
ಕಾಂಗ್ರೆಸ್ನಲ್ಲಿ ಎಂಎಲ್ಸಿ ಸ್ಥಾನಕ್ಕೆ ಭಾರೀ ಪೈಪೋಟಿ ಉಂಟಾಗಿದೆ. ಸಿಎಂ ಪುತ್ರ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯಗೆ ಪರಿಷತ್ ಸ್ಥಾನದ ಟಿಕೆಟ್ ಫಿಕ್ಸ್ ಆಗಿದೆ ಎನ್ನುವುದನ್ನು ಯತೀಂದ್ರ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ.

MLC ಸ್ಥಾನ ಕನ್ಫರ್ಮ್ ಆಗಿರೋದನ್ನ ಒಪ್ಪಿಕೊಂಡ ಯತೀಂದ್ರ ಸಿದ್ದರಾಮಯ್ಯ, ನಾನು ಎಂಎಲ್ಸಿ ಆಗಿ ಶಾಸಕನಾಗ್ತೀನಿ, ಅನುದಾನ ಹಾಕೊಡ್ತೀನಿ. ನಮ್ಮ ತಂದೆ ಬಳಿ ಹೇಳಿ ಅವರಿಂದಲೂ ಅನುದಾನ ಕೊಡಿಸ್ತೀನಿ ಎಂದು ಟಿ ನರಸೀಪುರದಲ್ಲಿ ಡಾ ಯತೀಂದ್ರ ಸಿದ್ದರಾಮಯ್ಯ ಬಹಿರಂಗವಾಗಿ ಹೇಳಿದ್ದಾರೆ.

ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಪರ ಪ್ರಚಾರಕ್ಕೆ ಆಗಮಿಸಿದ್ದ ಯತೀಂದ್ರ ಸಿದ್ದರಾಮಯ್ಯ ಬಳಿ ಶಾಲೆಗೆ ಅನುದಾನ ಬಿಡುಗಡೆ ಮಾಡಿಸಿ ಕೊಡುವಂತೆ ಶಿಕ್ಷಕಿ ಮನವಿ ಮಾಡಿದರು. ಈ ವೇಳೆ ಈ ವೇಳೆ ನಾನು ಎಂಎಲ್ಸಿ ಆಗಿ ಶಾಸಕನಾಗ್ತಿನಿ ಎಂದಿದ್ದಾರೆ.

ಶಾಸಕರ ಅನುದಾನದಲ್ಲಿ ಹಣ ಹಾಕುತ್ತೇನೆ. ನಮ್ಮ ತಂದೆಯವರ ಕ್ಷೇತ್ರಕ್ಕೆ ಶಾಲೆ ಬರುವ ಕಾರಣದಿಂದ ಅವರ ಬಳಿಯೂ ಮಾತನಾಡಿ ಅನುದಾನ ಕೊಡಿಸ್ತೇನೆ ಎಂದು ಯತೀಂದ್ರ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಈ ಮೂಲಕ ಎಂಎಲ್ಸಿ ಆಗ್ತೀನಿ ಎಂದು ಸುಳಿವು ನೀಡಿದ್ದಾರೆ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ