2023ರ ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ರಜಾಕೀಯ ಚಟುವಟಿಕೆಗಳು ಗರಿಗೆದರಿದ್ದು ರಾಜಕೀಯ ಪಕ್ಷಗಳು ಮತದಾರರನ್ನ ತಮ್ಮತ್ತ ಸೆಳೆಯಲು ತಂತ್ರಗಾರಿಕೆ ಹೆಣೆಯುವುದರಲ್ಲಿ ನಿರತವಾಗಿದೆ.
ಇನ್ನು ಕಾಂಗ್ರೆಸ್ ವಿಚಾರಕ್ಕೆ ಬರುವುದಾದರೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಮೆರೆಯಲು ಅರ್ಜಿಯನ್ನ ಆಹ್ವಾನಿಸಿತ್ತು. ದಿಕ್ಕೆ ಪೂರಕವೆಂಬಂತೆ ಕಳೆದ ನವೆಂಬರ್ ತಿಂಗಳಲ್ಲಿ ಆಕಾಂಕ್ಷಿಗಳು ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಅರ್ಜಿ ಪ್ರಕ್ರಿಯೆ ನಂತರ ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚು ಬೇಡಿಕೆ ಕೇಳಿ ಬಂದಿದ್ದು 45 ಜನರು ಅರ್ಜಿ ಸಲ್ಲಿಸಿದ್ದಾರೆ.
ಗುರುವಾರ ಈ ಕುರಿತು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಕಾರ್ಯದರ್ಶಿ ಕರ್ನಾಟಕ ಪ್ರಭಾರಿ ಮಯೂರ್ ಜಯಕುಮಾರ್, ಕೆಪಿಸಿಸಿಯ ಸಯ್ಯದ್ ಅಹ್ಮದ್, ಕೆಪಿಸಿಸಿ ಕಾರ್ಯಧ್ಯಕ್ಷ ಧೃವನಾರಾಯಣ, ಮಾಜಿ ಸಚಿವ ಹೆಚ್ ಎಂ ರೇವಣ್ಣ ಬ್ಲಾಕ್ ಲೆವೆಲ್ ಕಾರ್ಯಕರ್ತರ ಅಭಿಪ್ರಾಯವನ್ನ ಸಂಗ್ರಹಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರದಿಂದ 11 ಜನ ಅಭ್ಯರ್ಥಿಗಳು, ಶಿಕಾರಿಪುರದಿಂದ 10, ಶಿವಮೊಗ್ಗ ನಗರ ವಿಧಾನ ಸಭಾ ಕ್ಷೇತ್ರದಿಂದ 12, ಭದ್ರಾವತಿ ಮತಕ್ಷೇತ್ರದಿಂದ ಮತ್ತು ಸೊರಬದಿಂದ 1, ಸಾಗರದ ಮತಕ್ಷೇತ್ರದಿಂದ 7, ತೀರ್ಥಹಳ್ಳಿಯ ಮತಕ್ಷೇತ್ರದಿಂದ 3 ಮಂದಿ ಕಾಂಗ್ರೆಸ್‌ನಿಂದ ಸ್ಪರ್ದೆ ಬಯಸಿ ಅರ್ಜಿ ಸಲ್ಲಿಸಿದ್ದಾರೆ.
ಈ ವೇಳೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪ್ರಸನ್ನಕುಮಾರ್‌ರನ್ನು ಅಭ್ಯರ್ಥಿ ಎಂದು ಗೋಷಿಸಬೇಕು ಎಂದು ಅವರ ಬೆಂಬಲಿಗರು ಘೋಷಣೆಯನ್ನ ಕೂಗಿ ಆಗ್ರಹಿಸಿದ್ದರು.
ಅಭಿಪ್ರಾಉಯ ಸಂಗ್ರಹಣೆ ಬಳಿಕ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದಲೂ ಅಭ್ಯರ್ಥಿಗಳಿಂದ ಡಿಕೆ ಶಿವಕುಮಾರ್ ಅರ್ಜಿ ಆಹ್ವಾನ ಮಾಡಿದ್ದರು. ಅದರಂತೆ ಪ್ರತಿ ಕ್ಷೇತ್ರದಿಂದ ಸಾಕಷ್ಟು ಜನ ಅರ್ಜಿ ಸಲ್ಲಿಸಿದ್ದಾರೆ. ಶಿವಮೊಗ್ಗದ ಏಳು ವಿಧಾನಸಭಾ ಕ್ಷೇತ್ರದಿಂದ 45 ಅರ್ಜಿಗಳನ್ನ ಸಲ್ಲಿಸಿದ್ದಾರೆ. ಎಲ್ಲರೂ ಟಿಕೆಟ್ ಆಕಾಂಕ್ಷಿಗಳಾಗಿದ್ದು. ಇಂದು ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ್ದು ಕೆಪಿಸಿಸಿ , ಎಐಸಿಸಿ ಪದಾಧಿಕಾರಿಗಳ ಎದುರು ಹಾಜರಾಗುದ್ದಾರೆ ಹಾಗೂ ಅವರ ಅಭಿಪ್ರಾಯಗಳನ್ನು ಪಡೆದು ಒಗ್ಗಟ್ಟಿನಿಂದ ಇರಲು ಮುಖಂಡರು ಸೂಚಿಸಿದ್ದಾರೆ. ಎಂದು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಈ ಸಭೆಗೆ ಪ್ರವೇಶ ಇರಲಿಲ್ಲ. ನಾವು ಯಾರಿಗೆ ಸೂಚನೆ ನೀಡಿದ್ದೆವೋ ಅವರು ಮಾತ್ರ ಬಂದು ಅಭಿಪ್ರಾಯ ಮಂಡಿಸಬೇಕಿತ್ತು. ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಹಿರಿಯ ಮುಖಂಡರ ಎದುರು ಹಾಜರಾಗಿ ಅಭಿಪ್ರಾಯ ತಿಳಿಸಿದ್ದಾರೆ. ಎಲ್ಲಾ ತಾಲೂಕುಗಳಿಗೂ ಸಮಯ ನಿಗದಿಪಡಿಸಲಾಗಿತ್ತು. ಬಹಳ ಮುಖ್ಯವಾಗಿ ಯಾರಿಗೆ ಅಭ್ಯರ್ಥಿ ಎಂದು ಘೋಷಣೆ ಮಾಡಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಬಿಜೆಪಿ ಸೋಲಿಸುವುದೇ ನಮ್ಮ ಧ್ಯೇಯ..! ಶಿವಮೊಗ್ಗದ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಬಾರಿ ಕಾಂಗ್ರೆಸ್ ಒಂದು ಸ್ಥಾನವನ್ನು ಪಡೆದಿತ್ತು. ಈ ಬಾರಿ ಏಳು ಸ್ಥಾನಗಳನ್ನು ಪಡೆಯಲು ಪೂರಕ ವಾತಾವರಣ ಇದೆ ಶಿವಮೊಗ್ಗದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವಂತೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.