• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

KJ George: ಕೆ.ಜಿ.ಹಳ್ಳಿ ಮೂಲಸೌಕರ್ಯ ಸಮಸ್ಯೆಗಳ ಪರಿಹಾರಕ್ಕೆ ಸಚಿವ ಕೆ.ಜೆ.ಜಾರ್ಜ್ ಸೂಚನೆ

ಕುಡಿಯುವ ನೀರು, ಕೊಳಗೇರಿ ಅಭಿವೃದ್ಧಿ ಮಂಡಳಿ ಮನೆಗಳ ನವೀಕರಣಕ್ಕೆ ಆದ್ಯತೆ, ಶಾಲೆಯ ಹೊಸ ಕಟ್ಟಡ ನಿರ್ಮಾಣಕ್ಕೆ 90 ಲಕ್ಷ ಅನುದಾನ ಘೋಷಣೆ.

ಪ್ರತಿಧ್ವನಿ by ಪ್ರತಿಧ್ವನಿ
February 19, 2026
in Top Story, ಅಂಕಣ, ಇದೀಗ, ಕರ್ನಾಟಕ, ರಾಜಕೀಯ, ವಾಣಿಜ್ಯ, ವಿಶೇಷ, ಶೋಧ, ಸರ್ಕಾರಿ ಗೆಜೆಟ್
0
KJ George: ಕೆ.ಜಿ.ಹಳ್ಳಿ ಮೂಲಸೌಕರ್ಯ ಸಮಸ್ಯೆಗಳ ಪರಿಹಾರಕ್ಕೆ ಸಚಿವ ಕೆ.ಜೆ.ಜಾರ್ಜ್ ಸೂಚನೆ
Share on WhatsAppShare on FacebookShare on Telegram

ಬೆಂಗಳೂರು: ‘ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಭುಗಳು. ಅವರು ಕೇಳಿದ ಕೆಲಸ ಮಾಡಿಕೊಡಬೇಕು, ವಿಳಂಬ ಮಾಡಬೇಡಿ’ ಎಂದು ಇಂಧನ ಸಚಿವ ಹಾಗೂ ಸರ್ವಜ್ಞ ನಗರ ಕ್ಷೇತ್ರದ ಶಾಸಕ ಕೆ.ಜೆ.ಜಾರ್ಜ್(MLA KJ George) ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ADVERTISEMENT

ಕ್ಷೇತ್ರದ ಕಾಡುಗೊಂಡನಹಳ್ಳಿ (KG Halli) ವ್ಯಾಪ್ತಿಯಲ್ಲಿ ಗುರುವಾರ ಸಂಚರಿಸಿ ಸ್ಥಳೀಯ ಜನರ ಸಮಸ್ಯೆಗಳನ್ನು ಆಲಿಸಿದ ಸಚಿವರು, ಅಭಿವೃದ್ದಿ ಕಾಮಗಾರಿಗಳ ಮಂದಗತಿಗೆ ಕಾರಣರಾದ ಅಧಿಕಾರಿಗಳಿಗೆ ಬೆವರಿಸಿಳಿಸಿದರು.

ಕೆ.ಜಿ.ಹಳ್ಳಿಯ ಪಿಳ್ಳಣ್ಣ ಗಾರ್ಡನ್‌ನಿಂದ ಶುರುವಾದ ಕ್ಷೇತ್ರ ಪರ್ಯಟನೆ ವಿನೋಬಾ ನಗರ, ಭಾರತ್ ಮಾತಾ ಬಡಾವಣೆ, ವೆಂಕಟೇಶಪುರ, ರಷದ್ ನಗರ ಹಾಗೂ ನಾಗವಾರ ಮುಖ್ಯರಸ್ತೆಯ ಮೆಟ್ರೋ ನಿಲ್ದಾಣದ ಬಳಿ ಕೊನೆಗೊಂಡಿತು. ಪಿಳ್ಳಣ್ಣ ಗಾರ್ಡನ್‌ನ ಐದು ಬ್ಲಾಕ್‌ಗಳಲ್ಲಿ ಕಾಲ್ನಡಿಗೆಯಲ್ಲೇ ಸಂಚರಿಸಿದ ಸಚಿವ ಕೆ.ಜೆ.ಜಾರ್ಜ್ ಅವರು, ಕೊಳಗೇರಿ ಅಭಿವೃದ್ಧಿ ಮಂಡಳಿ ಮನೆಗಳ ನವೀಕರಣ ಹಾಗೂ ಶುದ್ದ ಕುಡಿಯುವ ನೀರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸಿದರು. ವಿನೋಬಾ ನಗರ, ಭಾರತ್ ಮಾತಾ ಬಡಾವಣೆಯಲ್ಲೂ ಸ್ಥಳೀಯರು ನೀರಿನ ಸಮಸ್ಯೆ ಬಗೆಹರಿಸುವಂತೆ ಕೋರಿದರು.

ಈ ವೇಳೆ ಸ್ಥಳದಲ್ಲೇ ಹಾಜರಿದ್ದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳನ್ನು ಕರೆಸಿದ ಸಚಿವರು, ನೀವು ಸಬೂಬು ಹೇಳಬೇಡಿ. ಯಾವಾಗ ಶುದ್ದ ಕುಡಿಯುವ ನೀರಿನ ಸಂಪರ್ಕ ಕೊಡುತ್ತೀರಿ? ದಿನಾಂಕ ಸಹಿತ ಹೇಳಿ. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಚಿವರ ಕ್ಷೇತ್ರ ಪರ್ಯಟನೆ ಕುರಿತು ಮುಂಚಿತವಾಗಿ ಮಾಹಿತಿ ನೀಡಿದರೂ ಸ್ಥಳಕ್ಕೆ ಹಾಜರಾಗದ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಯನ್ನು ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡ ಸಚಿವರು, ಮುಂದೆ ಈ ರೀತಿ ಮಾಡಿದೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಹಿಳೆಯರಿಗೆ ಸ್ವಾವಲಂಬನೆಯೇ ಗುರಿಯಾಗಲಿ
ಕೆ.ಜಿ.ಹಳ್ಳಿಯಲ್ಲಿ ಯುನೈಟೆಡ್-ವೇ ಬೆಂಗಳೂರು ಸಹಯೋಗದಲ್ಲಿ ಮೈತ್ರಿ ಸರ್ವ ಸೇವಾ ಸಮಿತಿ ನಡೆಸಿದ ಟೈಲರಿಂಗ್ ಕೌಶಲ್ಯ ತರಬೇತಿ ಮುಗಿಸಿದ 50 ಮಹಿಳೆಯರಿಗೆ ಹೊಲಿಗೆ ಯಂತ್ರ ಹಾಗೂ ಕೋರ್ಸ್ ಮುಗಿಸಿದವರಿಗೆ ಸಚಿವ ಕೆ.ಜೆ.ಜಾರ್ಜ್ ಪ್ರಮಾಣ ಪತ್ರಗಳನ್ನು ವಿತರಿಸಿದರು. ಅಲ್ಲದೆ, ಕೌಶಲ್ಯ ತರಬೇತಿ ಕುರಿತು ಹರ್ಷ ವ್ಯಕ್ತಪಡಿಸಿ, “ಮಹಿಳೆಯರು ಸ್ವಂತ ಉದ್ಯೋಗ ಮಾಡುತ್ತಾ ಸ್ವಾವಲಂಬಿಗಳಾದರೆ ಕುಟುಂಬ ಏಳಿಗೆ ಆಗುತ್ತದೆ. ಇದೇ ಯಶಸ್ಸಿನ ಗುಟ್ಟು,” ಎಂದು ಹೇಳಿ ತರಬೇತಿ ಪಡೆದವರಿಗೆ ಶುಭ ಹಾರೈಸಿದರು.

ಶಾಲೆಯ ಹೊಸ ಕಟ್ಟಡ ನಿರ್ಮಾಣಕ್ಕೆ 90 ಲಕ್ಷ ಅನುದಾನ’
ವಿನೋಬಾ ನಗರದ ವೆಂಕಟೇಶಪುರದಲ್ಲಿನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೂ ಓದುತ್ತಿರುವ 170 ಮಕ್ಕಳು, ಶಾಲೆ ಹಾಗೂ ಪಕ್ಕದ ಮಸೀದಿಯಲ್ಲೂ ಪಾಠ ಕೇಳುತ್ತಿದ್ದಾರೆ ಎಂಬ ವಿಚಾರ ತಿಳಿದ ಸಚಿವ ಜಾರ್ಜ್ ಅವರು, ಶಾಲೆಗೆ ಹೊಸ ಕಟ್ಟಡದ ಅವಶ್ಯಕತೆ ಇರುವುದನ್ನು ಮನಗಂಡು, ಶೀಘ್ರವೇ ಶಾಲಾ ಕಟ್ಟದ ನಿರ್ಮಾಣಕ್ಕೆ ಸೂಚನೆ ನೀಡಿದರು. ಅಲ್ಲದೆ, ಶಾಲಾ ಕಟ್ಟಡ ನಿರ್ಮಾಣಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 90 ಲಕ್ಷ ರೂ. ಒದಗಿಸುವುದಾಗಿ ಘೋಷಿಸಿದರು.

ಎಂಬೆಸ್ಸಿ ಗಾಲ್ಫ್ ಲಿಂಕ್ಸ್ ಬಿಸಿನೆಸ್ ಪಾರ್ಕ್‌ನ ಸಿಎಸ್‌ಆರ್ ಅನುದಾನದಲ್ಲಿ ನಡೆಯುತ್ತಿರುವ ಭಾರತ್ ಮಾತಾ ಬಡಾವಣೆಯಲ್ಲಿನ ಅಂಗನವಾಡಿ ಕೇಂದ್ರಕ್ಕೆ ತೆರಳಿ ಪುಟ್ಟಮಕ್ಕಳಿಗೆ ಯಾವುದೇ ಸಮಸ್ಯೆಯಾಗದಂತೆ ನಡೆಸಲು ಅಗತ್ಯವಿರುವ ನೆರವು ನೀಡುವುದಾಗಿ ಭರವಸೆ ನೀಡಿದರು.

ಮೆಟ್ರೋ ನಿಲ್ದಾಣ ಕಾಮಗಾರಿ ವೇಗಕ್ಕೂ ಸೂಚನೆ
“ನಾನು ಬೆಂಗಳೂರು ಅಭಿವೃದ್ದಿ ಮಂತ್ರಿಯಾಗಿದ್ದಾಗ ಆರು ಎಕರೆ ಜಾಗ ನೀಡಿದ್ದೇನೆ. ಇಲ್ಲಿ ಸುಸಜ್ಜಿತ ಮೆಟ್ರೋ ನಿಲ್ದಾಣ ನಿರ್ಮಾಣವಾಗಬೇಕು ಸ್ಥಳೀಯ ಜನರಿಗೆ ಅನುಕೂಲ ಆಗಬೇಕು. ಇದೇ ನಮ್ಮ ಉದ್ದೇಶ. ಈಗ ಕ್ಷೇತ್ರದ ವೆಂಕಟೇಶಪುರ ಬಳಿ ಹಾಗೂ ನಾಗವಾರ ಮೆಟ್ರೋ ನಿಲ್ದಾಣಗಳ ಬಳಿ ನಡೆಯುತ್ತಿರುವ ರಸ್ತೆ, ಮಳೆ ನೀರಿನ ಚರಂಡಿ ಹಾಗೂ ಒಳಚರಂಡಿ ಕಾಮಗಾರಿಗಳನ್ನು ವೇಗವಾಗಿ ಮುಗಿಸಬೇಕು ಎಂದು ಸೂಚನೆ ನೀಡಿದರು.

ಮೆಟ್ರೋ ಕಾಮಗಾರಿಯಿಂದ ಹಾನಿಗೀಡಾದ ಮೂಲಸೌಕರ್ಯವನ್ನೂ ಸರಿಪಡಿಸುವಂತೆ ಸೂಚಿಸಿದ ಸಚಿವರು, ಕ್ಷೇತ್ರದ ರಸ್ತೆಗಳ ವೈಟ್‌ ಟಾಪಿಂಗ್ ಕಾಮಗಾರಿಯ ಮಾಹಿತಿ ಪಡೆದುಕೊಂಡು ಆದಷ್ಟು ಬೇಗ ಗುಣಮಟ್ಟದ ರಸ್ತೆ ಮಾಡುವಂತೆ ತಾಕೀತು ಮಾಡಿದರು.

ಸಚಿವ ಕೆ.ಜೆ.ಜಾರ್ಜ್ ಅವರ ಕ್ಷೇತ್ರ ಪರ್ಯಟನೆ ವೇಳೆ ಕೆ.ಜಿ.ಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸುಮಿತ್ರ ಮುನಿರಾಜು, ಹೆಣ್ಣೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್‌.ಎ. ಪುಲಿಕೇಶಿ ಹಾಗೂ ಅಮರ್‌ನಾಥ್, ವಾರ್ಡ್ ಅಧ್ಯಕ್ಷರುಗಳು ಮತ್ತು ಜಿಬಿಎ, ಬಿಡಬ್ಲ್ಯೂಎಸ್‌ಎಸ್‌ಬಿ, ಬೆಸ್ಕಾಂ, ಕೆಪಿಟಿಸಿಎಲ್ ಅಧಿಕಾರಿಗಳು ಉಪಸ್ಥಿತರಿದ್ದರು.

Tags: AmarnathBescomBWSSBGBAHA PulikeshiHennuruKJ GeorgeKPTCLMinister GJ GeorgeMLASarvagna NagarSumithra Muniraju
Previous Post

ಮುಂದಿನ ದಿನಗಳ ಬಗ್ಗೆ ಆತಂಕಕಾರಿ ಭವಿಷ್ಯ ನುಡಿದ ಬಬಲಾದಿ ಸದಾಶಿವ ಮುತ್ಯಾ!

Next Post

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಇಲ್ಲಿದೆ ಮುಂದಿನ 3 ದಿನದ ಹವಾಮಾನ ವರದಿ

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

April 19, 2026
Next Post
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಇಲ್ಲಿದೆ ಮುಂದಿನ 3 ದಿನದ ಹವಾಮಾನ ವರದಿ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಇಲ್ಲಿದೆ ಮುಂದಿನ 3 ದಿನದ ಹವಾಮಾನ ವರದಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada