ರಾಜ್ಯದ ವಿಜಯಪುರ (Vijayapura) ಜಿಲ್ಲೆಯಲ್ಲಿ ವಕ್ಸ್ (Waqf) ಆಸ್ತಿ ವಿವಾದ ಜೋರಾಗುವ ಮೂಲಕ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿದೆ. ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ (Minister MB patil) ವಿಜಯಪುರ ಜಿಲ್ಲೆಯ ರೈತರಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.
![](https://pratidhvani.com/wp-content/uploads/2024/11/IMG_2420.jpeg)
ವಿಜಯಪುರ ಜಿಲ್ಲೆಯಲ್ಲಿ ವಕ್ಸ್ ಆಸ್ತಿ 14 ಸಾವಿರದ 201 ಎಕರೆ ಪೈಕಿ ಇನಾಮ್ ಅಬ್ಯೂಲೇಷನ್ ಆಕ್ಟ್ ಅಡಿ 1 ಸಾವಿರ 459 ಎಕರೆ ಹಂಚಲಾಗಿದೆ. ಲ್ಯಾಂಡ್ ರಿಫಾರ್ಮ್ಸ್ ಆಕ್ಟ್ನಲ್ಲಿ (Land reforms act) 11 ಸಾವಿರ 835 ಎಕರೆ ಹಂಚಲಾಗಿದೆ. ವಕ್ಸ್ ನವರು ಆಗಲೇ ಇಂದೀಕರಣ ಮಾಡೇಕಿತ್ತು. ಅವರಿಗೆ ಯಾರಿಗೂ ನೊಟೀಸ್ ಕೊಟ್ಟಲ್ಲ, ಅಂದಾಜು 12ಸಾವಿರ ಎಕರೆ ವಾಪಸ್ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಹಾಗೂ ವಕ್ಸ್ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ. ವಿವಿಧ ಕಾಯ್ದೆ ಅಡಿ ರೈತರಿಗೆ ಹಂಚಿಕೆಯಾದ ಜಮೀನು ರೈತರಿಗೆ ಸೇರಿದ್ದು, ರೈತರು ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.