ಬೀದರ್: ಮಾ.19: ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ನೂರಾರು ಎಕರೆಯಲ್ಲಿ ಬೆಳೆದಿದ್ದ ಜೋಳ, ಕುಸುಬಿ, ಗೋಧಿ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಗಳು ನೀರುಪಾಲಾಗಿದೆ. ಜಿಲ್ಲೆಯಲ್ಲಿ ಸರಾಸರಿ 11.35 ಮಿ.ಮೀ ಮಳೆಯಾಗಿದ್ದು, ಕಮಲನಗರ ತಾಲೂಕಿನ ದಾಬಕಾದಲ್ಲಿ 42.30 ಮಳೆ ದಾಖಲಾಗಿದೆ. ಜಿಲ್ಲೆಯಲ್ಲಿ ಸುಮಾರು 650 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ನಿಂತಿದ್ದ ವಿವಿಧ ಬೆಳೆಗಳು ನೀರುಪಾಲಾಗಿದೆ. 152 ಹೆಕ್ಟೇರ್ ಪ್ರದೇಶದಲ್ಲಿನ ಕಲ್ಲಂಗಡಿ, ಕರಬುಜ, ಮಾವು ಹಾಗೂ ಟೊಮೆಟೊ ಬೆಳೆ ಹಾಳಾಗಿದೆ.
ಬೀದರ್ ತಾಲೂಕಿನಲ್ಲಿ ಸರಾಸರಿ 19 ಮಿ.ಮೀ, ಭಾಲ್ಕಿಯಲ್ಲಿ 1.67 ಮಿ.ಮೀ, ಔರಾದ್ ನಲ್ಲಿ 11.23 ಮಿ.ಮೀ, ಬಸವಕಲ್ಯಾಣದಲ್ಲಿ 16.06 ಮಿ.ಮೀ, ಕಮಲನಗರದಲ್ಲಿ 17.17 ಮಿ.ಮೀ, ಹುಮನಾಬಾದ್ನಲ್ಲಿ 7.30 ಮಿ.ಮೀ, ಹುಲಸೂರುನಲ್ಲಿ 340 ಮಿ.ಮೀ ಹಾಗೂ ಚಿಟಗುಪ್ಪ ತಾಲುಕಿನಲ್ಲಿ 16 ಮಿ.ಮೀ ಮಳೆ ಸುರಿದಿದೆ. ಬೀದರ್ ನಗರದಲ್ಲಿ 11.20 ಮಿ.ಮೀ, ಜನವಾಡದಲ್ಲಿ 6 ಮಿ.ಮೀ, ಬಗದಲ್ನಲ್ಲಿ 22.40 ಮಿ.ಮೀ, ಬೀದರ್ ದಕ್ಷಿಣದಲ್ಲಿ 11 ಮಿ.ಮೀ, ಕಮಠಾಣದಲ್ಲಿ 25.20 ಮಿ.ಮೀ, ಮನ್ನಳ್ಳಿಯಲ್ಲಿ 38.20 ಮಿ.ಮೀ, ಭಾಲ್ಕಿ ತಾಲೂಕಿನ ಲಖನಗಾಂವದಲ್ಲಿ 7.40, ಸಾಯಿಗಾಂವದಲ್ಲಿ 2.60 ಮಿ.ಮೀ, ಬಸವಕಲ್ಯಾಣದಲ್ಲಿ 25.20 ಮಿ.ಮೀ, ಮಂಠಾಳ ಹಾಗೂ ಕೊಹಿನೂರಲ್ಲಿ 22 ಮಿ.ಮೀ, ಹುಮನಾಬಾದ್ ಪಟ್ಟಣದಲ್ಲಿ 14.70 ಮಿ.ಮೀ, ದುಬಲಗುಂಡಿಯಲ್ಲಿ 5 ಮಿ.ಮೀ, ಹಳ್ಳಿಖೇಡದಲ್ಲಿ 2.20 ಮಿ.ಮೀ, ಚಿಟಗುಪ್ಪ ಪಟ್ಟಣದಲ್ಲಿ ಮಳೆಸುರಿದಿದೆ. ಭಾರೀ ಮಳೆ ಸುರಿದ ಪರಿಣಾಮ ಜನ ಜೀವನ ಅಸ್ತವ್ಯಸ್ತವಾಗಿದೆ..