ಇ-ಖಾತಾ (E khatha) ವಿಚಾರಕ್ಕೆ ಸಂಬಂಧಪಟ್ಟಂತೆ ಕಾವೇರಿ ೨ (Cauvery 2) ತಂತ್ರಾಂಶದ ತೊಂದರೆಯಿಂದ ಸದ್ಯ ನೋಂದಣಿ ಪ್ರಕ್ರಿಯೆಗೆ ಬ್ರೇಕ್ ಬಿದ್ದಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ವಿಕಾಸಸೌಧದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna byregowda) ಮಾತನಾಡಿದ್ದಾರೆ.
ಕಳೆದ ಕೆಲ ದಿನಗಳಿಂದ ನೋಂದಣಿ ಪ್ರಕ್ರಿಯೆಯಲ್ಲಿ ಇಸಿ ವಿತರಣೆ ಆಗೋದು ಸಮಸ್ಯೆ ಆಗಿತ್ತು.ಇದರಿಂದ ನೋಂದಣಿ ಕೆಲವು ದಿನ ತೊಂದರೆ ಆಗಿತ್ತು.ಇದರಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ನಮ್ಮ ಕಾವೇರಿ ಸಾಫ್ಟ್‌ವೇರ್ ಮೇಲೆ ಅನಗತ್ಯವಾಗಿ ಸುಮ್ಮನೆ ಕಾಮ ಹಾಕೋದು,ಪುಲ್ ಸ್ಟಾಪ್ ಹಾಕೋದು,ಈ ರೀತಿಯಾಗಿ ಕಂಪ್ಯೂಟರ್ ಮಿಸ್ ಯೂಸ್ ಮಾಡಿ ಕೆಲವರು ಸಿಸ್ಟಮ್ ಮೇಲೆ ಓವರ್ ಲೋಡ್ ಮಾಡಿಕೆಲಸಗಳಿಗೆ ಉದ್ದೇಶಪೂರ್ವಕವಾಗಿ ತೊಂದರೆ ಕೊಡುವ ಕೆಲಸ ನಡೆದಿತ್ತು ಎಂದು ಹೇಳಿದ್ದಾರೆ.
ಅದನ್ನ ಇ ಗವರ್ನೆನ್ಸ್ ಅವರು ರಾತ್ರಿ ಹಗಲು ಕೆಲಸ ಮಾಡಿ ಸರಿಯಾಗಿ ಸಮಸ್ಯೆ ಪರಿಹಾರ ಮಾಡಿದ್ದಾರೆ.ನಿನ್ನೆಯಿಂದ ನೋಂದಣಿ ನಡೆಯುತ್ತಿದೆ.ಇವತ್ತು ಸಹ ನಡೆಯುತ್ತಿದೆ, ಸದ್ಯಕ್ಕೆ ಆ ಸಮಸ್ಯೆ ಪರಿಹಾರ ಆಗಿದೆ.ಅದರೂ ಮತ್ತೆ ಮರುಕಳಿಸಬಾರದ್ದು ಅಂತ ಹೇಳಿ ವಾಚ್ ಮಾಡ್ತಾ ಇದ್ದಾರೆ ಎಂದು ಹೇಳಿದ್ದಾರೆ.