ವಂತಿಕೆ ಬೆಳೆಸಿಕೊಳ್ಳಲು ಸಾಧ್ಯವಾಗಿಲ್ಲ. ಅಸಹಾಯಕ ಸ್ಥಿತಿ ನಿರ್ಮಾಣವಾಗಿತ್ತು. ಈ ಕೋಪವನ್ನು ತೀರಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಹಾಗಾಗಿ ಆಯಾ ವಾರ್ಡ್‌ಗಳಲ್ಲಿ ಅವರು ಜೆಡಿಎಸ್ ಪರ ಕೆಲಸ ಮಾಡಲಿದ್ದಾರೆ. ಬಿಜೆಪಿಯಲ್ಲಿ ಇದ್ದುಕೊಂಡೇ ನಮ್ಮ ಪರ ಕೆಲಸ ಮಾಡಲು ಆರಂಭಿಸಿದ್ದಾರೆ. ಅದು ಕೂಡ ನನ್ನ ಫಲಿತಾಂಶಕ್ಕೆ ಸಹಾಯ ಆಗುತ್ತೆ. ಇದನ್ನೀಗ ಬಿಡಿಸಿ ಹೇಳಲು ಸರಿಯಾದ ಸಮಯ ಅಲ್ಲ. ನನಗೆ ಸಹಾಯ ಮಾಡಿದಂತಹ ಎಲ್ಲರ ಹೆಸರನ್ನು ಗೆದ್ದ ನಂತರ ಹೇಳಿ ಕೃತಜ್ಞತೆ ಸಲ್ಲಿಸುತ್ತೇನೆ ಅಂತ ಆಯನೂರು ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದ್ರು.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಮಂಜುನಾಥ್, ಬಂದವರೆಲ್ಲ ವಾಪಸ್ ಹೋಗ್ತಾರೆ ಇಲ್ಲಿ ಉಳಿಯೋದು ಆಯನೂರು ಮಂಜುನಾಥ್ ಒಬ್ಬರೇ. ಬಹಳ ದೊಡ್ಡ ನಾಯಕರು ಬರಬಹುದು ಆದರೆ ಸ್ಥಳೀಯ ಮುಖಂಡರೇ ಶಾಶ್ವತ. ಜನರಿಗೆ ಹಾಗೂ ನಮ್ಮ ಕಾರ್ಯಕರ್ತರಿಗೆ ವಿಶ್ವಾಸ ಇದೆ, ಈ ಬಾರಿ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗೇ ಆಗ್ತಾರೆ. ಅನಿರೀಕ್ಷಿತ ಫಲಿತಾಂಶ, ಎಲ್ಲಾ ಸಮೀಕ್ಷೆಗಳನ್ನ ಮೀರಿ ಬರುತ್ತದೆ. ಶಿವಮೊಗ್ಗದಲ್ಲಿ ಜೆಡಿಎಸ್ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್ ರಾಷ್ಟ್ರೀಯ ಪಕ್ಷಗಳ ಸರಿ ಸಮಾನವಾಗಿ ಬೆಳೆದಿದೆ. ಕುಮಾರಸ್ವಾಮಿ ಸಿಎಂ ಆಗೋದು ಖಚಿತ. ಇದು ಮತದಾರರ ಮನಸ್ಸಲ್ಲೂ ಇದೆ. ಶಿವಮೊಗ್ಗಕ್ಕೆ ಹೆಚ್.ಡಿ. ಕುಮಾರಸ್ವಾಮಿ ಚುನಾವಣಾ ಪ್ರಚಾರಕ್ಕೆ ಬರಲಿದ್ದಾರೆ. ಆದರೆ ವಯೋ ಸಹಜ ಕಾರಣ ದೇವೇಗೌಡರು ಪ್ರವಾಸ ಮಾಡುತ್ತಿಲ್ಲ. ಸಿಎಂ ಇಬ್ರಾಹಿಂ ಕೊಡ ಬರುವ ನಿರೀಕ್ಷೆ ಇದೆ. ಎಂದು ಆಯನೂರ್ ಮಂಜುನಾಥ್ ಹೇಳಿದರು