ಡಿಕೆಶಿ (Dk Shivakumar) ಸಿಎಂ ಆಗ್ತಾರೆಂಬ ಮೊಯ್ಲಿ (Veerappa moyli) ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಸಚಿವ ಸಂತೋಷ್ ಲಾಡ್ (Santosh lad) ಪ್ರತಿಕ್ರಿಯಿಸಿದ್ದಾರೆ.ಅದೆಲ್ಲವೂ ಹೈಕಮಾಂಡ್ ಗೆ ಬಿಟ್ಟಿದೆ. ಅವರು ಅವರ ಅಭಿಪ್ರಾಯ ಹೇಳಿದ್ದಾರೆ.140 ಶಾಸಕರಲ್ಲಿ ಎರಡು ಮೂರು ಹೇಳಿರಬಹುದು.ಎಲ್ಲರ ಅಭಿಪ್ರಾಯವೇ ಮುಖ್ಯವಾಗುತ್ತೆ. ಲಾಸ್ಟ್ ಗೆ ಎಲ್ಲರೂ ಪಕ್ಷದ ವೇದಿಕೆಗೆ ಬರಬೇಕು ಎಂದಿದ್ದಾರೆ.

ಹೀಗಾಗಿ ಎಲ್ಲವೂ ಹೈಕಮಾಂಡ್ ಗೆ ಬಿಟ್ಟಿದ್ದು.ನನ್ನ ವೈಯುಕ್ತಿಕ ಅಭಿಪ್ರಾಯ ಹೇಳೋಕೆಬರಲ್ಲ.ನಾನು ಹೇಳುವವನೂ ಅಲ್ಲ. ನಮ್ಮ ನಿಫ್ಟಿ ಕೆಳಗೆ ಬೀಳ್ತಿದೆ.ಇದರ ಬಗ್ಗೆ ಯಾಕೆ ಚರ್ಚೆ ಮಾಡ್ತಿಲ್ಲ? ಸ್ಟಾಂಕ್ ಎಕ್ಸ್ ಚೇಂಜ್ ಕುಸಿದು ಹೋಗ್ತಿದೆ.ಅದರ ಬಗ್ಗೆ ಯಾಕೆ ಚರ್ಚೆಯಾಗಿಲ್ಲ ಎಂದಿದ್ದಾರೆ.
ಬಿಜೆಪಿ ನಾಯಕರು ಭಾಷಣ ಮಾಡಿ ಹೋಗ್ತಾರಲ್ಲ. ಯಾಕೆ ಇದರ ಬಗ್ಗೆ ಅವರು ಮಾತನಾಡ್ತಿಲ್ಲ.15ಲಕ್ಷ ಕೊಡ್ತೇವೆ ಅಂತ ಎದೆ ತಟ್ಟು ಹೇಳಿದ್ರು. ಏನಾದ್ರು ಇಲ್ಲಿಯವರೆಗೆ ಕೊಟ್ರಾ,ಯಾಕೆ ಚರ್ಚೆಯಿಲ್ಲ.ನಾವು ಕೊಡೋದ್ರಲ್ಲಿ ಹತ್ತಿರವಿದ್ದೇವೆ. ಗೃಹ ಲಕ್ಷ್ಮಿ ಹಣ 100 ಪರ್ಷೆಂಟ್ ಕೊಡ್ತೇವೆ ಎಂದಿದ್ದಾರೆ.

ಇನ್ನು ಬಿಜೆಪಿ ಮ್ಯಾನಿಫ್ಯಾಸ್ಟೋ ನೋಡಿದ್ರಾ?ನಾವು ಕೊಟ್ಟ 5 ಗ್ಯಾರೆಂಟಿ ಕೊಟ್ಟಿದ್ದೇವೆ.ಒಂದು ಗ್ಯಾರೆಂಟಿಯಲ್ಲಿ ಒಂದು ಕೊಡಬೇಕಿದೆ ಅಷ್ಟೇ.ಬಿಜೆಪಿ ಏನು ಕೊಟ್ರು ಏನು ಬ್ಯಾಲೆನ್ಸ್ ಇದೆ..? ಎಂದು ಬಿಜೆಪಿ ನಾಯಕರಿಗೆ ಸಕತ್ ಟಾಂಗ್ ಕೊಟ್ಟಿದ್ದಾರೆ.