ಬೆಂಗಳೂರು: ಮಾ: 21: ನನಗೆ ಧರ್ಮ, ದೇವರು, ಮಠಗಳ ಬಗ್ಗೆ ಗೌರವವಿದೆ. ಸಮಾಜವನ್ನು ಶಾಂತವಾಗಿ ಇರಲಿ ಎಂದು ಸರ್ಕಾರ ಮಾಡದ ಕೆಲಸವನ್ನು ಮಠಗಳು ಮಾಡುತ್ತಿವೆ. ನಮ್ಮ ಮಠದ ಶ್ರೀಗಳು ಆಶೀರ್ವಾದ ಮಾಡಿ ಎಂದು ಕೇಳಿಕೊಂಡಿದ್ದೇನೆ, ಬೇಡಿಕೊಂಡಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆದಿಚುಂಚನಗಿರಿ ಮಠಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ನನಗೆ ಶ್ರೀಗಳು ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ನನಗೆ ಇದೆ. ಉರಿಗೌಡ, ನಂಜೇಗೌಡ ವಿಚಾರದ ಹೋರಾಟಕ್ಕೆ ನೇತೃತ್ವ ವಹಿಸುವಂತೆ ಕೇಳಿದ್ದೇನೆ. ಖಂಡಿತವಾಗಿ ಅವರು ನೇತೃತ್ವ ವಹಿಸಬೇಕು. ಒಪ್ಪಿಕೊಳ್ಳೋದು ಬಿಡುವುದರ ಬಗ್ಗೆ ಪ್ರಶ್ನೆ ಇಲ್ಲ. ಆದ್ರೆ ಈ ಸಮಾಜದ ಸ್ವಾಭಿಮಾನ ಉಳಿಸಬೇಕು ಅಂದರೆ ಶ್ರೀಗಳು ನೇತೃತ್ವ ವಹಿಸಿಕೊಳ್ಳುವುದು ಅವರ ಜವಾಬ್ದಾರಿ ಎಂದು ಹೇಳಿದ್ದಾರೆ.
ಅವನ್ಯಾವನೋನನ್ನು ಕರೆದು ಮಾತನಾಡುವುದು ಸೂಕ್ತ ಅಲ್ಲ..!
ಚುಂಚನಗಿರಿ ಶ್ರೀಗಳು ಮಾತ್ರವಲ್ಲ ಹಿಂದೂ ಧರ್ಮದ ಶ್ರೀಗಳನ್ನು ಒಟ್ಟಿಗೆ ತೆಗೆದುಕೊಳ್ಳಬೇಕು. ರಾಷ್ಟ್ರ ದ್ರೋಹಿ, ಸಮಾಜ ದ್ರೋಹಿ ವಿರುದ್ಧ ಶ್ರೀಗಳು ಹೋರಾಟ ಮಾಡಬೇಕು. ಅವನ್ಯಾವನೋನನ್ನು ಕರೆದು ಮಾತನಾಡುವುದು ಸೂಕ್ತ ಅಲ್ಲ.ಮಾತನಾಡುವ ಅವಶ್ಯಕತೆ ಇಲ್ಲ ಎಂದು ಮುನಿರತ್ನ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ಒಕ್ಕಲಿಗರ ಸಮಾಜ ದೊಡ್ಡ ಸಮಾಜ.. ಭಿಕ್ಷೆ ಬೇಡುವ ಸಮಾಜವಲ್ಲ
ಒಕ್ಕಲಿಗರ ಸಮಾಜ ದೊಡ್ಡ ಸಮಾಜ, ಭಿಕ್ಷೆ ಬೇಡುವ ಸಮಾಜವಲ್ಲ. ನಮ್ಮ ಛಲವಿದೆ ಸ್ವಾಭಿಮಾನವಿದೆ, ಯಾರಿಗೆ ಉತ್ತರ ಕೊಡಬೇಕು, ಯುದ್ಧ ಇವತ್ತಿನ ಕಾಲದಿಂದ ಇಲ್ಲ ದೇವಾನು ದೇವರುಗಳು ಯುದ್ಧ ಸೃಷ್ಟಿ ಮಾಡಿದ್ದಾರೆ. ಬಾಣ-ಬಿರುಸು, ಮಲ್ಲಯುದ್ಧ ಎಲ್ಲವನ್ನೂ ಸೃಷ್ಟಿ ಮಾಡಿದ್ದಾರೆ. ಎಲ್ಲಾ ರೀತಿಯ ಯುದ್ಧ ಇರುವಾಗ ಹಿಂಬಾಲಕರನ್ನು ಬೇಡುವ ಒಕ್ಕಲಿಗರ ಸಮಾಜವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.