ರಾಜ್ಯ ರಾಜಕಾರಣದಲಿ ತೀವ್ರ ಸದ್ದು ಮಾಡುತ್ತಿರುವ ಮಂಡ್ಯ ರಾಜಕಾರನ ಈಗ ಮತ್ತೊಂದು ಹಂತಕ್ಕೆ ತಲುಪಿದು ಜಿಲ್ಲೆಯ ಜೆಡಿಎಸ್ ಶಾಸಕರು ಹಾಗೂ ಸಂಸದರ ನಡುವಿನ ಪಂಥಾಹ್ವಾನಕ್ಕೆ ನಾಂದಿಯಾಡಿದೆ.
ಇನ್ನು ಸೋಮವಾರ ಮಳೆಯಾನಿ ಪ್ರದೇಶಗಳ ವೀಕ್ಷಣೆಗೆಂದು ತೆರಳಿದ್ದ ಸಂಸದೆ ಸುಮಲತಾ ಮೇಲುಕೋಟೆಗೆ ಬಂದು ದೇವರ ಸಮ್ಮುಖದಲ್ಲಿ ಆಣೆ ಮಾಡುವಂತೆ ಜೆಡಿಎಸ್ ಶಾಸಕರಿಗೆ ಸವಾಲ್ ಎಸೆದಿದ್ದರು.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ರವೀಂದ್ರ ಶ್ರೀಕಂಠಯ್ಯ ಸಂಸದೆ ಸುಮಲತಾ ಅಂಬರೀಶ್ ಕರೆದಾಕ್ಷಣ ಹೋಗಲಾಗುವುದಿಲ್ಲ ಉತ್ತಮರು ಕರೆದ್ರೆ ಹೋಗಬಹುದು, ದೆವ್ವ ಕರೆದ್ರೆ ಹೋಗಲು ಆಗುತ್ತಾ..? ಎಂದಿದ್ದಾರೆ.

ದೆವ್ವದ ಬಾಯಲ್ಲಿ ಭಗವದ್ಗೀತೆ ಕೇಳಲು ಸಾಧ್ಯವೇ..? ಸಂಸದೆ ಸುಮಲತಾ ಜೊತೆಯಲ್ಲಿರುವವರು ಭ್ರಷ್ಟಾತಿಭ್ರಷ್ಟರು ಮೈ-ಬೆಂ ಹೈವೇ ಕಾಮಗಾರಿಯಲ್ಲಿ ನೂರಾರು ಕೋಟಿ ಅಕ್ರಮ ನಡೆದಿದೆ ಆ ಅಕ್ರಮಗಳಲ್ಲಿ ಸಂಸದೆ ಸುಮಲತಾ ಬೆಂಬಲಿಗರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂಸದೆ ಸುಮಲತಾ ಏಟ್ರಿಯಾ ಹೋಟೆಲ್ಗೆ ಏಕೆ ಹೋಗಿದ್ದರು..?ಹೋಟೆಲ್ನಲ್ಲಿ ಕುಳಿತು ಏನು ಮಾಡಿದ್ರೆಂಬುದಕ್ಕೆ ವಿಡಿಯೋ ದಾಖಲೆಗಳಿವೆ ಸೂಕ್ತ ಸಂದರ್ಭ ಬಂದಾಗ ಆ ವಿಡಿಯೋ ಬಿಡುಗಡೆ ಮಾಡುತ್ತೇವೆ ಈಗಾಗಲೇ ಸಂಸದೆ ಸುಮಲತಾ ವಿರುದ್ಧ ಜನರು ತಿರುಗಿ ಬಿದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.