SC & ST (Scsp-tsp) ಮೀಸಲು ನಿಧಿಯನ್ನು ಸರ್ಕಾರ ದುರುಪಯೋಗ ಮಾಡಿಮೊಂಡಿದೆ ಎಂಬ ವಿಚಾರ ಮುಂದಿಕೊಟ್ಟು ವಿಪಕ್ಷ ಬಿಜೆಪಿ (Bjp) ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಗೆ ಮುಂದಾಗಿದ್ದು, ಈ ವೇಳೆ ಆರ್ ಆರ್ ನಗರದ ಶಾಸಕ ಮುನಿರತ್ನ (MLA muniratna) ಡಿಸಿಎಂ ಡಿಕೆ ಶಿವಕುಮಾರ್ (Dcm Dk Shivakumar) ವಿರುದ್ಧ ಟೀಕೆಗಳ ಸುರಿಮಳೆಗೈದಿದ್ದಾರೆ.

ಡಿಕೆ ಶಿವಕುಮಾರ್ ಅವರೇ, ನಿಮ್ಮ ನೋಟವೇ ನನಗೆ ಭಯ ಹುಟ್ಟಿಸುತ್ತದೆ. ದಯವಿಟ್ಟು ನನ್ನ ಮೇಲೆ ರೇಪ್ ಕೇಸ್ ಹಾಕಬೇಡಿ, ದಯವಿಟ್ಟು ಕಾನೂನು ದುರುಪಯೋಗ ಮಾಡಿಕೊಂಡು ನನ್ನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಬೇಡಿ ಎಂದು ವ್ಯಂಗ್ಯವಾಗಿ ಡಿಕೆ ಶಿವಕುಮಾರ್ ಅವರಿಗೆ ಮಾತಿನಲ್ಲೇ ತಿವಿದಿದ್ದಾರೆ.
ಕಳೆದ ಹಲವು ದಿನಗಳ ಹಿಂದೆ ಶಾಸಕ ಮುನಿರತ್ನ ಅವರು ಗುತ್ತಿಗೆದಾರನಿಗೆ ಜಾತಿ ನಿಂದನೆ ಮಾಡಿದ ಆಡಿಯೋ ವೈರಲ್ ಆಗಿ ಅದೇ ಪ್ರಕರಣದಲ್ಲಿ ಅವರು ಜೈಲು ಪಾಲಾಗಿದ್ದರು. ಆ ನಂತರ ಅವರ ಮೇಲೆ ರೇಪ್ ಕೇಸ್ ಕೂಡ ದಾಖಲಿಸಲಾಗಿತ್ತು.ಈ ಸುಳ್ಳು ಆರೋಪಗಳಿಗೆಲ್ಲ ಡಿಕೆ ಕಾರಣ ಎಂಬಂತೆ ಮುನಿರತ್ನ ಚಾಟಿ ಬೀಸಿದ್ದಾರೆ.












