ಮಂಡ್ಯ:ಕೈ ಶಾಸಕರ ಖರೀದಿಗೆ ತಲಾ 100 ಕೋಟಿ ಆಫರ್ ಆರೋಪ.ಮಂಡ್ಯ ಶಾಸಕ ಗಣಿಗ ರವಿಕುಮಾರ್ ವಿರುದ್ದ ಪೊಲೀಸ್ ದೂರು.ಮಾಜಿ ಎಂಎಲ್‌ಸಿ ಡಾ.ಅಶ್ವಥ್ ನಾರಾಯಣಗೌಡ ರಿಂದ ದೂರು ಸಲ್ಲಿಕೆ.ಮಂಡ್ಯದ ಪಶ್ಚಿಮ ಠಾಣೆಗೆ ದೂರು ನೀಡಿದ ಬಿಜೆಪಿ.ಕಾಂಗ್ರೆಸ್ ಶಾಸಕರು ಪಕ್ಷ ಬಿಟ್ಟು ಬರಲು ಬಿಜೆಪಿ ಕೇಂದ್ರ ನಾಯಕರು ಆಫರ್ ನೀಡಿದ್ದಾರೆ.
ತಲಾ 100 ಕೋಟಿ ಆಫರ್ ಕೊಟ್ಟಿದ್ದಾರೆ ಎಂದು ಕೈ ಶಾಸಕ ಗಣಿಗ ರವಿಕುಮಾರ್ ಹೇಳಿಕೆ ನೀಡಿದ್ದಾರೆ.ಅವರ ಆರೋಪ ಆಧಾರ ರಹಿತ, ದುರುದ್ದೇಶಕ ಪೂರ್ವಕವಾದುದು.ಶಾಸಕ ರವಿಕುಮಾರ್ ವಿರುದ್ದ ಕಾನೂನು ಕ್ರಮಜರುಗಿಸುವಂತೆ ದೂರು.ಕಾಂಗ್ರೆಸ್ ಶಾಸಕರನ್ನ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಇಟ್ಟಿದ್ದಾರೆ.ದುಡ್ಡು ಕೊಟ್ಟರೆ ಶಾಸಕರು ಯಾರ ಜೊತೆಯಾದ್ರು ಹೋಗ್ತಾರಾ?ಅಷ್ಟು ಹೀನಾಯ ಪರಿಸ್ಥಿತಿಗೆ ಕಾಂಗ್ರೆಸ್ ಶಾಸಕರು ತಲುಪಿದ್ದಾರೆ.