ಮಹಾಕುಂಭಮೇಳದ (Maha kumbh) ಕುರಿತು ಒಂದೆಡೆ ವಿಶ್ವದಾದ್ಯಂತ ವ್ಯಾಪಕ ಮೆಚ್ಚುಗೆ, ಆಶ್ಚರ್ಯ ವ್ಯಕ್ತವಾಗುತ್ತಿದ್ದರೆ ಮತ್ತೊಂದೆಡೆ ದೇಶದ ಒಳಗೆ ಕೆಲವು ಮಂದಿ ಕುಂಭ ಮೇಳದ ವಿರುದ್ಧ ಅನಾವಶ್ಯಕ ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂಥವರಿಗೆ ಪ್ರಧಾನಿ ಮೋದಿ (Pm modi) ಖಡಕ್ ತಿರುಗೇಟು ಕೊಟ್ಟಿದ್ದಾರೆ.

ಈ ರೀತಿ ಕುಂಭಮೇಳವನ್ನು ಟೀಕಿಸಿದವರಿಗೆ ಪ್ರಧಾನಿ ನರೇಂದ್ರ ನರೇಂದ್ರ ಮೋದಿ ತಿರುಗೇಟು ಕೊಟ್ಟಿದ್ದಾರೆ. ನಮ್ಮ ದೇಶವನ್ನು ದುರ್ಬಲಗೊಳಿಸಲು ಪ್ರಯತ್ನಿಸುವ ಕೆಲವು ವಿದೇಶಿ ಶಕ್ತಿಗಳ ಬೆಂಬಲದಿಂದ ಕೆಲವರು ಈ ರೀತಿ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಹೀಗಾಗಿ ಕುಂಭ ಮೇಳವನ್ನು ಟೀಕಿಸುವವರದ್ದು ಗುಲಾಮಗಿರಿ ಮನಸ್ಥಿತಿ ಎಂದು ಟೀಕಿಸಿದ್ದಾರೆ. ಈ ಬಗ್ಗೆ ಮಧ್ಯಪ್ರದೇಶದಲ್ಲಿ ಮಾತನಾಡಿದ ನಮೋ, ಇತ್ತೀಚಿನ ದಿನಗಳಲ್ಲಿ ಧರ್ಮವನ್ನು ಅಪಹಾಸ್ಯ ಮಾಡುವ ನಾಯಕರ ಗುಂಪನ್ನು ನೋಡುತ್ತಿದ್ದೇವೆ. ವಿದೇಶಿ ಶಕ್ತಿಗಳು ಇವರ ಬೆನ್ನಿಗೆ ನಿಂತಿವೆ.ಆ ಮೂಲಕ ದೇಶ, ಧರ್ಮವನ್ನು ದುರ್ಬಲಗೊಳಿಸಲು ಪ್ರಯತ್ನ ಇವರದ್ದು ಎಂದು ವಾಗ್ದಾಳಿ ನಡೆಸಿದ್ದಾರೆ.