ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಒಪ್ಪಿಕೊಂಡಿದೆ. ಅದರಲ್ಲೂ ಜಮೀರ್ ಮಾತಿನಿಂದಲೇ ಸೋಲು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಜಮೀರ್ ಹೇಳಿಕೆ ಹಿಂದೆ ಯಾರಿದ್ದಾರೆ..? ಯಾವ ಉದ್ದೇಶಕ್ಕೆ ಜಮೀರ್ ಅಹ್ಮದ್ ಖಾನ್ ಹೇಳಿದ್ರು..? ಯೋಗೇಶ್ವರ್ ಸೋಲಿಸುವ ಉದ್ದೇಶ ಮುಂಚೆಯೇ ಇತ್ತಾ..? ಅನ್ನೋ ಬಗ್ಗೆಯೂ ಅನುಮಾನಗಳು ಹುಟ್ಟಿಕೊಂಡಿವೆ. ಈ ಬಗ್ಗೆ ಜಮೀರ್ ಬಳಗದಲ್ಲೇ ಇದ್ದ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಜಮೀರ್ ಹೇಳಿಕೆ ಹಿಂದೆ ಕುಮಾರಸ್ವಾಮಿ ಇರಬಹುದು ಅನ್ನೋ ಅನುಮಾನ ವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿ ಹಾಗು ಜಮೀರ್ ಅಹ್ಮದ್ ಖಾನ್ ಗಳಸ್ಯ ಕಂಟಸ್ಯ ಸ್ನೇಹಿತರು. ಈಗಲೂ ಜಮೀರ್ ಹಾಗು ಕುಮಾರಣ್ಣ ಚೆನ್ನಾಗಿದ್ದಾರೆ. ಈ ಹೇಳಿಕೆ ಕೊಡುವ ಹಿಂದೆ ಕುಮಾರಸ್ವಾಮಿಯೇ ಇರಬೇಕು ಎನ್ನುವ ಅನುಮಾನವನ್ನು ರಮೇಶ್ ಬಂಡಿಸಿದ್ದೇಗೌಡ ಹೇಳಿದ್ದಾರೆ. ಅಂದರೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಯಾಗಿದ್ದ ಸಿ.ಪಿ ಯೋಗೇಶ್ವರ್ ಸೋಲಿಸಲು ಕಾಂಗ್ರೆಸ್ ನಾಯಕರೇ ಯೋಜನೆ ರೂಪಿಸಿದ್ರಾ..? ಅನ್ನೋ ಅನುಮಾನವನ್ನು ಈ ಹೇಳಿಕೆ ಹುಟ್ಟುಹಾಕಿದೆ. ಬಿಜೆಪಿಯಲ್ಲಿದ್ದ ಯೋಗೇಶ್ವರ್ ಜೆಡಿಎಸ್ನಿಂದ ಟಿಕೆಟ್ ಪಡೆದು ಗೆಲ್ಲುವ ಎಲ್ಲಾ ಸಾಧ್ಯತೆಗಳೂ ಇತ್ತು. ಆದರೆ ಕಾಂಗ್ರೆಸ್ನಿಂದ ಆಹ್ವಾನ ಕೊಟ್ಟು ಸೋಲಿಸಿದ್ರಾ..? ಅನ್ನೋ ಚರ್ಚೆಗಳು ನಡೆಯುತ್ತಿವೆ.
ಕರಿಯಾ ಕುಮಾರಸ್ವಾಮಿ ಎಂದು ಹೇಳು ಎಂದು ಸಚಿವ ಜಮೀರ್ಗೆ ಕುಮಾರಸ್ವಾಮಿಯೇ ಹೇಳಿಕೊಟ್ಟಿದ್ದಾರೆ ಎನ್ನುವಂತೆ ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ಅಂದರೆ ಜಮೀರ್ ಅಹ್ಮದ್ ಖಾನ್, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸುವ ಉದ್ದೇಶದಿಂದಲೇ ಹೇಳಿದ್ದಾರೆ ಎಂದರೆ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದೇ ಅರ್ಥ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ ಶಿವಕುಮಾರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಡಿ.ಕೆ ಸುರೇಶ್ ಮಾತನಾಡಿ, ಈ ಮೊದಲೂ ಜಮೀರ್ ಹೇಳಿದ್ದರು. ಆಗ ಇದರ ಬಗ್ಗೆ ಮಾಧ್ಯಮಗಳು ದೊಡ್ಡದಾಗಿ ಸುದ್ದಿ ಮಾಡಿಲ್ಲ. ಚುನಾವಣೆ ಸಮಯದಲ್ಲಿ ಇದನ್ನು ದೊಡ್ಡದು ಮಾಡಲಾಯ್ತು ಎನ್ನುವ ಮೂಲಕ ಚುನಾವಣೆಯಲ್ಲಿ ಪರಿಣಾಮ ಬೀರಿದೆ ಅನ್ನೋದನ್ನು ಒಪ್ಪಿಕೊಂಡಿದ್ದಾರೆ.
ಈಗಾಗಲೇ ಜಮೀರ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಅಷ್ಟೇ ಅಲ್ಲದೆ ಕಾಂಗ್ರೆಸ್ ಪಕ್ಷದ ಮುಖ್ಯ ವಾಹಿನಿಯಲ್ಲಿ ಜಮೀರ್ ಅವರನ್ನು ಮುಸ್ಲಿಂ ಅಗ್ರಗಣ್ಯ ಮುಖಂಡ ಎನ್ನುವಂತೆ ಬಿಂಬಿಸಬಾರದು ಎಂದು ಕೆಪಿಸಿಸಿಗೆ ಪತ್ರ ಬರೆದು ಮುಸ್ಲಿಂ ಮುಖಂಡರೇ ಒತ್ತಾಯ ಮಾಡಿದ್ದಾರೆ. ಇದೀಗ ರಮೇಶ್ ಬಂಡಿಸಿದ್ದೇಗೌಡ ಹೇಳಿಕೆ ಜಮೀರ್ ಕುಮಾರಸ್ವಾಮಿ ಜೊತೆಗೆ ಕೈಜೋಡಿಸಿದ್ದಾರೆ ಎನ್ನುವಂತಿದೆ. ಇದೀಗ ಕೆಪಿಸಿಸಿ ಯಾವ ಕ್ರಮ ತೆಗೆದುಕೊಳ್ಳುತ್ತೆ..? ಕಾಂಗ್ರೆಸ್ ಹೈಕಮಾಂಡ್ ಚುನಾವಣಾ ಫಲಿತಾಂಶದ ತನಕ ಕಾದು, ಆ ಬಳಿಕ ಸಚಿವ ಸ್ಥಾನದಿಂದ ಕೊಕ್ ಕೊಡುವ ಸಾಧ್ಯತೆ ಇದೆಯಾ..? ಅನ್ನೋ ಬಗ್ಗೆಯೂ ಕಾಂಗ್ರೆಸ್ನ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಆಗುತ್ತಿರುವ ವಿಚಾರ.