
ಸ್ಯಾಂಡಲ್ ವುಡ್ ನ ನಟ ರಾಕ್ಷಸ ಡಾಲಿ ಧನಂಜಯ್ (Dali dhananjay) ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ಈ ಬಗ್ಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (Pradeep ishwar) ಪ್ರತಿಕ್ರಿಯಿಸಿ ಡಾಲಿಗೆ ಶುಭ ಕೋರಿದ್ದಾರೆ.

ಡಾಲಿ ನನಗೆ ಒಳ್ಳೆ ಸ್ನೇಹಿತರು.ಧನಂಜಯ್ ಮದುವೆ ಆಗುತ್ತಿದ್ದಾರೆ ಒಳ್ಳೇದು. ಹಾಗೇನೇ ಸ್ವಾತಂತ್ಯ ಕಳೆದುಕೊಳ್ಳುತ್ತಿದ್ದಾರೆ ಎಂದು ನಗುತ್ತಾ ಶಾಸಕ ಪ್ರದೀಪ್ ಈಶ್ವರ್ ಡಾಲಿ ಕಾಲೆಳೆದಿದ್ದಾರೆ.

ನಾನು ಎಲ್ಲಾರಿಗೂ ಹೇಳುತ್ತೇನೆ ಮದುವೆ ತುಂಬಾ ಚೆನ್ನಾಗಿರತ್ತೆ. ಬೆಳಿಗ್ಗೆ ಕೌಸಲ್ಯ ರಾಮ ಪೂಜ್ಯ ಸಂದ್ಯತೆ ಕೇಳುತ್ತೆ. ಆಮೇಲೆ ಬೇರೆ ಕೆಳುತ್ತೆ. ಆದ್ರೂ ಡಾಲಿ ದಾಂಪತ್ಯಕ್ಕೆ ಒಳ್ಳೆದಾಗಲಿ ಎಂದು ಶುಭ ಹಾರೈಸಿದ್ದಾರೆ.
ನಾನು ಡಾಲಿ ಒಂದೇ ಅಪಾರ್ಟ್ಮೆಂಟ್ ಅಲ್ಲಿ ಇದ್ವಿ.ಉತ್ತಮ ಸ್ನೇಹಿತರು ಕೂಡ ಹೌದು. ಜೀವನ ಒಂದು ಅದ್ಭುತ ಪಯಣ.ಧನಂಜಯ್, ಧನ್ಯತಾಗೆ ಶುಭವಾಗಲಿ ಎಂದು ಮೈಸೂರಿನಲ್ಲಿ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.