ಬೆಳಗಾವಿ: ಸ್ಪೀಕರ್ ವಿರುದ್ಧವೇ ಕಾಂಗ್ರೆಸ್ ಸದಸ್ಯೆ ರೂಪಾ ಶಶಿಧರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟೈಮ್ ಮ್ಯಾನೇಜ್ ಮಾಡೋಕೆ ಬರೋದಿಲ್ಲವಾ..? ಅಂತಾ ಬೇಸರ ವ್ಯಕ್ತಪಡಿಸಿದ ಶಾಸಕಿ ರೂಪಾ ಶಶಿಧರ್, ಸ್ಪೀಕರ್ ಪೀಠದಲ್ಲಿ ಕುಳಿತಿದ್ದ ರುದ್ರಪ್ಪ ಲಮಾಣಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಉತ್ತರ ಕರ್ನಾಟಕ ಅಭಿವೃದ್ಧಿ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಶಾಸಕ ಅರವಿಂದ ಬೆಲ್ಲದ್ ಮಾತನ್ನಾಡುತ್ತಿದ್ದಾಗ ಬೆಲ್ಲದ್ ಮಾತಿನ ನಡುವೆ ಪದೇ ಪದೇ ಎದ್ದುನಿಂತು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹಾಗು ಸಚಿವ ಪ್ರಿಯಾಂಕ್ ಖರ್ಗೆ ಮಾತನ್ನಾಡುತ್ತಿದ್ದರು. ಉತ್ತರ ಕರ್ನಾಟಕ ಚರ್ಚೆ ಮುಗಿಸಿ ಗಮನ ಸೆಳೆಯುವ ಸೂಚನೆ ಕಲಾಪ ಆರಂಭಿಸದ್ದಕ್ಕೆ ಶಾಸಕಿ ರೂಪಾ ಶಶಿಧರ್ ಸಿಟ್ಟಾಗಿದ್ದಾರೆ.
ನಾವು ಮೂರು ದಿನಗಳಿಂದಲೂ ಕಾಯುತ್ತಿದ್ದೇವೆ, ಫಸ್ಟ್ ನೀವು ಟೈಮ್ ಮ್ಯಾನೇಜ್ ಮಾಡೋದನ್ನ ಕಲಿಯಬೇಕು. You Have the Time Limit, What is this ಎಂದು ನೇರವಾಗಿಯೇ ಪ್ರಶ್ನಿಸಿದ್ದಾರೆ. ನಿಮ್ಮ ಆಲೋಚನೆ ಏನಿದೆ..? ಟೈಮ್ ಲಿಮಿಟ್ ಕೊಡಿ,ಎಲ್ಲವೂ ಇಂಪಾರ್ಟೆಂಟ್ ಅಲ್ಲವಾ..? ಎಂದು ರೂಪಾ ಶಶಿಧರ್ ಸಿಟ್ಟಾಗಿದ್ದಾರೆ.
ಈ ವೇಳೆ, ಅಮ್ಮಾ ನಾನು ಉತ್ತರ ಕರ್ನಾಟಕದ ಬಗ್ಗೆ ಮಾತನ್ನಾಡುತ್ತಿದ್ದೇನೆ, ದಯಮಾಡಿ ಮಾತನ್ನಾಡಲು ಅವಕಾಶ ಕೊಡಿ ಎಂದ ಅರವಿಂದ ಬೆಲ್ಲದ್‌ಗೆ, ಅಣ್ಣಾ ಪ್ಲೀಸ್ ನೀವು ಮಾತನ್ನಾಡೋದಕ್ಕೆ ನನ್ನ ಅಭ್ಯಂತರ ಏನೂ ಇಲ್ಲ. ನೀವು ಕಷ್ಟ ಸುಖ ಮಾತಾಡೋದಕ್ಕೆ ಅಭ್ಯಂತರ ಇಲ್ಲ. ಪ್ಲೀಸ್ ಗೀವ್ ದಿ ಲಿಮಿಟ್ ಟೈಮ್. ಇಲ್ಲದಿದ್ರೆ ಗಮನ ಸೆಳೆಯುವ ಸೂಚನೆಯನ್ನ ಯಾವಾಗ ಕರೆಯುತ್ತೀರಿ ಅಂತಾ ಹೇಳಿಬಿಡಿ. ಆಗಲೇ ನಾವು ವಾಪಸ್ ಬರುತ್ತೇವೆ ಎಂದು ಬೇಸರ ಪ್ರಕಟ ಮಾಡಿದ್ದಾರೆ.