ಮಂಡ್ಯ: ಕೆರಗೋಡು ಗ್ರಾಮದಲ್ಲಿ ಹನುಧ್ವಜ ತೆರವು ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಘಟನೆಗೆ JDS ಹಾಗೂ HD Kumaraswamy ಅವರೇ ಕಾರಣ ಎಂಬ ಸಚಿವ ಚಲುವರಾಯಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಚಿವ CS Putta Raju, ಇಡೀ ಘಟನೆಗೆ ಶಾಸಕ ಗಣಿಗ ರವಿ ಅವರೇ ಕಾರಣ ಎಂದಿದ್ದಾರೆ.
ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆರಗೋಡಿನಲ್ಲಿ ನಡೆದ ಘಟನೆಗೆ ಜೆಡಿಎಸ್ ಹಾಗೂ ಕುಮಾರಸ್ವಾಮಿ ಕಾರಣ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ. ಆದರೆ ಧ್ವಜ ಸ್ತಂಭದ ವಿಚಾರವಾಗಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಲು ಮೂಲ ಕಾರಣ ಮಂಡ್ಯ ಶಾಸಕ ಗಣಿಗ ರವಿ ಅವರೇ ಆಗಿದ್ದಾರೆ. ಕೆರಗೋಡು ಗ್ರಾಮದಲ್ಲಿ ಪಕ್ಷಾತೀತವಾಗಿ ಧ್ವಜಸ್ತಂಭ ನಿರ್ಮಾಣ ಮಾಡಬೇಕೆಂದು ಶಾಸಕರೇ ಹೇಳಿದ್ದಾರೆ. ಗ್ರಾಮಸ್ಥರಿಗೆ ಜ. 22ರಂದು ತಾರೀಖು ಉದ್ಘಾಟನೆಯನ್ನು ನಾನೇ ಜವಾಬ್ದಾರಿ ತೆಗೆದುಕೊಂಡು ಮಾಡುವುದಾಗಿ ಗಣಿಗ ರವಿ ಹೇಳಿದ್ದಾರೆ. ಮಾರಗೌಡನಹಳ್ಳಿಯಲ್ಲಿ ದೇವಸ್ಥಾನ ಉದ್ಘಾಟನೆಗೆ 22ನೇ ತಾರೀಖು ಕುಮಾರಸ್ವಾಮಿ ಅವರು ಬರಬೇಕಿತ್ತು. ಆದರೆ ಜ.22ರಂದು ಕುಮಾರಸ್ವಾಮಿ ಅವರು ಕುಟುಂಬ ಆಯೋಧ್ಯೆಗೆ ಹೋದರು. ಹೀಗಾಗಿ 20ನೇ ತಾರೀಖು ಮಾರಗೌಡನಹಳ್ಳಿ ಬರಲು ಒಪ್ಪಿದ್ದರು, ಆದರೆ ಕುಮಾರಸ್ವಾಮಿ ಅವರು ಕಾರಣಾಂತರದಿಂದ ಬರಲು ಸಾಧ್ಯವಾಗಲಿಲ್ಲ. ಆದ್ದರಿಂದಾಗಿ ನಮ್ಮನ್ನು ಕುಮಾರಸ್ವಾಮಿ ಅವರು ಮಾರಗೌಡನಹಳ್ಳಿಗೆ ಹೋಗಲು ಹೇಳಿದರು.
22ರಂದು ನಾವು ಮಾರಗೌಡನಹಳ್ಳಿಗೆ ಹೋಗುವಾಗ ಕೆರಗೋಡು ಗ್ರಾಮಸ್ಥರು ನಮ್ಮ ಕಾರು ಅಡ್ಡಗಟ್ಟಿ, ನೀವು ಬಂದು ಧ್ವಜಕ್ಕೆ ಪೂಜೆ ಮಾಡಿ ಎಂದು ಕೆರಗೋಡು ಗ್ರಾಮಸ್ಥರು ಕೇಳಿಕೊಂಡರು. ಅದರಂತೆ ನಾವು ಧ್ವಜಕ್ಕೆ ಪೂಜೆ ಮಾಡಿದವು. ಇದನ್ನು ಗಣಿಗ ರವಿ ಅವರಿಗೆ ಸಹಿಸಲು ಸಾಧ್ಯವಾಗಿಲ್ಲ. ಇದಕ್ಕಾಗಿ ಶಾಸಕರು ಧ್ವಜ ಇಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ರಾಮಮಂದಿರವನ್ನು ಇಡೀ ದೇಶ ಸ್ಮರಣೆ ಮಾಡಿದೆ. ಇಂತಹ ವೇಳೆ ಹನುಮ ಧ್ವಜವನ್ನು ಇಳಿಸಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಮಂಡ್ಯ ಜಿಲ್ಲೆಯಲ್ಲಿ ಒಂದು ಈ ರೀತಿ ಘಟನೆ ಆಗಿಲ್ಲ, ನಾವು ಅಧಿಕಾರದಲ್ಲಿ ಇದ್ದಾಗ ಮಂಡ್ಯ ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ಬಹಿರಂಗವಾಗಿ ಈ ಬಗ್ಗೆ ಚರ್ಚೆ ಮಾಡೋಣಾ ಬನ್ನಿ. ಒಂದು ಕಡೆ ಕುಮಾರಸ್ವಾಮಿ, ನಾನು, ಇನ್ನೊಂದು ಕಡೆ ಚಲುವರಾಯಸ್ವಾಮಿ ಹಾಗೂ ಇತರರು. ಬನ್ನಿ ಮಂಡ್ಯ ಅಭಿವೃದ್ಧಿಗೆ ಶ್ರಮಿಸಿರುವ ಬಗ್ಗೆ ಚರ್ಚೆ ಮಾಡೋಣ. ಮಾಜಿ
ದೇವೇಗೌಡರು ನೀರಾವರಿ ಮಂತ್ರಿ ಆಗಿದ್ದಾಗಿನಿಂದ ಇಲ್ಲಿಯವರೆಗೆ ಜೆಡಿಎಸ್ ಕಾಲದಲ್ಲಿ ಏನು ಅಭಿವೃದ್ಧಿಯಾಗಿದೆ ಎಂದು ಚರ್ಚೆ ಮಾಡೋಣಾ.
ಜೆಡಿಎಸ್‌ನಿಂದ ಚಲುವರಾಯಸ್ವಾಮಿ ಜಿಪಂ ಸದಸ್ಯ, ಉಪಾಧ್ಯಕ್ಷ ಹಾಗೂ ಶಾಸಕ ಎಲ್ಲಾ ಆಗಿದ್ದಾರೆ. ಆದರೂ ಜೆಡಿಎಸ್‌ನಿಂದ ಅಭಿವೃದ್ಧಿ ಆಗಿಲ್ಲ ಅಂತಾ ಯಾವ ಬಾಯಿಯಿಂದ ಹೇಳ್ತೀರಾ? ಎಂದು ಪ್ರಶ್ನಿಸಿದರು.
#CSPuttaraja #JDSKaranataka #Congress #Cheluvarayaswamy #INCMinister