ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು (Mysuru Dasara) ಕಣ್ತುಂಬಿಕೊಳ್ಳುತ್ತಿರುವ ಪ್ರತಿಯೊಬ್ಬರಿಗೂ ನಾಡದೇವತೆ ಚಾಮುಂಡೇಶ್ವರಿ ಒಳ್ಳೆಯದು ಮಾಡಲಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM D.K. Shivakumar) ಹಾರೈಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶ-ವಿದೇಶಗಳಿಂದ ಆಗಮಿಸಿರುವ ಹಾಗೂ ವೀಕ್ಷಿಸುತ್ತಿರುವ ಸಮಸ್ತ ಜನತೆಯ ದುಃಖ, ಸಂಕಷ್ಟಗಳು ನಿವಾರಣೆಯಾಗಿ ತಾಯಿಯ ಅನುಗ್ರಹ ಲಭಿಸಲಿ ಎಂದು ಆಶಿಸಿದರು.
ಯುವಜನತೆಯ ರೀಲ್ಸ್ ಮೂಲಕ ವಿಶ್ವಮಟ್ಟದಲ್ಲಿ ದಸರಾ ವೈಭವ
ಇಂದಿನ ಯುವಕ-ಯುವತಿಯರು ಸಾಮಾಜಿಕ ಜಾಲತಾಣಗಳಲ್ಲಿ ಆಕರ್ಷಕ ರೀಲ್ಸ್‌ಗಳನ್ನು ರಚಿಸುವ ಮೂಲಕ ಮೈಸೂರು ದಸರಾದ ಕೀರ್ತಿಯನ್ನು ಇಡೀ ದೇಶ-ವಿದೇಶಗಳಿಗೆ ಪರಿಚಯಿಸುತ್ತಿದ್ದಾರೆ. ಈ ಬಾರಿಯ ಉತ್ಸವಕ್ಕೆ ಜನಸಾಗರವೇ ಹರಿದುಬಂದಿದ್ದು, ನಗರದ ಎಲ್ಲ ಹೋಟೆಲ್ ಕೊಠಡಿಗಳು ಸಂಪೂರ್ಣ ಭರ್ತಿಯಾಗಿವೆ. ದೂರದೂರುಗಳಿಂದ ಬಂದ ಹಲವರಿಗೆ ವಸತಿ ಸಿಗುತ್ತಿಲ್ಲ ಎಂಬ ಮಾಹಿತಿ ಇದೆ. ಇಷ್ಟೊಂದು ಜನಸಂದಣಿ ಇದ್ದರೂ ಎಲ್ಲಿಯೂ ಸಂಚಾರ ದಟ್ಟಣೆ ಉಂಟಾಗದಂತೆ ಪೊಲೀಸ್ ಇಲಾಖೆಯು ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಏರ್ ಶೋ, ಕಂಬಳ ಯಶಸ್ವಿ: ಸಹಕರಿಸಿದ ಎಲ್ಲರಿಗೂ ಧನ್ಯವಾದ
ಈ ಬಾರಿ ಆಯೋಜಿಸಲಾಗಿದ್ದ ಏರ್ ಶೋ ಹಾಗೂ ಕಂಬಳ ಕಾರ್ಯಕ್ರಮಗಳು ಅದ್ಭುತವಾಗಿ ಯಶಸ್ವಿಯಾಗಿವೆ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಿಳಿಸಿದ್ದಾರೆ. ಇಂತಹ ಬೃಹತ್ ಕಾರ್ಯಕ್ರಮಗಳ ಸಾರ್ಥಕತೆಗೆ ಸಾರ್ವಜನಿಕರ ಸಹಕಾರ ಅತ್ಯಂತ ಮುಖ್ಯ. ಇನ್ನು ಮುಂದೆ ನಡೆಯಲಿರುವ ಕಾರ್ಯಕ್ರಮಗಳನ್ನು ವೀಕ್ಷಿಸಿ ಜನತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು. ಈ ಮಹೋತ್ಸವವನ್ನು ಯಶಸ್ವಿಯಾಗಿ ಪ್ರಚಾರ ಮಾಡುತ್ತಿರುವ ಮಾಧ್ಯಮ ಮಿತ್ರರಿಗೂ ಶುಭವಾಗಲಿ ಎಂದು ಸಿಎಂ ತಿಳಿಸಿದರು.
SHOCKING : ಜೇಬಿನಲ್ಲಿದ್ದ ಮೊಬೈಲ್ ಏಕಾಏಕಿ ಬ್ಲಾಸ್ಟ್ : ಬೈಕ್‌ನಿಂದ ಬಿದ್ದು ವ್ಯಕ್ತಿ ಸಾ**ವು





