ಸಂಭಾವ್ಯ 3ನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋವಿಡ್ ಟೆಸ್ಟ್ಗೆ ನೂತನ ನಿಯಮ ರೂಪಿಸಿದೆ .ಜಿಲ್ಲಾವಾರು ಟೆಸ್ಟ್ಗಳನ್ನು 1 ಲಕ್ಷ 75 ಸಾವಿರಕ್ಕೆ ಏರಿಸಲು ಶಿಫಾರಸ್ಸು ಮಾಡಿದೆ. ಇದರಲ್ಲಿ 30% Rapid Antigen Test (RAT) ಮತ್ತು 70% RTPCR ಮೂಲಕ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ.
ಸೋಂಕು ಹೆಚ್ಚಿರುವ ಕೇರಳದ ಗಡಿ ಭಾಗಲ್ಲಿರುವ ಜಿಲ್ಲೆಗಳಲ್ಲಿ ಹೆಚ್ಚಿನ ಪರೀಕ್ಷೆ ನಡೆಸಬೇಕು ಮತ್ತು ಅಂತರರಾಜ್ಯ ಗಡಿಗಳಿಂದ ಆಗಾಗ ರಾಜ್ಯಕ್ಕೆ ಭೇಟಿ ನೀಡುವ ಜನರ ಪರೀಕ್ಷೆಗಳನ್ನು ನಡೆಸಬೇಕು. ಒಟ್ಟು ಪರೀಕ್ಷೆಗಳಲ್ಲಿ 10% ಪರೀಕ್ಷೆಗಳನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕಡ್ಡಾಯವಾಗಿ ಪರೀಕ್ಷೆ ಮಾಡಬೇಕೆಂದು ನೂತನ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಒಟ್ಟು ಪರೀಕ್ಷೆಯ 50% ಪರೀಕ್ಷೆಗಳನ್ನು ತಾಲ್ಲೂಕು ಕೇಂದ್ರದ ಹೊರಭಾಗಗಳಲ್ಲಿ ನಡೆಸಲು ಕಾರ್ಯತಂತ್ರ ರೂಪಿಸಬೇಕು ಮತ್ತು 15-18 ವರ್ಷ ವಯಸ್ಸಿನ ಕೋವಿಡ್ ರೋಗಲಕ್ಷಣವಿರುವ ಮಕ್ಕಳನ್ನು ಕಡ್ಡಾಯವಾಗಿ RAT ಪರೀಕ್ಷೆಗೆ ಒಳಪಡಿಸಬೇಕು ಎಂದು ಆರೋಗ್ಯ ಇಲಾಖೆ ರೂಪಿಸಿರುವ ನೂತನ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.