ಈ ಹಿಂದಿನ ರೀತಿಯಲ್ಲಿ ನಕ್ರಾ ಮಾಡಿದ್ರೆ ಜೈಲಿಗೆ ಹೋಗ್ತಾಯಾ ಹುಷಾರ್ ಎಂದು ಚಿಂತಕ ಚರ್ಕವರ್ತಿ ಸೂಲಿಬೆಲೆಗೆ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಎಚ್ಚರಿಕೆ ನೀಡಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮಾಡಿದಂತೆ ಗಲಾಟೆ ಮಾಡಿದ್ರೆ ಜೈಲು ಪಾಲಾಗ್ತೀರಾ ಹುಷಾರ್ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಅವರಿಗೆ ಕೈಗಾರಿಕಾ ಸಚಿವ ಎಂಬಿ ಪಾಟೀಲ್ (Minister MB Patil) ಎಚ್ಚರಿಕೆನ ನೀಡಿದ್ದಾರೆ. ಈ ಹಿಂದೆ ಮಾಡಿದಂಗೆ ನಾಟಕ ಮಾಡಿದ್ರೆ ಜೈಲು ಪಾಲಾಗುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ. ಇಂದು ವಿಜಯಪುರ (Vijayapura) ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂಬಿ ಪಾಟೀಲ್, ರಾಜ್ಯದಲ್ಲಿ ಹಿಟ್ಲರ್ ಸರಕಾರ ಇದೆ ಎಂದಿದ್ದ ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ತಿರುಗೇಟು ನೀಡಿದರು.
ಈ ಹಿಂದೆ ಹಿಜಾಬ್ (Hijab), ಹಲಾಲ್ (Halal) ಎಂದು ಗಲಾಟೆ ಮಾಡಿದ್ದೀರಿ. ಇದಕ್ಕೆಲ್ಲ ಬ್ರೇಕ್ ಹಾಕುತ್ತೇವೆ. ಇನ್ನು ಮುಂದೆ ಅದೆಲ್ಲ ನಡೆಯಲ್ಲ. ಏನಾದರೂ ಗಲಾಟೆ ಮಾಡಿದರೆ ಜೈಲು ಕಂಬಿ ಏಣಿಸ್ತೀರಾ ಹುಷಾರ್ ಎಂದು ಹೇಳಿದರು.