
ಇತ್ತೀಚೆಗೆ ಗೋವಾದಲ್ಲಿ (Goa) ಅಂತಾರಾಷ್ಟ್ರೀಯ ಪ್ರವಾಸಿಗರ (Tourists) ಸಂಖ್ಯೆ ಗಣನೀಯವಾಗಿ ಕುಸಿತವಾಗಿದ್ದು, ಇದಕ್ಕೆ ಇಡ್ಲಿ ಸಾಂಬಾರ್ ಕಾರಣವಂತೆ. ಹೀಗಂತ ಗೋವಾದ ಬಿಜೆಪಿ ಶಾಸಕ ಮೈಕೆಲ್ ಲೋಬೋ (Michael lobo) ಹೇಳಿಕೆ ನೀಡಿದ್ದು ಚರ್ಚೆಗೆ ಕಾರಣವಾಗಿದೆ.

ಹೌದು, ಗೋವಾದ ಬೀಚ್ ಗಳಲ್ಲಿ (Goa beach) ಕೆಲವರು ಇಡ್ಲಿ ಸಾಂಬಾರ್ ಮಾರುತ್ತಿದ್ದಾರೆ. ಇತ್ತ ಬೆಂಗಳೂರಿನಿಂದ ಬಂದವರು ವಡಾ ಪಾವ್ ಮಾರುತ್ತಿದ್ದಾರೆ.ಇದರಿಂದಾಗಿ ಅಂತಾರಾಷ್ಚ್ರೀಯ ಪ್ರವಾಸಿಗರ ಸಂಖ್ಯೆ ಕುಸಿಯುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ರೀತ್ಯಾಗಿ ಪ್ರವಾಸಿಗರ ಸಂಖ್ಯೆ ಕುಸಿತಕ್ಕೆ ಎಲ್ಲರೂ ಹೊಣೆ ಎಂದು ಮೈಕೆಲ್ ಲೋಬೋ ಹೇಳಿದ್ದಾರೆ.ಇದರ ಜೊತೆಗೆ ಗೋವಾದಲ್ಲಿ ಕ್ಯಾಬ್ ಅಗ್ರೀಗೇಟರ್- ಟ್ಯಾಕ್ಸಿ ಅಪರೇಟರ್ ನಡುವಿನ ಸಮಸ್ಯೆ ಬಗೆಹರಿಸಬೇಕು.ಇಲ್ಲದಿದ್ದರೇ, ಗೋವಾದ ಪ್ರವಾಸೋದ್ಯಮ ಸಂಪೂರ್ಣ ಕುಸಿಯಲಿದೆ ಎಂದು ಮೈಕೆಲ್ ಲೋಬೋ ಹೇಳಿದ್ದಾರೆ.





