ಜೆಡಿಎಸ್ ಮಂಡ್ಯ ಜಿಲ್ಲಾಧ್ಯಕ್ಷ ಡಿ.ರಮೇಶ್ ಮತ್ತು ಸಚಿವ ನಾರಾಯಣೌಡ ನಡುವಿನ ವಾಕ್ಸಮರ ತಾರಕ್ಕೇರಿದೆ. ಇಬ್ಬರು ಕೂಡ ಪೈಪೋಟಿಗೆ ಬಿದ್ದವರ ರೀತಿ ಆರೋಪ -ಪ್ರತ್ಯಾರೋಪ ಮಾಡ್ತಿದ್ದು , ಪರಸ್ಪರ ಬಾಯಿಗೆ ಬಂದಂತೆ ಬೈದಾಡಿಕೊಳ್ಳುತ್ತಿದ್ದಾರೆ. ಸಚಿವರ ವಿರುದ್ದ ಜಿಲ್ಲೆಯ ಜೆಡಿಎಸ್ ಜಿಲ್ಲಾಧ್ಯಕ್ಷ ಕೆಂಡಾ ಮಂಡಲವಾಗಿದ್ದಾರೆ.
ಹೌದು, ಮಂಡ್ಯದ ಸುದ್ದಿಗೋಷ್ಟಿ ನಡೆಸಿ ವಾಗ್ದಾಳಿ ನಡೆಸಿದ ಜಿಲ್ಲಾಧ್ಯಕ್ಷ ಡಿ ರಮೇಶ್, ಸಚಿವನಾಗಿರೋ ನಾರಾಯಣ ಗೌಡ ಒರ್ವ ಪೊಲಿಟಿಕಲ್ ಬೆಗ್ಗರ್. ಆತನಿಗೆ ಕನ್ನಡ ಮಾತನಾಡುವುದಕ್ಕೂ ಬರುವುದಿಲ್ಲ. .ಹೇ ನಾರಾಯಣ ಗೌಡ ನೀನು ಎಲ್ಲಿದ್ದೇನೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು. ನೀನು ಚೀನಾದಲ್ಲಿಲ್ಲ, ಕಮ್ಯೂನಿಸ್ಟ್ ಅಲ್ಲ. ಅಂಬೇಡ್ಕರ್ ಬರೆದ ಸಂವಿಧಾನದಡಿ ಕೆಲಸ ಮಾಡ್ತಿದ್ದೇವೆ ಅನ್ನೋದನ್ನ ಅರ್ಥಮಾಡಿಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.
ಪ್ರಜಾ ಸೇವಕರು ,ಸೇವಕರು ಅಂದ್ರೆ ಇಂಗ್ಲಿಷ್ ನಲ್ಲಿ ಕೇಳಿ. ಮೊದಲು ಅವರಿಗೆ ಕನ್ನಡ ಬರುತ್ತಾ ನೋಡಿ. ಕನ್ನಡ ಪರ ಹೋರಾಟಗಾರರು ಇನ್ನೂ ಮಂತ್ರಿಯಾಗಿ ಈ ಮನುಷ್ಯನ ಏಕೆ ಇಟ್ಟಿದ್ದಾರೆ ಅಂತ ಗೊತ್ತಿಲ್ಲ. ಕನ್ನಡ ಮಾತನಾಡುವುದಕ್ಕೆ ಬಾರದ ಮನುಷ್ಯ ಅವನು ಎಂದು ಏಕವಚನದಲ್ಲೇ ಟೀಕಿಸಿದ್ದಾರೆ.
ಮುಂದುವರೆದು, ಪದ ಬಳಕೆ ಗೊತ್ತಿಲ್ಲ, ಭಾಷಾ ಜ್ಞಾನ ಗೊತ್ತಿಲ್ಲ,ನನಗೆ ಪಾಠ ಹೇಳಲು ಬರ್ತಾರೆ.ನಾನು ಒಂದು ಪಕ್ಷದ ಅಧ್ಯಕ್ಷ.ನನಗೆ ಏ ಅನ್ನೋ ಪದ ಉಪಯೋಗಿಸ್ತಾರೆ. ನಾರಾಯಣಗೌಡ್ರಿಗೂ ನಾನು ಅಧ್ಯಕ್ಷ ಆಗಿದ್ದವನು ನಾನು. ನಾಲಿಗೆ ಮೇಲೆ ನಾರಾಯಣ ಗೌಡ ಹಿಡಿತ ಇಟ್ಟುಕೊಳ್ಳಲಿ. ಯಾರು ನಿಮ್ಮ ಮನೆ ಆಳುಗಳಲ್ಲ. ನಾವೆಲ್ಲ ಒಂದು ಪಕ್ಷದ ಕಟ್ಟಾಳುಗಳು. ಪಕ್ಷವನ್ನು ತಾಯಿ ಅಂತ ತಿಳಿದವರು. ನಿಮಗೆ ಅದರ ವ್ಯತ್ಯಾಸ ಗೊತ್ತಿಲ್ಲ. ತಾಯಿ ಯಾರು ಅಂತಾನೇ ನಾರಾಯಣ ಗೌಡಗೆ ಗೊತ್ತಿಲ್ಲ. ಇವರನ್ನ ಬೆಳೆಸಿದವರು ಯಾರು? ಪಕ್ಷಕ್ಕೆ ತಂದವರು ಯಾರು? ಉದ್ಯೋಗ ಕೊಟ್ಟ ಪಕ್ಷ ಯಾವುದು ಅಂತ ಗೊತ್ತಿಲ್ಲ. ಪಕ್ಷವನ್ನೇ ಚೂರುಮಾಡ್ತೇನೆ ಅಂತಾರೆ ಎಂದು ಕೆಂಡಾಮಂಡಲವಾಗಿದ್ದಾರೆ.