ಹಾಸನ (Hassan): ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಗ್ಯಾರೆಂಟಿಗಳ ಹೆಸರಿನಲ್ಲಿ ನಾಡಿನ ಜನತೆಯ ಹಣವನ್ನು ದುರ್ಬಳಕೆ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D.Kumarswamy) ಹೇಳಿದ್ದಾರೆ.
ಹಾಸನದ ಮಾರನಾಯಕಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ತಿಂಗಳಿನಿಂದ ಸಿದ್ದರಾಮಯ್ಯ (Siddaramaiah) ಅವರು ನಡೆದುಕೊಳ್ಳುತ್ತಿರುವುದು ನೋಡಿದ್ರೆ ನೂರು ಸುಳ್ಳನ್ನು ಹೇಳಿ ಒಂದು ಸತ್ಯ ಮಾಡುತ್ತಿದ್ದಾರೆ. ಸುಳ್ಳು ಹೇಳಿಕೊಂಡು ಸರ್ಕಾರ ನಡೆಸುತ್ತಿದ್ದಾರೆ. ಅದು ಎಷ್ಟು ದಿನ ನಡೆಯುತ್ತೆ ನೋಡೋಣ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ಸಾಲ ಮಾಡಿದೆ ಎನ್ನುತ್ತಿದ್ದರು. ಇವತ್ತು ಎಷ್ಟು ಸಾಲ ಇದೆ, ಈಗ ಎಲ್ಲಿಗೆ ತೆಗೆದುಕೊಂಡು ಹೋಗಿದ್ದೀರಿ. ಒಂದು ಲಕ್ಷದ ಐದು ಸಾವಿರ ಕೋಟಿ ಸಾಲ ಮಾಡಿದ್ದೀರಿ. ಈ ಸಾಲವನ್ನು ನೀವು ತೀರಿಸಲ್ಲ ಜನರೇ ತೀರಿಸಬೇಕು. ನೀವು ಬಹಳ ಪ್ರವೀಣರು ಎಂದು ನನಗೆ ಗೊತ್ತಿದೆ, ನಿಮ್ಮ ಪ್ರತಿಕ್ರಿಯೆ ನೋಡಿದ್ರೆ ಯಾವಾನಾದ್ರು ನಗ್ತಾನೆ. ಸಾಲದ ಹೊರೆ ಹೊರಿಸಿ, ಸ್ವೇಚ್ಛಾರ ಆಡಳಿತ ನಡೆಸುತ್ತಿದ್ದೀರಾ? ಇವರು ಯಾರ ಪರವಾಗಿ ಇದ್ದಾರೆ? ಎಂದು ಪ್ರಶ್ನಿಸಿದರು.
ಯಾರಪ್ಪನ ಮನೆ ದುಡ್ಡಿನಿಂದ ಗ್ಯಾರೆಂಟಿ ಕೊಡ್ತಿದ್ದೀರಿ, ಅದಕ್ಕೆ ಎಷ್ಟು ಸಾಲ ಮಾಡಿದ್ದೀರಿ? ಏಳು ಕೋಟಿ ಜನರ ಮೇಲೆ ಸಾಲದ ಹೊರೆ ಹೊರಿಸುತ್ತಿದ್ದೀರಿ. ಒಂದು ರೂಪಾಯಿಗೆ ಎಷ್ಟು ಖರ್ಚು ಮಾಡುತ್ತಿದ್ದೀರಿ? ನಿಮ್ಮವರೆ 40, 50% ಕಮಿಷನ್ ಅಂತ ಜಾಗಟೆ ಹೊಡೆಯುತ್ತಿದ್ದಾರೆ. ನೀವು ಹಗಲು ದರೋಡೆ ಮಾಡುವವರ ಪರವಾಗಿ ಇದ್ದೀರಿ ಎಂದು ಹರಿಹಾಯ್ದರು.
#Karnataka #Hassan #HDKumarswamy #siddaramaiah #political #congress #jds