ಸಚಿವರ ಅಧ್ಯಕ್ಷತೆಯ ಕೇಳಚಂದ್ರ ಫೌಂಡೇಷನ್‌ನಿಂದ ಕೌಶಲ ತರಬೇತಿ, ಕೌಶಲ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಿಸಿದ ಸಚಿವ ಕೆ.ಜೆ.ಜಾರ್ಜ್.

ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಕಾಡುಗೊಂಡನಹಳ್ಳಿಯಲ್ಲಿ ಕೇಳಚಂದ್ರ ಫೌಂಡೇಷನ್ ನಡೆಸುವ ಕೌಶಲ ಕೇಂದ್ರದಲ್ಲಿ ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕ್ಷೇತ್ರದ ಶಾಸಕರೂ ಆಗಿರುವ ಇಂಧನ ಇಂಧನ ಸಚಿವ ಹಾಗೂ ಕೆ.ಜೆ.ಜಾರ್ಜ್ ಅವರು ಶನಿವಾರ ಪ್ರಮಾಣಪತ್ರ ವಿತರಿಸಿದರು. ಸರ್ವಜ್ಞನಗರ ಕ್ಷೇತ್ರದಲ್ಲಿ ಕೇಳಚಂದ್ರ ಫಂಡೇಷನ್ 2019ರಿಂದ ಕೌಶಲ್ಯ ತರಬೇತಿ ಕೇಂದ್ರ ನಡೆಸುತ್ತಿದ್ದು, ಈ ಮೂಲಕ ಮಹಿಳೆಯರು ಹಾಗೂ ಯುವಜನರ ಸ್ವಾವಲಂಬಿ ಜೀವನಕ್ಕೆ ಫೌಂಡೇಷನ್‌ನ ಅಧ್ಯಕ್ಷರ ಆಗಿರುವ ಸಚಿವ ಕೆ.ಜೆ. ಜಾರ್ಜ್ ನೆರವಾಗುತ್ತಿದ್ದಾರೆ.
ಕೌಶಲ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಿಸಿದ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್, “ಫೌಂಡೇಷನ್ ವತಿಯಿಂದ ಕೌಶಲ ತರಬೇತಿ ನೀಡಲಾಗುತ್ತಿದೆ. ಪ್ರಸ್ತುತ ಕಂಪ್ಯೂಟರ್ ಕಲಿಕೆ, ಹೊಲಿಗೆ ತರಬೇತಿ, ಕಸೂತಿ, ಕರಕುಶಲ ವಸ್ತುಗಳ ತಯಾರಿಕೆಗೆ 3 ಮತ್ತು 6 ತಿಂಗಳ ತರಬೇತಿ ನಡೆಸಲಾಗುತ್ತಿದೆ. ಕೌಶಲ ತರಬೇತಿ ಪಡೆದವರು ಸ್ವಯಂ ಉದ್ಯೋಗ ಕೈಗೊಳ್ಳಲು ಸಜ್ಜಾಗಿದ್ದಾರೆ,” ಎಂದು ಹೇಳಿದರು.

“ಅಭಿವೃದ್ಧಿ ಬಗ್ಗೆ ಭಾಷಣ ಮಾಡುವ ಜನಪ್ರತಿನಿಧಿ ನಾನಲ್ಲ. ಕೆಲಸ ಮಾಡಿ ಜನರಿಗೆ ಹತ್ತಿರವಾದವನು ನಾನು. ಕ್ಷೇತ್ರದಲ್ಲಿ ಮೂಲ ಸೌಕರ್ಯ ಕಲ್ಪಿಸುವ ಜತೆಗೆ ಶಿಕ್ಷಣ, ಉದ್ಯೋಗಕ್ಕೆ ಪೂರಕವಾದ ಕೌಶಲ ತರಬೇತಿ ಮತ್ತು ಆರೋಗ್ಯಕ್ಕೆ ಒತ್ತು ನೀಡಿದ್ದೇನೆ. ನಮ್ಮ ಫೌಂಡೇಷನ್ ವತಿಯಿಂದ ಮೊದಲಿಗೆ ಕಾಡುಗೊಂಡನಹಳ್ಳಿಯಲ್ಲಿ ಕೌಶಲ ತರಬೇತಿ ಕೇಂದ್ರ ಆರಂಭ ಮಾಡಲಾಯಿತು. ಇದೀಗ ಜೀವನಹಳ್ಳಿ ವಾರ್ಡ್‌ನಲ್ಲೂ ಒಂದು ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಕೆ.ಜೆ.ಹಳ್ಳಿ ಕೌಶಲ ಕೇಂದ್ರ ಮಾದರಿ ಕೇಂದ್ರವಾಗಿದೆ. 2000ಕ್ಕೂ ಹೆಚ್ಚಿನ ಮಹಿಳೆಯರು ತರಬೇತಿ ಪೂರ್ಣಗೊಳಿಸಿದ್ದಾರೆ ಎಂಬುದು ಹೆಮ್ಮಯ ವಿಷಯ. ಈ ಶ್ರೇಯ ಸುಜಾ ಜಾರ್ಜ್ ಅವರಿಗೆ ಸಲ್ಲಬೇಕು,” ಎಂದರು.
“ಶೀಘ್ರದಲ್ಲೇ ಹೆಚ್.ಬಿ.ಆರ್. ಬಡಾವಣೆಯಲ್ಲಿ ನೂತನ ಆಸ್ಪತ್ರೆ ಲೋಕಾರ್ಪಣೆ ಆಗಲಿದೆ. ಕ್ಷೇತ್ರದಲ್ಲಿರುವ ಡಯಾಲಿಸಿಸ್ ಕೇಂದ್ರದಲ್ಲಿ 37,000ಕ್ಕೂ ಹೆಚ್ಚು ಜನರಿಗೆ ಡಯಾಲಿಸಿಸ್ ಸೌಲಭ್ಯ ಒದಗಿಸಲಾಗಿದೆ. ಮಧುಮೇಹ ಮತ್ತಿತರ ಆರೋಗ್ಯ ಸಮಸ್ಯೆಗಳಿಗೆ ಉಚಿತ ಔಷಧ ಒದಗಿಸಿ ಜನರ ಆರೋಗ್ಯ ರಕ್ಷಣೆಗೆ ಒತ್ತು ನೀಡಲಾಗಿದೆ,” ಎಂದು ಹೇಳಿದರು.

ಕೇಳಚಂದ್ರ ಕೌಶಲ ಅಭಿವೃದ್ಧಿ ಕೇಂದ್ರದ ಸಂಚಾಲಕರಾಗಿರುವ ಡಾ.ಬಿ.ಎಸ್.ತ್ರಿವೇಣಿ ಮಾತನಾಡಿ, “ಇಂಟಿಗ್ರೇಟೆಡ್ ಮೆಡಿಕಲ್ ಸೆಂಟರ್ ಆಗಿ ಆರಂಭಗೊಂಡ ಕೆ.ಜೆ.ಹಳ್ಳಿ ಕೇಂದ್ರ ಇಂದು ಸಮರ್ಥ ಕೌಶಲ ಅಭಿವೃದ್ಧಿ ಕೇಂದ್ರವಾಗಿದೆ. ಕಂಪ್ಯೂಟರ್ ಕಲಿಕೆ ನಂತರ ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ,” ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಫೌಂಡೇಷನ್ ಉಪಾಧ್ಯಕ್ಷರಾದ ಸುಜಾ ಜಾರ್ಜ್, ಕಾಡುಗೊಂಡನಹಳ್ಳಿ ವಾರ್ಡ್ ಮುಖಂಡರು, ಸ್ಥಳೀಯ ನಾಯಕರು ಉಪಸ್ಥಿತರಿದ್ದರು.

ಸರ್ವಜ ನಗರದ ರಸ್ತೆ ಸುಧಾರಣೆಗೆ ಸಚಿವರ ಖಡಕ್ ಸೂಚನೆ
ಬಾಣಸವಾಡಿಯಲ್ಲಿರುವ ಶಾಸಕರ ಕಚೇರಿಯಲ್ಲಿ ಕ್ಷೇತ್ರದ ಜನರ ಅಹವಾಲು ಸ್ವೀಕರಿಸಿದ ಬಳಿಕ ರಸ್ತೆ ಸಮೀಕ್ಷೆ ವರದಿ ಪರಿಶೀಲಿಸಿ ಕ್ಷೇತ್ರದ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸಚಿವ ಜಾರ್ಜ್ ಸುಧೀರ್ಘ ಚರ್ಚೆ ನಡೆಸಿದರು. ‘ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚಿ, ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿ. ನೆಪ ಹೇಳದೆ ರಸ್ತೆಗಳ ಅಭಿವೃದ್ಧಿಗೆ ಮುಂದಾಗಿ,’ ಎಂದು ಸಚಿವ ಜಾರ್ಜ್ ಖಡಕ್ ಸೂಚನೆ ನೀಡಿದರು. ಕೆಲ ದಿನಗಳ ಬಳಿಕ ಖುದ್ದಾಗಿ ರಸ್ತೆಗಳ ಪರಿಶೀಲನೆ ನಡೆಸುವುದಾಗಿಯೂ ಎಂದು ಅಧಿಕಾರಿಗಳಿಗೆ ಸಚಿವರು ತಿಳಿಸಿದರು.

ಕಲ್ಯಾಣ್ ನಗರದಲ್ಲಿ ಅರೇಬಿಯನ್ ಪ್ಯಾಲೇಸ್ ಹೋಟೇಲ್ ಲೋಕಾರ್ಪಣೆ.
ಕಲ್ಯಾಣ್ ನಗರದ ಸಿಎಂಆರ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಅರೇಬಿಯನ್ ಪ್ಯಾಲೆಸ್ ಮಂಡಿ ರೆಸ್ಟೋರೆಂಟ್ ಉದ್ಘಾಟಿಸಿದ ಸಚಿವ ಜಾರ್ಜ್ ಹೋಟೆಲ್ ಉದ್ಯಮಿಗೆ ಶುಭಕೋರಿದರು.