• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ರಾಜ್ಯದೆಲ್ಲೆಡೆ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿರುವ ರಾಜ್ಯ ಸರ್ಕಾರದ ನಡೆಗೆ ಸಚಿವ ಕೆ.ಎಸ್ ಈಶ್ವರಪ್ಪ ಅಪಸ್ವರ

ಪ್ರತಿಧ್ವನಿ by ಪ್ರತಿಧ್ವನಿ
January 5, 2022
in ಇದೀಗ
0
ರಾಜ್ಯದೆಲ್ಲೆಡೆ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿರುವ ರಾಜ್ಯ ಸರ್ಕಾರದ ನಡೆಗೆ ಸಚಿವ ಕೆ.ಎಸ್ ಈಶ್ವರಪ್ಪ ಅಪಸ್ವರ
Share on WhatsAppShare on FacebookShare on Telegram

ರಾಜ್ಯದೆಲ್ಲೆಡೆ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೊರೊನಾ ಜಾಸ್ತಿ ಇರುವುದು ಹೌದು, ನಾನು ಇಲ್ಲ ಅಂತಾ ಹೇಳಿಲ್ಲ.ರಾಜ್ಯದ ಎಲ್ಲಾ ಕಡೆಯೂ ಇದು ಇಲ್ಲ. ಉದಾಹರಣೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಕೊರೋನಾ ಅಷ್ಟಿಲ್ಲ.ಕೆಲವೆಡೆ ೨-೩-೪-೫ ಈ ರೀತಿ ಇದೆ. ಜಾಸ್ತಿ ಅಂದರೆ ೧೦ ರವರೆಗೆ ಇದೆ. ಜಾಸ್ತಿ ಇದೆ ಅಂದುಕೊಂಡು ಇಡೀ ರಾಜ್ಯಕ್ಕೆ ರೂಲ್ಸ್ ತರುವುದು ಸರಿಯೇ ಎಂದು ಅನೇಕರು ನನಗೆ ಪ್ರಶ್ನೆ ಮಾಡುತ್ತಿದ್ದಾರೆ ಎಂದರು.

ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ ಎಲ್ಲಾ ಕಡೆಯಿಂದ ನನಗೆ ಪೋನ್ ಮಾಡುತ್ತಿದ್ದಾರೆ.ಬೆಂಗಳೂರಿನಲ್ಲಿ ಬಿಗಿ ಮಾಡಿ ನಾವು ಸಹಕಾರ ಕೊಡುತ್ತೇವೆ. ನಾವು ಯಾವುದೇ ಖರೀದಿಗೂ ಬೆಂಗಳೂರಿಗೆ ಹೋಗುವುದಿಲ್ಲ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ, ಶಾಲೆಗಳಿಗೆ ಹೋಗುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಕೇಳುತ್ತಿದ್ದಾರೆ ಎಂದರು. ಬೆಂಗಳೂರಿನಲ್ಲಿ ಕೋವಿಡ್ ನಿಯಂತ್ರಣ ಮಾಡುವುದು ಎಲ್ಲರ ಕರ್ತವ್ಯ.ಅಷ್ಟು ಇಲ್ಲದಿರುವ ಸಂದರ್ಭದಲ್ಲಿ ನಮ್ಮ ಮೇಲೆ ಹೇರಿದರೆ ನಮ್ಮ ವ್ಯವಹಾರಕ್ಕೆ ತೊಂದರೆ ಆಗುತ್ತದೆ.ಇದಕ್ಕೆ ಮುಂಜಾಗ್ರತೆ ತೆಗೆದುಕೊಳ್ಳುತ್ತಿದ್ದೇವೆ. ಖಂಡಿತಾ ಮಾಸ್ಕ್ ಧರಿಸುತ್ತೇವೆ. ಸ್ಯಾನಿಟೈಸರ್ ಬಳಸುತ್ತೇವೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತೇವೆ.ದಯವಿಟ್ಟು ನಮಗೆ ತೊಂದರೆ ಕೊಡಬೇಡಿ ಎಂದು ಮನವಿ ಮಾಡುತ್ತಿದ್ದಾರೆ ಎಂದರು.

ನಾಳೆ ಸಚಿವ ಸಂಪುಟ ಸಭೆ ನಡೆಯಲಿದೆ. ಮುಖ್ಯಮಂತ್ರಿ ಗಳು ಹಾಗು ಉಳಿದವರ ಜೊತೆ ಮಾತನಾಡುತ್ತೇನೆ.ಬೆಂಗಳೂರಿನಲ್ಲಿ ಖಂಡಿತಾ ಬಿಗಿ ಮಾಡಬೇಕು. ಗಡಿಗಳಲ್ಲಿ ಬಿಗಿ ಮಾಡಲೇ ಬೇಕು. ಇಂತಹ ಸಲಹೆಯನ್ನು ನಾಳೆ ಸಚಿವ ಸಂಪುಟದಲ್ಲಿ ಕೊಡುತ್ತೇನೆ.ಸಾರ್ವಜನಿಕರ ಅಭಿಪ್ರಾಯವನ್ನು ನಾನು ಕ್ಯಾಬಿನೆಟ್ ಮುಂದೆ ಇಡುತ್ತೇನೆ.ಆಟೋ ರಿಕ್ಷಾ ಡ್ರೈವರ್, ಹಮಾಲರು ಎಲ್ಲಿ ಹೋಗಬೇಕು ಅವರ ಜೀವನಕ್ಕೆ ಕೂಲಿ ಕಾರ್ಮಿಕರು, ಟೈಲರ್ ಎಲ್ಲರಿಗೂ ತೊಂದರೆ ಆಗುತ್ತದೆ. ರಾಜ್ಯದ ಜನರ ಅಭಿಪ್ರಾಯ ವನ್ನು ಸಚಿವ ಸಂಪುಟದ ಮುಂದೆ, ಸಿಎಂ ಮುಂದೆ ಇಡುತ್ತೇನೆ ಎಂದರು.

ಕೊರೋನಾ ಕಟ್ಟಿಹಾಕಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸದ್ಯಕ್ಕೆ ಆ ಬಗ್ಗೆ ಯಾವುದೇ ಇಂಗಿತ ನನಗಿಲ್ಲ. ಆದರೆ ಜಾಸ್ತಿ ಇದೆ ಎಂದು ಸರ್ಕಾರವೇ ಅವಲೋಕನ ಮಾಡಬೇಕು. ನಂತರ ಕೊರೋನಾ ಹೆಚ್ಚಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನ ಬಳಸಿಕೊಂಡು ಕಟ್ಟಿಹಾಕಲು ಮುಂದಾಗಬೇಕು. ಕೋವಿಡ್ ಓಡಿಸುವಲ್ಲಿ ನಾವು ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದೇವೆ. ಹಾಗಾಗಿ ನಿಯಂತ್ರಣ ಹೇಗೆ ಮಾಡಬೇಕು ಎಂಬುದು ನಮಗೆ ಗೊತ್ತಿದೆ. ಆದರೆ ಟಿವಿಗಳಲ್ಲಿ ಬಂದ ಸುದ್ದಿಗಳನ್ನ ನೋಡಿ ಜನರು ವಿಚಲಿತರಾಗುತ್ತಾರೆ. ಚೀನಾದಲ್ಲಿ ಅನ್ನಕ್ಕೂ ಹಾಹಾಕಾರ ಎಂದು ಸುದ್ದಿಯಾದರೆ ಶಿವಮೊಗ್ಗದಲ್ಲಿ ಅದೇ ಸ್ಥಿತಿ ಇರುತ್ತಾ..? ಎಲ್ಲೆಲ್ಲಿ ಹೆಚ್ಚಿದೆ ಅಲ್ಲಿ ಮಾತ್ರ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು. ಇಡೀ ರಾಜ್ಯದ ಜನರ ಅಭಿಪ್ರಾಯವನ್ನ ಮುಖ್ಯಮಂತ್ರಿಗಳಿಗೆ ತಿಳಿಸುತ್ತೇನೆ ಎಂದು ಈಶ್ವರಪ್ಪ ಹೇಳಿದರು.

Tags: BJPCongress PartyCovid 19KS Eshwarappaಎಚ್ ಡಿ ಕುಮಾರಸ್ವಾಮಿಕರೋನಾಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ನೀರಿಗಾಗಿ ನಡಿಗೆ, ಹಿಂದೆ ಸರಿವ ಪ್ರಶ್ನೆಯೇ ಇಲ್ಲ : ಡಿ.ಕೆ. ಶಿವಕುಮಾರ್ ಸ್ಪಷ್ಟನೆ

Next Post

ಮುಖ್ಯಮಂತ್ರಿಗಳಿಂದ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಸಾಧ್ಯತೆ : ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಭರವಸೆ

Related Posts

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..
Top Story

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

by ಪ್ರತಿಧ್ವನಿ
April 16, 2026
0

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಮುಂದುವರೆದಿರುವ ಯುದ್ಧವು ದಿನದಿಂದ ದಿನಕ್ಕೆ ಮಗ್ಗಲು ಬದಲಿಸುತ್ತಿದೆ. ಈಗಾಗಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾರ್ಮುಜ್‌ ಜಲಸಂಧಿಯನ್ನು ಬಂದ್‌ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ...

Read moreDetails
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
Next Post
ಮುಖ್ಯಮಂತ್ರಿಗಳಿಂದ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಸಾಧ್ಯತೆ : ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಭರವಸೆ

ಮುಖ್ಯಮಂತ್ರಿಗಳಿಂದ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಸಾಧ್ಯತೆ : ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಭರವಸೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada