ಉಡುಪಿಯ (Udupi) ಕುಂದಾಪುರ ಠಾಣೆಯ ಮುಂದೆ ಶಾಸಕ ಗುರುರಾಜ್ ಗಂಟಿಹೊಳೆ (Gururaj gantihole) ಪ್ರತಿಭಟನೆಗೆ ಮುಂದಾಗಿದ್ದಾರೆ.ಏಪ್ರಿಲ್ 8ರಂದು ಸಂಜೆ ಹಿಂದೂ ವಿದ್ಯಾರ್ಥಿನಿಯನ್ನು ಚುಡಾಯಿಸಿದ ಎಂದು ಉಡುಪಿ ಜಿಲ್ಲೆ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿ, ಮುಸ್ಲಿಂ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿರುವ ಆರೋಪದ ಮೇಲೆ ಸ್ಥಳೀಯ ಮಹೇಶ್ (Hindu activist mahesh) ವಿರುದ್ಧ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಕುರಿತು ಬೆದರಿಕೆ, ಹಲ್ಲೆ ,ಅವಾಚ್ಯ ಶಬ್ದದ ನಿಂದನೆ ಪ್ರಕರಣ ದಾಖಲಿಸಿರುವ ಕುಂದಾಪುರ ಪೊಲೀಸರು ಆರೋಪಿ ಮಹೇಶ್ ಬಂಧಸಿ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.ಆದ್ರೆ ಮಹೇಶ್ ಬಂಧನ ಖಂಡಿಸಿ ಠಾಣೆಯ ಮುಂದೆ ಶಾಸಕ ಗುರುರಾಜ್ ಪ್ರತಿಭಟನೆಗೆ ಮುಂದಾಗಿದ್ದಾರೆ.
ಕುಂದಾಪುರ ಪೊಲೀಸ್ ಠಾಣೆ ಮುಂದೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಪ್ರತಿಭಟನೆಗೆ ಮುಂದಾಗಿದ್ದು, ನಿರಂತರವಾಗಿ ಹಿಂದುಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆಯುತ್ತಿದೆ.ಪ್ರಶ್ನೆ ಮಾಡಿದವರ ಮೇಲೆ ಕೇಸು ದಾಖಲಿಸುತ್ತಾರೆ.ಸಾರ್ವಜನಿಕ ಸ್ಥಳದಲ್ಲಿ ವಿದ್ಯಾರ್ಥಿಗಳ ವರ್ತನೆಯನ್ನು ನೋಡಿ ಪ್ರಶ್ನೆ ಮಾಡಿ ಎಚ್ಚರಿಕೆ ನೀಡಿದ್ದ ಮಹೇಶ್ ಮೇಲೆ ಈ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿನಿಯನ್ನು ಚುಡಾಯಿಸಿದ ಮುಸಲ್ಮಾನ ವಿದ್ಯಾರ್ಥಿಯನ್ನು ಮಹೇಶ್ ಪ್ರಶ್ನೆ ಮಾಡಿದ್ದಾರೆ.ಆದ್ರೆ ಹಿಂದೂ ವಿದ್ಯಾರ್ಥಿನಿಯ ತಾಯಿಯನ್ನು ಒತ್ತಾಯಪಡಿಸಿ ದಾಖಲು ಮಾಡಿಸಿರುವ ಕೇಸ್ ಇದು.ಹೀಗಾಗಿ ಈ ಘಟನೆಯನ್ನು ಖಂಡಿಸಿ ನಾನು ಪ್ರತಿಭಟನೆ ಕೂತಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇದೇ ವೇಳೆ ವಿದ್ಯಾರ್ಥಿನಿಯನ್ನು ಚುಡಾಯಿಸಿದ ಮುಸಲ್ಮಾನ ಹುಡುಗರನ್ನು ರಕ್ಷಣೆ ಮಾಡುತ್ತಿರೋದು ಯಾಕೆ..? ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪುಂಡಪೋಕರಿಗಳ ಚಟುವಟಿಕೆ ಜಾಸ್ತಿಯಾಗಿದೆ ಎಂದು ಕುಂದಾಪುರದಲ್ಲಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಕಿಡಿಕಾಡಿದ್ದಾರೆ.