ಬ್ಯಾಂಕ್ಗಳಿಗೆ ವಂಚಿಸಿ ಓಡಿಹೋಗಿರುವ ಉದ್ಯಮಿ ಮೆಹುಲ್ ಚೋಸ್ಕಿ ವಿರುದ್ಧ ವಂಚನೆ ಪ್ರಕರಣ ರದ್ದುಪಡಿಸಿದ್ದ ಗುಜರಾತ್ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ್ದು, ಚೋಸ್ಕಿ ವಿರುದ್ಧ ಪ್ರಕರಣವನ್ನು ಮರು ಸ್ಥಾಪಿಸಿದೆ.
ಗುಜರಾತ್ ರಾಜ್ಯದ ಅಹಮದಾಬಾದ್ ಪೊಲೀಸ್ ಠಾಣೆಯಲ್ಲಿ ಚೋಸ್ಕಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ದಿಗ್ವಿಜಯ್ಸಿನ್ಹಾ ಹಿಮ್ಮತ್ಸಿನ್ಹಾ ಜಡೇಜಾ ಎಂಬವರು ನೀಡಿದ್ದ ದೂರಿನ ಮೇರೆಗೆ ವಂಚನೆ, ಪೋರ್ಜರಿ, ಕ್ರಿಮಿನಲ್ ಒಳಸಂಚು ಮತ್ತು ನಂಬಿಕೆದ್ರೋಹ ಆರೋಪದಡಿ ಪ್ರಕರಣ ದಾಖಲಾಗಿತ್ತು. ೩೦ ಕೋಟಿ ರೂಪಾಯಿ ಮೌಲ್ಯದ ಚಿನ್ನದ ಬಾರ್ನ್ನು ಚೋಸ್ಕಿ ವಾಪಸ್ ಕೊಡದೇ ಒಪ್ಪಂದ ಉಲ್ಲಂಘಿಸಿ ವಂಚಿಸಿದ್ದಾರೆ ಎಂದು ದೂರಲಾಗಿತ್ತು. ಚೋಸ್ಕಿ ಪತ್ನಿ ಪ್ರೀತಿ ವಿರುದ್ಧವೂ ಪ್ರಕರಣ ದಾಖಲಾಗಿತ್ತು.
ಆದರೆ ಇದು ಕ್ರಿಮಿನಲ್ ಅಪರಾಧ ಅಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದ ಗುಜರಾತ್ ಹೈಕೋರ್ಟ್ ೨೦೧೭ರಲ್ಲಿ ಎಫ್ಐಆರ್ ರದ್ದುಗೊಳಿಸಿ ಆದೇಶಿಸಿತ್ತು.
ಆದರೆ ಅಪರಾಧ ಸಿವಿಲ್ ಅಪರಾಧ ಆಗಿರಬಹುದು ಮತ್ತು ಈ ಪ್ರಕರಣದಲ್ಲಿ ಇದು ಸಿವಿಲ್ ಅಪರಾಧವೂ ಹೌದು ಮತ್ತು ಸಮಾನಾಗಿ ಕ್ರಿಮಿನಲ್ ಅಪರಾಧವೂ ಹೌದು ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜೀವ್ ಭಟ್ಟಿ ಅವರಿದ್ದ ಪೀಠ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.