ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ (Godess chamundeshwari) ಸನ್ನಿದಿಗೆ ಸಚಿವ ಭೈರತಿ ಸುರೇಶ್ (Bhairati suresh) ತಮ್ಮ ಕುಟುಂಬ ಸಮೇತರಾಗಿ ಭೇಟಿಕೊಟ್ಟಿದ್ದಾರೆ.ಇಂದು ಮೈಸೂರು ಪ್ರವಾಸ ಕೈಗೊಂಡಿರುವ ಸಚಿವ ಭೈರತಿ ಸುರೇಶ್, ತಮ್ಮ ತಾಯಿ, ಪತ್ನಿ, ಮಗಳು ಹಾಗೂ ಬೀಗ ಎಸ್.ಆರ್ ವಿಶ್ವನಾಥ್ (SR Vishwanath) ಸೇರಿದಂತೆ ಹಲವರ ಜೊತೆ ಚಾಮುಂಡಿ ತಾಯಿಯ ಆಶೀರ್ವಾದ ಪಡೆದಿದ್ದಾರೆ.

ಅಕ್ರಮ ನಿವೇಶನ ಹಂಚಿಕೆಯ ಆರೋಪವಿದ್ದ ಮೂಡ ಪ್ರಕರಣದಲ್ಲಿ ಸಿಎಂ ಸಿದ್ದರಾನಯ್ಯ ಗೆ (Siddaramaiah) ಕ್ಲೀನ್ ಚೀಟ್ ನೀಡಿದ ಬೆನ್ನಲ್ಲೇ ಇಂದು ಸಚಿವ ಭೈರತಿ ಸುರೇಶ್ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ಹೀಗಾಗಿ ಚಾಮುಂಡೇಶ್ವರಿಗೆ ವಿಶೇಷ ಪೋಜೆ ಸಲ್ಲಿಸಿ ಧನ್ಯವಾದ ಅರ್ಪಿಸಿದ್ದಾರೆ.
ಮೈಸೂರಿನ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ನಂಜನಗೂಡು ನಂಜುಂಡೇಶ್ವರನ ದರ್ಶನ ಪಡೆಯಲು ಭೈರತಿ ಸುರೇಶ್ ತೆರಳಿದರು. ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಮೇಲೆ ಆರೋಪ ಬಂದಿತ್ತು ಮತ್ತು ನಗರ ಅಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ವಿರುದ್ಧವೂ ಹಲವು ಆರೋಪಗಳು ಕೇಳಿಬಂದಿತ್ತು