• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ವಿದೇಶದಲ್ಲಿ ಮರಣ ದಂಡನೆಗೆ ಮಗಳು ಗುರಿ: ತಾಯಿ ಭೇಟಿಗೆ ವಿದೇಶಾಂಗ ಇಲಾಖೆ ತಡೆ: ಕಾರಣ ಏನು ನೋಡಿ!

ಪ್ರತಿಧ್ವನಿ by ಪ್ರತಿಧ್ವನಿ
December 2, 2023
in Top Story, ದೇಶ, ವಿದೇಶ
0
ವಿದೇಶದಲ್ಲಿ ಮರಣ ದಂಡನೆಗೆ ಮಗಳು ಗುರಿ: ತಾಯಿ ಭೇಟಿಗೆ ವಿದೇಶಾಂಗ ಇಲಾಖೆ ತಡೆ: ಕಾರಣ ಏನು ನೋಡಿ!
Share on WhatsAppShare on FacebookShare on Telegram

ತನ್ನ ಪಾರ್ಟ್ನರ್‌ ಅನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಯೆಮೆನ್ ದೇಶದಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಕೇರಳದ ನರ್ಸ್‌ ನಿಮಿಷಾ ಪ್ರಿಯ ಅವರ ತಾಯಿ ಯೆಮೆನ್ ಗೆ ಹೋಗಲು ಅನುಮತಿ ನೀಡಲು ವಿದೇಶಾಂಗ ಸಚಿವಾಲಯ ನಿರಾಕರಿಸಿದೆ.

ADVERTISEMENT

ಏಕೆಂದರೆ ಪ್ರಸ್ತುತ ಭಾರತೀಯ ರಾಜತಾಂತ್ರಿಕರು ಅಲ್ಲಿ ಇಲ್ಲ. ಹಾಗಾಗಿ ಭದ್ರತಾ ದೃಷ್ಟಿಯಿಂದ ಯೆಮೆನ್‌ಗೆ ಹೋಗುವುದು ಸರಿಯಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಸಂತ್ರಸ್ತ ವ್ಯಕ್ತಿಯ ಕುಟುಂಬಸ್ಥರನ್ನು ಭೇಟಿಯಾಗಿ ಮಾತುಕತೆ ನಡೆಸಿ ಮಗಳ ಮರಣ ದಂಡನೆ ಶಿಕ್ಷೆಯನ್ನು ತಪ್ಪಿಸಬೇಕೆಂಬ ಕನಸಿನಲ್ಲಿ ನಿಮಿಷಾ ತಾಯಿ ಇದ್ದಾರೆ. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ನಮಗೆ ಸಹಾಯ ಮಾಡದಿದ್ದರೆ ನಿಮಿಷಾರನ್ನು ಉಳಿಸಲು ನಮಗೆ ಸಾಧ್ಯವಿಲ್ಲ ಎಂದು ಅವರ ವಕೀಲರು ಹೇಳಿದ್ದಾರೆ.

ಅದಾಗ್ಯೂ, ನಿಮಿಷಾ ತಾಯಿಯನ್ನು ಯೆಮನ್‌ಗೆ ಕಳುಹಿಸಲು ವಿದೇಶಾಂಗ ಇಲಾಖೆ ನಿರಾಕರಿಸಿದೆ.

ಯೆಮನ್‌ನಲ್ಲಿ ಅಂತರ್ಯುದ್ಧದ ಕಾರಣ, ಭಾರತೀಯ ರಾಯಭಾರ ಕಚೇರಿಯನ್ನು ಜಿಬೌಟಿಗೆ ಸ್ಥಳಾಂತರಿಸಲಾಗಿದೆ. ಯಮನ್‌ನ ಹೊಸ ವ್ಯವಸ್ಥೆಯೊಂದಿಗೆ ನಾವು ಯಾವುದೇ ಅಧಿಕೃತ ಸಂಬಂಧವನ್ನು ಹೊಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸುರಕ್ಷತೆಯನ್ನು ಖಾತರಿಪಡಿಸಲು ಸಾಧ್ಯವಿಲ್ಲ. ಯೆಮೆನ್‌ಗೆ ಹೋಗಲು ನಿಮಗೆ ಅನುಮತಿಸಲಾಗುವುದಿಲ್ಲ ಎಂದು ವಿದೇಶಾಂಗ ಸಚಿವಾಲಯವು ಹೇಳಿದೆ.

ನಿಮಿಷಾ ಪ್ರಿಯಾ ಅವರು ತನ್ನ ವ್ಯಾಪಾರಿ ಪಾರ್ಟ್ನರ್‌ ನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಯೆಮನ್‌ ಜೈಲಿನಲ್ಲಿದ್ದಾರೆ. ಅಲ್ಲಿನ ನ್ಯಾಯಾಲಯ ಆಕೆಗೆ ಮರಣದಂಡನೆ ವಿಧಿಸಿದೆ.

ಯೆಮೆನ್ ಪ್ರಜೆಯಾದ ತಲಾಲ್ ಅಬ್ದೋ ಮೆಹದಿ ಜೊತೆ ಆಸ್ಪತ್ರೆಯನ್ನು ಆರಂಭಿಸಿದ್ದ ನಿಮಿಷಾ, ಅರಿವಳಿಕೆ ಇಂಜೆಕ್ಷನ್‌ ಕೊಟ್ಟು ಆತನ ಕೊಲೆ ಮಾಡಿದ್ದರು.

ವ್ಯವಹಾರ ಸಂಬಂಧಿಸಿ ತಲಾಲ್ ಮತ್ತು ನಿಮಿಷಾ ನಡುವೆ ಉಂಟಾದ ಮನಸ್ತಾಪದಿಂದ, ತಲಾಲ್‌ ಆಕೆ ಪಾಸ್ ಪೋರ್ಟ್ ಕಸಿದುಕೊಂಡಿದ್ದ.  ತನ್ನ ಪಾಸ್‌ಪೋರ್ಟ್ ಪಡೆದು ಭಾರತಕ್ಕೆ ಹಿಂತಿರುಗಬೇಕೆಂದು ಬಯಸಿ, ತಲಾಲ್ ಗೆ ಅರಿವಳಿಕೆ ಚುಚ್ಚುಮದ್ದನ್ನು ನೀಡಿದ್ದರು.‌ ಆದರೆ ತಲಾಲ್ ಮೃತಪಟ್ಟಿದ್ದು, ನಿಮಿಷಾ ಮತ್ತೊಬ್ಬ ವ್ಯಕ್ತಿಯ ಸಹಾಯದಿಂದ ತಲಾಲ್ ಶವವನ್ನು ವಿಲೇವಾರಿ ಮಾಡಿದ್ದಳು.

 ನಾಲ್ಕು ದಿನಗಳ ನಂತರ ವಿಷಯ ಬೆಳಕಿಗೆ ಬಂದಿದೆ. ನಿಮಿಷಾಳಿಗೆ ಮರಣದಂಡನೆಯನ್ನು ವಿಧಿಸಿದ ನ್ಯಾಯಾಲಯ, ಆಕೆಯ ಸಹಚರನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.

Tags: diplomaticMEANimisha PriyaTravelYemen
Previous Post

ಪ್ರತಿಕೂಲ ಹವಾಮಾನ: ದೆಹಲಿಯ 20 ವಿಮಾನಗಳ ಮಾರ್ಗ ಬದಲು

Next Post

Assembly Live Results

Related Posts

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?
Top Story

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

by ಪ್ರತಿಧ್ವನಿ
April 26, 2026
0

ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯ ಹಿಲ್ಟನ್ ಹೋಟೆಲ್‌ನಲ್ಲಿ ನಡೆದ ಹೈಪ್ರೊಫೈಲ್ ವರದಿಗಾರರ ಔತಣಕೂಟದ ವೇಳೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಹತ್ಯೆ ಯತ್ನ ನಡೆದಿದೆ ಎಂಬ...

Read moreDetails
150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

April 26, 2026
ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ

April 26, 2026
ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

April 25, 2026
ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

April 24, 2026
Next Post
Assembly Live Results

Assembly Live Results

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada