ಹುಬ್ಬಳ್ಳಿ ಐಟಿ ರೇಡ್ ನಡೆಸಿದ್ದು ಅಪಾರ ಪ್ರಮಾಣದ ಹಣ ಪತ್ತೆ ಆಗಿದೆ. ನಗದು ಹಣ ಎಣಿಕೆ ಮುಂದುವರಿಸಿದ್ದಾರೆ ಐಟಿ ಅಧಿಕಾರಿಗಳು. ಇದುವರೆಗೂ 2.02 ಕೋಟಿ ರೂಪಾಯಿ ನಗದು ಹಣ ಪತ್ತೆಯಾಗಿದೆ. ಇನ್ನೂ 10 ಲಕ್ಷಕ್ಕಿಂತ ಹೆಚ್ಚು ಹಣ ಸಿಗೋ ಸಾಧ್ಯತೆ ಇದೆ ಎನ್ನಲಾಗಿದೆ. ನೋಟು ಎಣಿಕೆ ಮುಂದುವರಿಸಿದ್ದಾರೆ ಸಿಬ್ಬಂದಿ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಮೊತ್ತದ ಹಣ ಪತ್ತೆ ಎನ್ನಲಾಗಿದೆ. ರಾಜಕೀಯ ಪಕ್ಷವೊಂದಕ್ಕೆ ಸೇರಿದ ಹಣ ಎಂಬ ಶಂಕೆಯೂ ವ್ಯಕ್ತವಾಗಿದೆ. ನಗದು ಸಂಪೂರ್ಣ ಎಣಿಕೆಯ ನಂತರ ತನಿಖೆ ಚುನಾವಣಾ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಕುಂದಗೋಳ ತಾಲೂಕಿನ ರಾಮನಕೊಪ್ಪ ಗ್ರಾಮದಲ್ಲಿ ನಡೆದಿರೋ ಘಟನೆ ಇದಾಗಿದ್ದು, ರಾಮನಕೊಪ್ಪದ ನಿಂಗಪ್ಪ ಜಾಟರ್ ಎಂಬುವರ ಮನೆಯಲ್ಲಿ ಹಣ ಪತ್ತೆಯಾಗಿದೆ.