ಕಳೆದ ಒಂದು ವಾರದಿಂದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪನವರ ಹೇಳಿಕೆಗಳನ್ನ ಗಮನಿಸುತ್ತಾ ಹೋದರೆ, ಕರೋನಾ ಸೋಂಕಿನ ಕುರಿತು ತಲೆಬುಡವಿಲ್ಲದ ಲೆಕ್ಕಾಚಾರ ಏನು ಎಂಬುದು ತಿಳಿಯುತ್ತದೆ. ಸಚಿವರ ಕೃಪಾಪೋಷಿತ ಓಂ ಶಕ್ತಿ ಪ್ರವಾಸ ಶಿವಮೊಗ್ಗದಲ್ಲಿ ಕೋವಿಡ್ ಸೋಂಕನ್ನ ಹರಡಿಸಿದ್ದು ಈಗ ಆತಂಕ ಮೂಡಿಸಿದೆ.
ಕಳೆದ ವಾರ ವೀಕೆಂಡ್ ಕರ್ಫ್ಯೂ ಘೋಷಣೆ ಹೊರಬೀಳುತ್ತಿದ್ದಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಶಿವಮೊಗ್ಗ ಉಸ್ತುವಾರಿ ಸಚಿವ ಕೆಎಸ್ ಈಶ್ವರಪ್ಪ ಎಲ್ಲಾ ಕಡೆ ಕಟ್ಟುನಿಟ್ಟಿನ ಕ್ರಮ ಅನವಶ್ಯ ಎಂದು ಹೇಳಿದ್ದರು. ಬೆಂಗಳೂರಲ್ಲಿ ಹೆಚ್ಚಿದೆ ಆದರೆ ಶಿವಮೊಗ್ಗದಂತಹ ಜಿಲ್ಲೆಗಳಲ್ಲಿ ಒಂದೋ ಎರಡೋ ಬರುತ್ತಿದೆ. ಇಡೀ ಕರ್ನಾಟಕಕ್ಕೆ ಅನ್ವಯಿಸಿ ನಿಯಮ ಹೇರುವುದು ಸರಿ ಅಲ್ಲ. ಈ ಕುರಿತು ಸಚಿವ ಸಂಪುಟದಲ್ಲಿ ಮಾತಾಡ್ತೀನಿ ಎಂದು ಗೊಂದಲ ಮೂಡಿಸಿದ್ದರು. ಸಚಿವ ಸಂಪುಟ ಸಭೆಯಲ್ಲೂ ಇವರ ಮಾತಿಗೆ ಯಾರೂ ಕಿವಿಗೊಡಲಿಲ್ಲ.
ಈಶ್ವರಪ್ಪನವರು ಬೇರೆಲ್ಲೆಡೆ ಕರ್ಫ್ಯೂ ನಿಯಮಗಳು ಬೇಡ ಅಂದಿದ್ದೇನೋ ನಿಜ ಆದರೆ ಕಾಂಗ್ರೆಸ್ ಪಾದಯಾತ್ರೆ ಮಾತ್ರ ನಡೆಯಕೂಡದು. ಅದು ಸಾವಿನ ಯಾತ್ರೆ ಎಂಬಂತೆ ವಾಗ್ದಾಳಿ ನಡೆಸಿದ್ದರು. ಈಶ್ವರಪ್ಪ ಕೋವಿಡ್ ವೀಕೆಂಡ್ ಕರ್ಫ್ಯೂ ಬೇಡ ಎಂದಿದ್ದು ಮಾತ್ರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಈ ಹೇಳಿಕೆಗಳ ಮಧ್ಯೆ ಶಿವಮೊಗ್ಗದಿಂದ ನೂರಾರು ಬಸ್‌ಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ತಮಿಳುನಾಡಿನ ಓಂ ಪರಾಶಕ್ತಿ ಯಾತ್ರೆಗೆ ತೆರಳಿದ್ದ ಮಹಿಳೆಯರು ಮಕ್ಕಳು ಮರಳಿದರು. ಶಿವಮೊಗ್ಗ ನಗರ ಕೋವಿಡ್ ಗೆ ತುತ್ತಾಗುವ ಆತಂಕ ಮೂಡಿತು. ಎಲ್ಲಾ ಬಸ್ ಮೇಲೂ ಈಶ್ವರಪ್ಪನವರ ಚಿತ್ರಗಳಿದ್ದರು ಅಧಿಕೃತವಾಗಿ ಈಶ್ವರಪ್ಪನವರೇ ಪ್ರವಾಸಕ್ಕೆ ಅಣಿಮಾಡಿದ್ದು ಎಂದು ಹೇಳಲಾಗುತ್ತಿಲ್ಲ. ಅವರೆಲ್ಲಾ ಸಾಲು ಸಾಲಾಗಿ ಶಿವಮೊಗ್ಗದೆಡೆ ಬರತೊಡಗಿದ್ದರು.
ಶಿವಮೊಗ್ಗ ಜಿಲ್ಲಾಧಿಕಾರಿ ಕೆಬಿ ಶಿವಕುಮಾರ್ ಹಾಗೂ ಉಸ್ತುವಾರಿ ಸಚಿವ ಕೆಎಸ್ ಈಶ್ವರಪ್ಪ ಸೇರಿ ಇವರನ್ನೆಲ್ಲಾ ಸಹ್ಯಾದ್ರಿ ಕಾಲೇಜಿನ ಗ್ರೌಂಡ್‌ನಲ್ಲಿ ತಪಾಸಣೆ ಮಾಡಲು ಏರ್ಪಾಟು ಮಾಡಿದರು. ಅಂದೇ ಹಲವರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡರೂ ಸಹ ಜಿಲ್ಲಾಡಳಿತ ಮಾಧ್ಯಮಗಳಿಗೆ ಮಾಹಿತಿ ನೀಡಲಿಲ್ಲ. ಭಕ್ತರನ್ನೆಲ್ಲಾ ರ್‍ಯಾಪಿಡ್ ಟೆಸ್ಟ್ ಮಾಡಿ, ಏಳು ದಿನಗಳ ಕಾಲ ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದರು. ಈಶ್ವರಪ್ಪನವರು ಮಾಧ್ಯಮಗಳಿಗೆ ಹೇಳಿಕೆ ನೀಡಿ, ತಾವೂ ಸಹ ಭಕ್ತರ ಜೊತೆ ಓಂ ಶಕ್ತಿ ದೇಗುಲಕ್ಕೆ ತೆರಳಿದ್ದಾಗಿ ಮಾಹಿತಿ ನೀಡಿದರು. ಆದರೆ ಹೋಂ ಕ್ವಾರಂಟೈನ್ ಆಗದೇ ಮರುದಿನ ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಸಭೆಯಲ್ಲಿ ಭಾಗವಹಿಸಿ ಅಲ್ಲೂ ಕೊರೋನಾ ನಿಯಮಗಳನ್ನ ಗಾಳಿಗೆ ತೂರಿದರು.
ಮರು ದಿನ ಶಿವಮೊಗ್ಗ ಜಿಲ್ಲಾಧಿಕಾರಿ ಕೆಬಿ ಶಿವಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ ಓಂ ಶಕ್ತಿಗೆ ತೆರಳಿದ್ದ ಭಕ್ತರಲ್ಲಿ ಆರು ಜನರಿಗೆ ಮಾತ್ರ ಕೋವಿಡ್ ಬಂದಿದೆ ಎಂದರು. ಸಂಜೆಯಾಗುತ್ತಿದ್ದಂತೆ ಮೂವತ್ತಕ್ಕೂ ಅಧಿಕ ಜನರಿಗೆ ಸೋಂಕು ದೃಢವಾಗಿತ್ತು. ಇಪ್ಪತ್ತರ ಆಸುಪಾಸಿನಲ್ಲಿದ್ದ ಶಿವಮೊಗ್ಗ ಕೋವಿಡ್ ಪ್ರಕರಣಗಳ ಸಂಖ್ಯೆ ನೂರೈವತ್ತರ ಗಡಿಗೆ ಬಂದು ನಿಂತಿವೆ. ಇದಕ್ಕೆ ಓಂ ಶಕ್ತಿ ಪ್ರವಾಸಕ್ಕೆ ತೆರಳಿದ್ದವರ ಕೊಡುಗೆ ಹೆಚ್ವು ಆದರೂ ಒಪ್ಪಿಕೊಳ್ಳದ ಸಚಿವರು ಚರ್ಚ್, ಮಸೀದಿ, ದೇವಸ್ಥಾನಗಳಿಂದಷ್ಟೇ ಕೊರೋನಾ ಬರೋದಿಲ್ಲ ಎಂದು ಅಸಂಬಂಧ ಉತ್ತರ ನೀಡಿದ್ದಾರೆ.
ಒಂದೋ ಎರಡೋ ಪ್ರಕರಣಗಳು ದಾಖಲಾಗಿವೆ, ಶಿವಮೊಗ್ಗದಂತಹ ಜಿಲ್ಲೆಗೆ ಕೋವಿಡ್ ನಿಯಮಗಳು ಬೇಕಿಲ್ಲ ಎಂದು ಉಡಾಫೆ ಮಾತನಾಡಿದ್ದ ಸಚಿವರೀಗ ಗಪ್‌ಚುಪ್ ಆಗಿದ್ದಾರೆ. ಈಗ ಅವರು ಕಾಂಗ್ರೆಸ್ ಮುಖಂಡರ ಮೇಕೆದಾಟು ಪಾದಯಾತ್ರೆ ಬಗ್ಗೆ