ರಾಜಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಡಾ||ರಾಜ್ ಕುಮಾರ್ ಕಲಾಕ್ಷೇತ್ರ ಸಭಾಂಗಣದಲ್ಲಿ ಮೆಟ್ರೋ ಫ್ಲೆಕ್ಸ್ ಜಿಮ್ ಮತ್ತು ಬಾಡಿ ಕ್ರಾಫ್ಟ್ ಜಿಮ್ ಆಯೋಜಿಸಿರುವ ಅಖಿಲ ಭಾರತ ಮಟ್ಟದ 400ಸ್ಪರ್ಧಿಸಿರುವ ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆ-2022 ರಾಜಾಜಿನಗರ ಕ್ಷೇತ್ರ ಶಾಸಕ ಮಾಜಿ ಸಚಿವ ಸುರೇಶ್ ಕುಮಾರ್ ಉದ್ಘಾಟನೆ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಶಾಸಕ ಸುರೇಶ್ ಕುಮಾರ್ ಕಲೆ,ಸಾಹಿತ್ಯ ಸಂಸ್ಕೃತಿ ಮತ್ತು ಕ್ರೀಡೆಗಳಿಗೆ ಮೊದಲಿಂದಲೂ ಉತ್ತೇಜನ ನೀಡುತ್ತಿರುವ ರಾಜಾಜಿನಗರ ವಿಧಾನಸಭಾ ಕ್ಷೇತ್ರವಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದೇಹದಾರ್ಢ್ಯ ಮೂಲಕ ಯುವಕರಿಗೆ ಮಾದರಿಯಾಗಿದ್ದರು ಎಂದು ಹೇಳಿದ್ದಾರೆ.

ಮಾನಸಿಕ ಮತ್ತು ದೃಹಿಕವಾಗಿ ಆರೋಗ್ಯವಂತರಾಗಿರಲು ಮತ್ತು ಮದ್ಯವ್ಯಸನ ,ಡ್ರಗ್ಸ್ ಎಂಬ ಕೆಟ್ಟ ಚಟಗಳಿಂದ ದೂರ ಇರಬೇಕಾದರೆ ಯೋಗ ಮತ್ತು ದೇಹದಾರ್ಢ್ಯ ಎಂಬ ಕಸರತ್ತು,ಕಲೆಗಳನ್ನು ಇಂದಿನ ಕಾಲಗಟ್ಟದ ಯುವಕರು ಕಲೆಯಬೇಕು ಎಂದು ಕರೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ರಾಘವೇಂದ್ರರಾವ್ ,ಉಪಮಹಾಪೌರರಾದ ರಂಗಣ್ಣ,ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಮುನಿರಾಜು,ರಾಜಣ್ಣ,ನಿರ್ಮಾಪಕರಾದ ಗಂಗಾಧರ್ ಉಪಸ್ಥಿತರಿದ್ದರು.
