ಹಾವೇರಿ : ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ಬಳಿಕ ರಾಜ್ಯದಲ್ಲಿ ಕೇಸರಿ ಪಾಳಯದ ನಾಯಕರ ಬಂಡಾಯ ಮುಂದುವರಿದಿದ್ದು ಶಾಸಕ ನೆಹರೂ ಓಲೇಕಾರ್ ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ವಿಚಾರವಾಗಿ ಹಾವೇರಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ನಿಂದ ನನಗೆ ಬುಲಾವ್ ಬಂದಿದೆ ಎಂದಿದ್ದಾರೆ.
ಕೇವಲ ನಾನೊಬ್ಬ ಅಲ್ಲ. ನನ್ನ ಜೊತೆ 1000 ಬೆಂಬಲಿಗರು ಬಿಜೆಪಿಗೆ ರಾಜೀನಾಮೆ ನೀಡ್ತಿದ್ದಾರೆ. ಬಸವರಾಜ ಬೊಮ್ಮಾಯಿ 40 ಪರ್ಸೆಂಟ್ ಕಮಿಷನ್ ಏಜೆಂಟ್ . ತನಗೆ ಅನುಕೂಲ ಇದ್ದವರಿಗೆ ಆತ ಟಿಕೆಟ್ ಕೊಡಿಸಿದ್ದಾನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ರು.
ಬೊಮ್ಮಾಯಿ ಬಿಜೆಪಿ ಹಾಳು ಮಾಡುತ್ತಿದ್ದಾನೆ. ಹೈಕಮಾಂಡ್ ಈ ಬಗ್ಗೆ ಯೋಚನೆ ಮಾಡಬೇಕಿದೆ. ಇವನು ಬಿಜೆಪಿ ಉದ್ಧಾರ ಮಾಡೋದಿಲ್ಲ ಎಂದು ಓಲೇಕಾರ್ ಸಿಎಂ ಬೊಮ್ಮಾಯಿ ವಿರುದ್ಧ ಆರೋಪಗಳ ಸುರಿಮಳೆಯನ್ನೇಗೈದಿದ್ದಾರೆ .