
ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಸಂಜೆ ಒಳಗೆ ಕೋರ್ಟ್ಗೆ ಹಾಜರಾಗದಿದ್ದರೆ ಅರೆಸ್ಟ್ ವಾರೆಂಟ್ ಹೊರಡಿಸುವುದಾಗಿ ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದ್ದಾರೆ.. 2013ರ ಕೆಜಿಎಫ್ ಗಲಾಟೆಯ ಸಂಬಂಧ ಇಂದು ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು.
ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ 2013ರ ವಿಧಾನಸಭಾ ಚುನಾವಣೆಯಲ್ಲಿ ಕೆಜಿಎಫ್ನ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ವಿ.ಶಂಕರ್, ಅಂದಿನ ಸಂಸದ ಕೆ.ಹೆಚ್ ಮುನಿಯಪ್ಪ ಹಾಗೂ ಬೆಂಬಲಿಗರು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿತ್ತು. ಹಲ್ಲೆ ಪ್ರಕರಣದಲ್ಲಿ ಇಂದು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಬೇಕಿದ್ದ ಸಚಿವ ಕೆ.ಹೆಚ್.ಮುನಿಯಪ್ಪ ಗೈರಾಗಿದ್ರು.

ನ್ಯಾಯಮೂರ್ತಿ ಗಜಾನನ ಭಟ್ ಎದುರು ಇಂದು ಸಚಿವ ಮುನಿಯಪ್ಪ ಹಾಜರಾಗಬೇಕಿತ್ತು. ಗೈರು ಹಾಜರಾಗಿದ್ದಕ್ಕೆ ನ್ಯಾಯಮೂರ್ತಿಗಳು ಅಸಮಧಾನ ಹೊರಹಾಕಿದ್ದು, ಇಂದಿನ ಕೋರ್ಟ್ ಅವಧಿ ಮುಗಿಯುವುದರ ಒಳಗೆ ನ್ಯಾಯಾಲಯಕ್ಕೆ ಹಾಜರಾಗಬೇಕು. ಒಂದು ವೇಳೆ ಹಾಜರಾಗದಿದ್ದರೆ, ಸಚಿವರನ್ನ ಬಂಧಿಸಿ ಕರೆತರಲು ಆದೇಶ ಹೊರಡಿಸುವುದಾಗಿ ತಿಳಿಸಿದ್ದಾರೆ.

ಸಚಿವ ಮುನಿಯಪ್ಪ ಪರ ವಕೀಲರಿಗೆ ನ್ಯಾಯಮೂರ್ತಿಗಳು ತಿಳಿಸಿದ್ದು, ನ್ಯಾಯಮೂರ್ತಿಗಳ ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಇಂದೇ ಕೋರ್ಟ್ ಎದುರು ಹಾಜರು ಮಾಡಿಸಲು ಸಚಿವ ಮುನಿಯಪ್ಪ ಪರ ವಕೀಲರು ಪ್ರಯತ್ನಿಸುತ್ತಿದ್ದಾರೆ. ಸಂಜೆ ಕೋರ್ಟ್ ಕಲಾಪ ಮುಗಿಯುವ ಹೊತ್ತಿಗೆ ಹಾಜರಾಗುವ ಸಾಧ್ಯತೆಯಿದೆ. ಒಂದು ವೇಳೆ ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ಬಂಧನದ ವಾರೆಂಟ್ ಜಾರಿ ಆಗುವ ಸಾಧ್ಯತೆ ಇದೆ..