400ಕ್ಕೂ ಹೆಚ್ಚು ಸಂಸತ್ ಸಿಬ್ಬಂದಿಗೆ ಕರೋನಾ ಪಾಸಿಟಿವ್; ಹಾಜರಾತಿ ನಿರ್ಬಂದಿಸಿದ ರಾಜ್ಯಸಭಾ!
ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್ ಹಾಗೂ ಓಮಿಕ್ರಾನ್ ರೂಪಾಂತರಿ ಈಗ ಸಂಸತಿಗೂ ಪ್ರವೇಶಿಸಿದೆ. ಸಂಸತ್ತಿನಲ್ಲಿ ನಾಲೂರಕ್ಕು ಹೆಚ್ಚು ಸಂಬಂಧಿಗಳಿಗೆ ಕರೋನ ದಥಢವಾಗಿರುವ ಹಿನ್ನೆಲೆ ರಾಜ್ಯಸಭೆಯ ಹಾಜರಾತಿಯನ್ನು ನಿರ್ಬಂಧಿಸಲಾಗಿದೆ.
ಹೌದು, ಇತ್ತೀಚಿಗೆ ಸಂಸತ್ತಿನಲ್ಲಿ ಕೆಲಸ ಮಾಡುವ 400ಕ್ಕೂ ಅಧಿಕ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡ ನಂತರ ಈ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.
ಹೊಸ ಮಾರ್ಗಸೂಚಿಗಳ ಪ್ರಕಾರ ಶೇ.50 ರಷ್ಟು ಅಧಿಕಾರಿಗಳು ಮತ್ತು ಅಂಡರ್ ಸೆಕ್ರೆಟರಿ, ಎಕ್ಸಿಕ್ಯೂಟಿವ್ ಆಫೀಸರ್ಗಳು ಈ ತಿಂಗಳ ಅಂತ್ಯದವರೆಗೂ ಮನೆಯಿಂದಲೇ ಕೆಲಸ ಮಾಡಬೇಕು ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ತಿಂಗಳ ಅಂತ್ಯದಲ್ಲಿ ಶುರುವಾಗಲಿರುವ ಬಜೆಟ್ ಅಧಿವೇಶನಕ್ಕೆ ಮುನ್ನವೇ ಅಧಿಕಾರಿಗಳು ಸೋಂಕು ಹರಡದಂತೆ ಅಗತ್ಯ ಕ್ರಮಗಳನ್ನು ವಹಿಸುವಂತೆ ಅಧಿಕಾರಿಗಳಿಗೆ ರಾಜ್ಯಸಭಾ ಅಧ್ಯಕ್ಷ ವೆಂಕಟ ನಾಯ್ಡು ಸೂಚಿಸಿದ್ದಾರೆ.
ಹೊಸ ಮಾರ್ಗಸೂಚಿಗಳ ಪ್ರಕಾರ ಅಂಗವಿಕಲರು ಹಾಗೂ ಗರ್ಭಿಣಿಯರಿಗೆ ವಿನಾಯಿತಿಯನ್ನು ನೀಡಲಾಗಿದೆ.

ಜನವರಿ 4-8ರವರೆಗೆ ಸುಮಾರು 402 ಅಧಿಕಾರಿಗಳಿಗೆ ಸೋಂಕು ಕಾಣಿಸಿಕೊಂಡಿದ್ದು ಅವರೆಲ್ಲರ ಗಂಟಲು ಧ್ರವ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಜಿನೊಮ್ ಸೀಕ್ವೆನ್ಸ್ಗೆ ಕಳುಹಿಸಿಕೊಡಲಾಗಿದೆ.
ಈ ಬಗ್ಗೆ ಮಾತನಾಡಿರುವ ಅಧಿಕಾರಿಯೊಬ್ಬರು ಕರೋನಾ ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಹೆಚ್ಚು ನಿಗಾ ವಹಿಸಲಾಗುವುದು ಎಂದು ತಿಳಿಸಿದ್ದಾರೆ.





