ರಾಮನಗರದ (Ramanagar) ಗೌಡಗೆರೆ ಚಾಮುಂಡೇಶ್ವರಿ ದೇವಾಲಯಕ್ಕೆ (Chamundi temple) ನಟ ದರ್ಶನ್ (Actor darshan) ತಾಯಿ ಮೀನಾ ತೂಗುದೀಪ್ (Meena tugudeepa) ಭೇಟಿ ನೀಡಿದ್ದಾರೆ.ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿರೂ ಚಾಮುಂಡೇಶ್ವರಿ ದೇವಾಲಯ ಕ್ಷೇತ್ರದಲ್ಲಿ ಪವಾಡ ನಡೆಯುತ್ತದೆ ಎಂಬ ಪ್ರತೀತಿ ನಂಬಿಕೆಯಿದೆ. ಹೀಗಾಗಿ ಬಸಪ್ಪನ ಆಶೀರ್ವಾದ ದರ್ಶನ್ ತಾಯಿ ಪಡೆದಿದ್ದಾರೆ.

ತಮಗೆ ಬಂದೊದಗಿರುವ ಕಷ್ಟಗಳ ನಿವಾರಣೆ ಮಾಡುವಂತೆ ಮೀನಾ ತೂಗುದೀಪ್ ದೇವರ ಮೊರೆಹೋಗಿದ್ದಾರೆ. ಈ ವೇಳೆ ಮೀನಾ ತೂಗುದೀಪ್ ಗೆ ದೇವಾಲಯ ಆಡಳಿತ ಮಂಡಳಿಯಿಂದ ಗೌರವ ನೀಡಿ ಆಶೀರ್ವದಿಸಿದೆ.
ಈ ವೇಳೆ ಮಾತನಾಡಿದ ಮೀನ ತೂಗುದೀಪ ಅವರು ತಾಯಿ ಚಾಮುಂಡೇಶ್ವರಿ ಈ ಜಾಗದಲ್ಲಿ ನೆಲೆಸಿದ್ದಾಳೆ.ಇಲ್ಲಿ ಎಲ್ಲಾ ಕಡೆ ಪಾಸಿಟಿವ್ ಎನರ್ಜಿ ಇದೆ.ಹಾಗಾಗಿ ಬಂದು ದರ್ಶನ ಪಡೆದಿದ್ದೇನೆ.ಇಲ್ಲಿಗೆ ಬರುವ ಎಲ್ಲಾ ಭಕ್ತರಿಗೂ ಚಾಮುಂಡೇಶ್ವರಿ ಒಳ್ಳೆಯದು ಮಾಡಲಿ ಮೀನಾ ತೂಗುದೀಪ್ ಹೇಳಿದ್ದಾರೆ.