ಮುಡಾ ಅಕ್ರಮ ನಿವೇಶನ ಪ್ರಕರಣಕ್ಕೆ (Muda scam) ಸಂಬಂಧಪಟ್ಟಂತೆ ಇಡಿ ನೋಟಿಸ್ ನೀಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಕೃಷ್ಣ ಬೈರೇಗೌಡ (Krishna bairegowda) ಮಾತನಾಡಿದ್ದಾರೆ. ನಾನು ಮೀಟಿಂಗ್ ನಲ್ಲಿ ಇದ್ದೆ. ಹಾಗಾಗಿ ಗಮನಕ್ಕೆ ಇರಲಿಲ್ಲ.ಇಡಿ ಧೋರಣೆ ಸ್ಪಷ್ಟವಾಗಿದೆ ಇದೆ.ತನಿಖಾ ಸಂಸ್ಥೆ ಅಲ್ಲಾ, ಅದು ರಾಜಕೀಯ ದ್ವೇಷ ಸಾಧಿಸುವ ಸಂಸ್ಥೆ ಎಂದು ಹರಿಹಾಯ್ದಿದ್ದಾರೆ.

ED ಅವರು ಎಷ್ಟು ಜನ ವಿಪಕ್ಷ ಪಾರ್ಟಿಯವರಿಗೆ ನೊಟಿಸ್ ಕೊಟ್ಟಿದ್ದಾರೆ, ಅರೆಸ್ಟ್ ಮಾಡಿದ್ದಾರೆ.ಯಾವ ರಾಜ್ಯದಲ್ಲೊ ವಿಪಕ್ಷ ನಾಯಕರನ್ನ ಬಿಟ್ಟಿದ್ದಾರೆ ಇಡಿಯವರು..?ತಮಿಳುನಾಡು (Tamil nadu), ಆಂದ್ರ ತೆಲಾಂಗಣ ಪಂಜಾಬ್ , ಬರೀ ವಿಪಕ್ಷಗಳ ನಾಯಕರ ಮೇಲೆ ಧಾಳಿ ಮಾಡೊದೆ ಇಡಿಯವರ ಕೆಲಸ ಎಂದಿದ್ದಾರೆ.
ಇಷ್ಟು ದಿನಗಳ ಅವಧಿಯಲ್ಲಿ ಬಿಜೆಪಿಯವರಿಗೆ (BJP) ಎಷ್ಟು ನೋಟಿಸ್ ಕೊಟ್ಟಿದ್ದಾರೆ.ಯಾವುದಾದ್ರು ಒಂದು ಪ್ರಕರಣ ಇದ್ರೆ ಹೇಳಿ. ಕರ್ನಾಟಕದ ಬಿಜೆಪಿಯವರದ್ದೆ ಎಷ್ಟು ಸಿಬಿಐ, ಇಡಿ ಎಷ್ಟು ಕೇಸಿದೆ.ಅದಾನಿ ಮೇಲೆ ಅಮೇರಿಕಾದಲ್ಲಿ ಎಫ್ ಐ ಆರ್ ಆಗಿದೆ.ಲಂಚ ಕೊಟ್ಟಿದ್ದಾರೆಂದು , ಒಂದು ನೋಟಿಸ್ ಕೊಟ್ಟಿದ್ದಿರಾ ?? ಎಂದು ಪ್ರಶ್ನಿಸಿದ್ದಾರೆ.

ಸರ್ಕಾರ ಬರೋದಕ್ಕುಮೊದಲು ಸ್ವಿಸ್ ಬ್ಯಾಂಕ್ ನಲ್ಲಿ ಇಟ್ಟಿರುವ ಹಣ ತರ್ತಿವಿ ಅಂದ್ರಲ್ಲಾ..ಒಂದು ಪೈಸಾನಾದ್ರು ತಂದ್ರಾ.? ಯಾರಾದ್ರು ಬ್ಲಾಕ್ ಮನಿ ಇಟ್ಟುಕೊಂಡ ಉದ್ಯಮಿಗಳ ಮೇಲೆ ಕ್ರಮ ಕೈಗೊಂಡಿದ್ದಾರಾ..?ಇದನ್ನೆಲ್ಲಾ ನೋಡಿದಾಗ ಇದು ಪೊಲಿಟಿಕಲ್ ಎನ್ ಫೋರ್ಸ್ ಮೆಂಟ್ ಡೈರೆಕ್ಟೋರೇಟ್ ಅಂತ ಹೇಳಲೇಬೇಕಲ್ಲ ಅಂದಿದ್ದಾರೆ.
ಅಪೋಸಿಷನ್ ಅವರನ್ನ ಬಗ್ಗು ಬಡಿಯೋದಕ್ಕೆ ಪೊಲಿಟಿಕಲ್ ಏಜೆನ್ಸಿ ಆಗಿದೆ.ನಾವು ಪೊಲಿಟಿಕಲಾಗಿ, ಲೀಗಲ್ ಆಗಿ ಫೈಟ್ ಮಾಡ್ತಿವಿ ಅಂತ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.