ದೇಶವ್ಯಾಪಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ವಕ್ಛ್ ತಿದ್ದುಪಡಿ ಮಸೂದೆಗೆ (Waqf amendment act) ಕೇಂದ್ರ ಸರ್ಕಾರದ ಮೋದಿ (Pm modi) ನೇತೃತ್ವದ ಕ್ಯಾಬಿನೆಟ್ ನಲ್ಲಿ ಒಪ್ಪಿಗೆ ಸಿಕ್ಕಿದೆ. ಈಗಾಗಲೇ ಜಂಟಿ ಪಾರ್ಲಿಮೆಂಟರಿ ಸಮಿತಿ ಪರಿಷ್ಕರಿಸಿದ್ದ ಮಸೂದೆಗೆ ಕೇಂದ್ರದ ಕ್ಯಾಬಿನೆಟ್ ನಲ್ಲಿ (Modi cabinet) ಗ್ರೀನ್ ಸಿಗ್ನಲ್ ಸಿಕ್ಕಿದೆ.

ಹೀಗಾಗಿ ಮಾರ್ಚ್ 10 ರಿಂದ ಮುಂದುವರಿಯುವ ಬಜೆಟ್ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಲಿದೆ. ಈ ಬೆಳವಣಿಗೆಗಳನ್ನು ಗಮನಿಸಿದರೆ ಬಹುತೇಕ ಈ ಭಾರಿಯ ಬಜೆಟ್ ಅಧಿವೇಶನದಲ್ಲಿ ಮಸೂದೆ ಅಂಗೀಕಾರವಾಗುವ ಸಾಧ್ಯತೆ ಬಹಳ ದಟ್ಟವಾಗಿದೆ.

ವಕ್ಫ್ ಕಾಯಿದೆ ತಿದ್ದುಪಡಿ ಮಸೂದೆ (Waqf board amendment act) ಮೂಲಕ ವಕ್ಫ್ ಬೋರ್ಡ್‌ಗೆ ಇರುವ ಅಧಿಕಾರಗಳನ್ನು ಮೊಟಕುಗೊಳಿಸಲು ಮೋದಿ ಸರ್ಕಾರ ಮುಂದಾಗಿದೆ. ಹೀಗಾಗಿ ಈ ಬಾರಿಯ ಅಧಿವೇಶನ ಕೋಲಾಹಲಕ್ಕೆ ಸಾಕ್ಷಿಯಾಗೋದ್ರಲ್ಲಿ ಅನುಮಾನವಿಲ್ಲ.